ಪಕ್ಷಿಕೆರೆ ಚರ್ಚ್ ಸ್ವರ್ಣ ಮಹೋತ್ಸವ

ಕಿನ್ನಿಗೋಳಿ: ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದ ವಾರ್ಷಿಕ ಹಬ್ಬ, ಸಾಮೂಹಿಕ ಮದುವೆ ಸಂಭ್ರಮ ಹಾಗೂ ಸ್ವರ್ಣ ಮಹೋತ್ಸವ, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಅ.19ರಿಂದ ಅ.28ರವರೆಗೆ ನಡೆಯಲಿದೆ ಎಂದು ಪಕ್ಷಿಕೆರೆ ಚರ್ಚ್ ಧರ್ಮ ಗುರು ಫಾ. ಆಂಡ್ರ್ಯೂ ಲಿಯೋ ಡಿಸೋಜ ಬುಧವಾರ ಕಿನ್ನಿಗೋಳಿ ಅಭಿನಂದನಾ ಹೋಟೇಲ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅ.19ರಂದು ಧ್ವಜಾರೋಹಣ, ಚರ್ಚ್ ವಿಸ್ತರಣಾ ಭಾಗ ಉದ್ಘಾಟನೆ, ನೊವೆನಾ ಪ್ರಾರಂಭ, ಊರ ಪರವೂರ ನಾಗರೀಕರಿಂದ ಪರಿಸರ ಸ್ವಚ್ಚತಾ ಕಾರ್ಯಕ್ರಮ, ವಿವಿಧ ಸಂಘ ಸಂಸ್ಥೆಗಳ ನೇತ್ರತ್ವದಲ್ಲಿ ಎ.ಜೆ. ಆಸ್ಪತ್ರೆ ಮಂಗಳೂರು ಮತ್ತು ಮುಕ್ಕ ಶ್ರೀನಿವಾಸ ಆಸ್ಪತ್ರೆಯ ವೈದ್ಯಾಧಿಕಾರಿಗಳಿಂದ ಸಹಬಾಗಿತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸಾರ್ವಜನಿಕರಿಂದ ರಕ್ತದಾನ ಶಿಬಿರ ಜರಗಲಿದೆ.
ಅ.20ರಿಂದ ಅ.25ರವರೆಗೆ ಫಾ. ಬೊನೆವೆಂಚರ್ ರೊಡ್ರಿಗಸ್ ಹಾಗೂ ಫಾ. ಮೆಲ್ವಿನ್ ನೊರೊನ್ಹಾ ಅವರಿಂದ ಪ್ರತಿ ದಿನ ವಿಶೇಷ ಧ್ಯಾನ ಕೂಟ ನಡೆಯಲಿದೆ..
ಅ.26ರಂದು ಕಿನ್ನಿಗೋಳಿ ಚರ್ಚ್‌ನಿಂದ ಪಕ್ಷಿಕೆರೆ ಚರ್ಚ್‌ವರೆಗೆ ಹೊರೆಕಾಣಿಕೆ ಮೆರವಣಿಗೆ, ದಿವ್ಯ ಬಲಿ ಪೂಜೆ, ಪರಮ ಪ್ರಸಾದ ಮೆರವಣಿಗೆ ಹಾಗೂ ಚಿಕ್ಕಮಗಳೂರು ಧರ್ಮ ಕೇಂದ್ರದ ಫಾ. ರೋನಾಲ್ಡ್ ಕರ್ಡೋಜಾ ಪ್ರವಚನ ನೀಡಲಿದ್ದಾರೆ.
ಅ.27ರಂದು ಸಂತ ಜೂದರ ಪವಾಡ ಪ್ರತಿಮೆಯ ಮೆರವಣಿಗೆ, ದಿವ್ಯ ಬಲಿಪೂಜೆ, ನೊವೆನಾ ಪ್ರಾರ್ಥನೆ ಹಾಗೂ ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ. ವಿನ್ಸೆಂಟ್ ಮೊಂತೆರೊ ಪ್ರವಚನ ನೀಡಲಿದ್ದಾರೆ.
ಅ.28ರಂದು ವಾರ್ಷಿಕ ಹಬ್ಬ, ಸ್ವರ್ಣ ಮಹೋತ್ಸವ ಹಾಗೂ ಸಾಮೂಹಿಕ ಮದುವೆ ನಡೆಯಲಿದ್ದು ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ವಂ. ಡಾ. ಎಲೋಷಿಯಸ್ ಪಾವ್ಲ್ ಡಿಸೋಜ ಪೂಜೆ ಹಾಗೂ ಧಾರ್ಮಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೇವದಾಸ್ ಕಾಫಿಕಾಡ್ ವಿರಚಿತ ಪೋಡೊಡ್ಚಿ ಯಾನುಲ್ಲೆ ತುಳು ನಾಟಕ ಪ್ರರ್ದಶನಗೊಳ್ಳಲಿದೆ. ಎಂದು ತಿಳಿಸಿದರು
ಈ ಸಂದರ್ಭ ಪಕ್ಷಿಕೆರೆ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ವಿನ್ಸೆಂಟ್ ಡಿಸೋಜ, ಮತ್ತು ಮಾಕ್ಸಿಂ ಸಲ್ಡಾನ್ಹ ಉಪಸ್ಥಿತರಿದ್ದರು.

ಪಕ್ಷಿಕೆರೆ ಚರ್ಚ್ ಸ್ವರ್ಣ ಮಹೋತ್ಸವ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಚರ್ಚ್ ವತಿಯಿಂದ ಅ. 22ಬುಧವಾರ ಬೆಳಿಗ್ಗೆ 10ಗಂಟೆಗೆ ಸಾರ್ವಜನಿಕರಿಗಾಗಿ ಗೂಡುದೀಪ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು ಆಸಕ್ತರು ತಮ್ಮ ಹೆಸರನ್ನು ಅ.21ರೊಳಗೆ ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದ ಕಛೇರಿಯಲ್ಲಿ ನೋಂದಾಯಿಸಬೇಕು.

Pakshikere-16101401

Comments

comments

Comments are closed.

Read previous post:
Kinnigoli-16101408
ಕಿನ್ನಿಗೋಳಿಯಲ್ಲಿ ಯಕ್ಷ ಗಾನಸಂಭ್ರಮ

ಕಿನ್ನಿಗೋಳಿ: ಯಕ್ಷಗಾನ ಕಲೆಯು ಸಾಹಿತ್ಯ, ಸಂಸ್ಕೃತಿಯ ನೆಲೆವೀಡಾಗಿದ್ದು ರಂಗದಲ್ಲಿ ಕಾಣಿಸಿಕೊಳ್ಳುವ ಎಲ್ಲ ಕ್ರಿಯೆಗಳಿಗೂ ಗಾನವೇ ಉಗಮ ಸ್ಥಾನವಾಗಿದೆ. ಎಂದು ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಅಧ್ಯಕ್ಷ ಹರಿ...

Close