ಜನವರಿ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ

Cricket

ಕಿನ್ನಿಗೋಳಿ: ಗುತ್ತಕಾಡು-ಶಾಂತಿನಗರ ಯಂಗ್ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‌ನ 5 ನೇ ವಾರ್ಷಿಕೋತ್ಸವದ ಪ್ರಯುಕ್ತ ಶಾಂತಿ- ಪ್ರೀತಿ- ಹ – ಏಕತೆಗಾಗಿ ಕ್ರಿಕೆಟ್ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಕಿನ್ನಿಗೋಳಿ ಪರಿಸರದಲ್ಲಿಯೇ ಪ್ರಥಮ ಬಾರಿಗೆ 2015 ಜನವರಿ 24, 25, 26 ರಂದು ಮೂರು ದಿನಗಳ ಹೊರರಾಜ್ಯ ಮತ್ತು ರಾಜ್ಯ ಮಟ್ಟದ ಹೊನಲು ಬೆಳಕಿನ ನಿಗದಿತ 8 ಓವರ್‌ಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಯಂಗ್ ಫ್ರೆಂಡ್ಸ್ ಟ್ರೋಫಿ- 2015 ಗುತ್ತಕಾಡು ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಕ್ಲಬ್‌ನ ಗೌರವಾಧ್ಯಕ್ಷ ಶಶಿಕಾಂತ್ ರಾವ್ ಹಾಗೂ ರಾಜ್ಯ ಮಟ್ಟದ ವೀಕ್ಷಕ ವಿವರಣೆಗಾರ ವಿನಯಕುಮಾರ್ ಉದ್ಯಾವರ ಗುರುವಾರ ಕಿನ್ನಿಗೋಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಐದು ವರ್ಷಗಳಲ್ಲಿ ರಕ್ತದಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣೆ, ಕ್ರೀಡಾಳುಗಳಿಗೆ ಸಹಕಾರ ಸಹಿತ ಸಮಾಜ ಮುಖಿ ಜನೋಪಯೋಗಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.
ಕ್ಲಬ್‌ನ ಸ್ಥಾಪಕ ಅಧ್ಯಕ್ಷ ಅಬೂಬಕ್ಕರ್, ಅಧ್ಯಕ್ಷ ನೂರುದ್ದೀನ್, ಕ್ರೀಡಾ ಕಾರ್ಯದರ್ಶಿ ಮಹಮ್ಮದ್ ಅಲಿ ಗೋಳಿಜೋರಾ, ಕಾರ್ಯದರ್ಶಿ ಮುಬೀನ್, ಶೌಕತ್ ಅಲಿ, ತಾಹಿರ್ ನಕಾಶ್, ದಿವಾಕರ ಕರ್ಕೇರಾ, ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments

comments

Comments are closed.

Read previous post:
Pakshikere-16101401
ಪಕ್ಷಿಕೆರೆ ಚರ್ಚ್ ಸ್ವರ್ಣ ಮಹೋತ್ಸವ

ಕಿನ್ನಿಗೋಳಿ: ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದ ವಾರ್ಷಿಕ ಹಬ್ಬ, ಸಾಮೂಹಿಕ ಮದುವೆ ಸಂಭ್ರಮ ಹಾಗೂ ಸ್ವರ್ಣ ಮಹೋತ್ಸವ, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಅ.19ರಿಂದ ಅ.28ರವರೆಗೆ ನಡೆಯಲಿದೆ...

Close