ರಾಷ್ಟ್ರ ಸೇವಿಕಾ ಶಿಕ್ಷಣ ಶಿಬಿರ ಸಮಾರೋಪ

ಕಿನ್ನಿಗೋಳಿ : ಮಹಿಳೆಯರಲ್ಲಿ ಶೈಕ್ಷಣಿಕ, ಸಾಮಾಜಿಕ ಮತ್ತು ದೇಶ ಪ್ರೇಮದ ಜಾಗೃತಿ, ಯುವ ಪೀಳಿಗೆಯ ಬಾಲಕಿಯರಲ್ಲಿ ಶಿಸ್ತು ಸಂಸ್ಕಾರ ಸಂಸ್ಕೃತಿ ಆಚಾರ ವಿಚಾರಗಳ ಧರ್ಮ ಜಾಗೃತಿಯ ಅರಿವು ಮೂಡಿಸುವ ಕಾರ್ಯವನ್ನು ರಾಷ್ಟ್ರ ಸೇವಿಕಾ ಸಮಿತಿ ನಿರ್ವಹಿಸುತ್ತಿದೆ ಎಂದು ಬೌದ್ಧಿಕ್ ಕುಮುದಿನಿ ಹೇಳಿದರು.
ಮಂಗಳವಾರ ಪುನರೂರು ಶ್ರೀ ವಿಶ್ವನಾಥ ದೇವಳದ ಸಭಾಂಗಣದಲ್ಲಿ ನಡೆದ ರಾಷ್ಟ್ರ ಸೇವಿಕಾ ಸಮಿತಿಯ ಪ್ರಾರಂಭಿಕ ಶಿಕ್ಷಣ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ತೋಕೂರು ಎಮ್ ಆರ್. ಎಸ್ . ಎಮ್. ಶಾಲಾ ಶಿಕ್ಷಕಿ ವಾಣಿ ಜಯರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ತಾಲೂಕು ಕಾರ್ಯವಾಹಿಕೆ ಗಿರಿಜಾ ಭಟ್, ಡಾ| ಕಮಲಾ ಪ್ರಭಾಕರ ಭಟ್, ಕಸ್ತೂರಿ ಪಂಜ, ಬೇಬಿ ಸುಂದರ ಕೋಟ್ಯಾನ್, ಲೀಲಾ ಬಂಜನ್, ಶಶಿಕಲಾ, ಶೈಲಾ ಶೆಟ್ಟಿ ಭುವನಾಭಿರಾಮ ಉಡುಪ, ದೇವಪ್ರಸಾದ್ ಪುನರೂರು ಮತ್ತಿತರರು ಉಪಸ್ಥಿತರಿದ್ದರು. ಗ್ರಾಮಾಂತರ ಸಂಪರ್ಕ ಪ್ರಮುಖ್ ಮಾಲತಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Kinnigoli-16101401

Comments

comments

Comments are closed.

Read previous post:
Kinnigoli-15101401
ಬಲವಿನಗುಡ್ಡೆಯಲ್ಲಿ ಶ್ರಮದಾನ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಬಲವಿನ ಗುಡ್ಡೆಯಿಂದ ಬಟ್ಟಕೋಡಿ ವರೆಗಿನ ಸುಮಾರು ಎರಡು ಕಿಲೋ ಮೀಟರ್ ಉದ್ದದ ರಸ್ತೆ ಬದಿಯ ಕಳೆ ಗಿಡಗಂಟಿಗಳನ್ನು ಭಾನುವಾರ ನಡುಗೋಡು ಶಾಲಾ ಹಳೇ...

Close