ಕಿನ್ನಿಗೋಳಿ: ಉಚಿತ ನೇತ್ರ ಚಿಕಿತ್ಸಾ ಶಿಬಿರ

ಕಿನ್ನಿಗೋಳಿ: ಸೇವಾ ಸಂಸ್ಥೆಗಳು ಗ್ರಾಮೀಣ ಮಟ್ಟದಲ್ಲಿ ಜನಪಯೋಗಿ ಕಾರ್ಯಕ್ರಮಗಳನ್ನು ನಡೆಸಿ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ದುರ್ಬಲರಿಗೆ ಸಹಾಯ ಹಸ್ತನೀಡಿದಾಗ ಗ್ರಾಮಗಳು ಆರ್ಥಿಕ ಹಾಗೂ ಸಾಮಾಜಿಕವಾಗಿ ಉನ್ನತಿಯಾಗುವುದು ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ ಕುಮಾರ್ ಹೆಗ್ಡೆ ಹೇಳಿದರು.
ವಿವೇಕ ಜಾಗ್ರತ ಬಳಗ ಮುಲ್ಕಿ ಡಿವೈನ್ ಪಾರ್ಕ್ ಟ್ರಸ್ಟ್ ಸಾಲಿಗ್ರಾಮ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಎಳತ್ತೂರು-ತಾಳಿಪಾಡಿ, ಸಂಜೀವಿನಿ ಸಮಗ್ರ ಸಮುದಾಯ ಆರೋಗ್ಯ ಕೇಂದ್ರ ಕನ್ಸೆಟ್ಟಾ ಆಸ್ಪತ್ರೆ ಕಿನ್ನಿಗೋಳಿ, ಎಳತ್ತೂರು ಫ್ರೆಂಡ್ಸ್ ಕ್ಲಬ್ ಮತ್ತು ಮಹಿಳಾ ಘಟಕ ಮತ್ತು ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್ ಸಹಭಾಗಿತ್ವದಲ್ಲಿ ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಹಲವಾರು ಮಂದಿ ಉಚಿತ ಕನ್ನಡಕಗಳನ್ನು ಪಡೆದರು.
ಮುಲ್ಕಿ ವಿವೇಕ ಜಾಗೃತ ಬಳಗದ ಅಧ್ಯಕ್ಷೆ ಸುನಂದ ದಾಮೋದರ್ ಶೆಟ್ಟಿ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ ಪಿ ಹೆಗ್ಡೆ, ಸಾಲಿಗ್ರಮ ಡಿವೈನ್ ಪಾರ್ಕ್‌ನ ಉಷಾ ಕಿರಣ ಶೆಟ್ತಿ, ಕನ್ಸೆಟ್ಟಾ ಆಸ್ಪತ್ರೆ ಸಂಜೀವಿನಿ ಸಂಸ್ಥೆ ಸಂಚಾಲಕಿ ಭಗಿನಿ ಹೋಪ್, ಎಳತ್ತೂರು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಶ್ಯಾಮ ಸುಂದರ್ ಶೆಟ್ಟಿ, ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷ ಸಂತೋಷ ಶೆಟ್ಟಿ, ಡಾ. ವಸುರಾಜ್, ಡಾ. ಉಷಾ, ಡಾ. ಮಂಜುಳಾ ಉಪಸ್ಥಿತರಿದ್ದರು.

Kinnigoli-17101401 Kinnigoli-17101402 Kinnigoli-17101403 Kinnigoli-17101404

 

Comments

comments

Comments are closed.

Read previous post:
Cricket
ಜನವರಿ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ

ಕಿನ್ನಿಗೋಳಿ: ಗುತ್ತಕಾಡು-ಶಾಂತಿನಗರ ಯಂಗ್ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‌ನ 5 ನೇ ವಾರ್ಷಿಕೋತ್ಸವದ ಪ್ರಯುಕ್ತ ಶಾಂತಿ- ಪ್ರೀತಿ- ಹ - ಏಕತೆಗಾಗಿ ಕ್ರಿಕೆಟ್ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಕಿನ್ನಿಗೋಳಿ ಪರಿಸರದಲ್ಲಿಯೇ...

Close