ಕಿನ್ನಿಗೋಳಿಯಲ್ಲಿ ಯಕ್ಷ ಗಾನಸಂಭ್ರಮ

ಕಿನ್ನಿಗೋಳಿ: ಯಕ್ಷಗಾನ ಕಲೆಯು ಸಾಹಿತ್ಯ, ಸಂಸ್ಕೃತಿಯ ನೆಲೆವೀಡಾಗಿದ್ದು ರಂಗದಲ್ಲಿ ಕಾಣಿಸಿಕೊಳ್ಳುವ ಎಲ್ಲ ಕ್ರಿಯೆಗಳಿಗೂ ಗಾನವೇ ಉಗಮ ಸ್ಥಾನವಾಗಿದೆ. ಎಂದು ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಅಧ್ಯಕ್ಷ ಹರಿ ನಾರಾಯಣದಾಸ ಆಸ್ರಣ್ಣ ಹೇಳಿದರು.
ಎಂದು ಹೇಳಿದರು.
ಭಾನುವಾರ ಕಿನ್ನಿಗೋಳಿ ನೇಕಾರ ಸೌಧದಲ್ಲಿ ಸಜ್ಜನ ಬಂದುಗಳ ಸಂಯೋಜನೆಯಲ್ಲಿ ನಡೆದ ಯಕ್ಷ ಗಾನಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ಹವ್ಯಾಸಿ ಯಕ್ಷಗಾನ ಹಿಮ್ಮೇಳ ಕಲಾವಿದ ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ ಹಾಗೂ 75 ವರ್ಷಗಳಿಂದ ಯಕ್ಷಗಾನ ಸಂಘಟನೆ ನಡೆಸಿಕೊಂಡು ಬರುತ್ತಿರುವ ಪೆರ್ಮುದೆ ಶ್ರೀ ಶಾರದ ಯಕ್ಷಗಾನ ಮಂಡಳಿಯನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಕಟೀಲು ದೇವಳ ಅರ್ಚಕ ವೆಂಕಟರಮಣ ಆಸ್ರಣ್ಣ, ಕಿನ್ನಿಗೋಳಿ ದೇನಾ ಬ್ಯಾಂಕ್ ಶಾಖಾ ಪ್ರಭಂದಕ ಕೃಷ್ಣಪ್ರಸಾದ್, ಗೋಪಾಲ ಶೆಟ್ಟಿಗಾರ್ ಗೋಳಿಜೋರ , ಪತ್ರಕರ್ತ ರಘುನಾಥ ಕಾಮತ್ ಉಪಸ್ಥಿತರಿದ್ದರು.
ನಂತರ ಬಲಿಪ ನಾರಾಯಣ ಭಾಗವತ ಹಾಗೂ ವಾದಿರಾಜ ಕಲ್ಲೂರಾಯರ ನೇತ್ರತ್ವದಲ್ಲಿ ತೆಂಕು ಹಾಗೂ ಬಡಗುತಿಟ್ಟಿನ ಹಿಮ್ಮೇಳನದ ಯಕ್ಷ ಗಾನಸಂಭ್ರಮ ಕಾರ್ಯಕ್ರಮ ನಡೆಯಿತು.

Kinnigoli-16101404 Kinnigoli-16101405 Kinnigoli-16101406 Kinnigoli-16101407 Kinnigoli-16101408

Comments

comments

Comments are closed.

Read previous post:
Kinnigoli-16101403
ಕಿನ್ನಿಗೋಳಿ ಮಾರುಕಟ್ಟೆ ಮೀನು ಮಾರಾಟ ಸ್ಥಗಿತ

ಕಿನ್ನಿಗೋಳಿ: ಕಳೆದ ಎರಡು ವಾರದ ಹಿಂದೆಯಷ್ಟೇ ಉದ್ಘಾಟನೆಗೊಂಡ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರುಕಟ್ಟೆಯಲ್ಲಿ  ಮಾರಾಟಗಾರರ ಜಾಗದ ತಕರಾರು ಸಮಸ್ಯೆ ಬಂದ ಹಿನ್ನಲೆಯಲ್ಲಿ ಬುಧವಾರ ಮೀನು ಮಾರಾಟ ಸ್ಥಗಿತಗೊಳಿಸಿ...

Close