ಪಕ್ಷಿಕೆರೆ ಆರೋಗ್ಯ ಶಿಬಿರ

ಕಿನ್ನಿಗೋಳಿ : ಸಮಾಜದ ಎಲ್ಲಾ ವರ್ಗಗಳು ಉತ್ತಮ ಧ್ಯೇಯ ಉದ್ದೇಶಗಳೊಂದಿಗೆ ಒಂದುಗೂಡಿ ಶಾಂತಿ ಸೌಹಾರ್ಧತೆ ಪರಸ್ಪರ ನಂಬಿಕೆಗಳ ವಿಶ್ವಾಸವಿರಿಸಿ ಸಮಾಜ ಸೇವೆ ಮಾಡಿದಾಗ ಭವ್ಯ ಸಮಾಜದ ನಿರ್ಮಾಣ ಸಾಧ್ಯ. ಎಂದು ಮಂಗಳೂರು ಧರ್ಮಪ್ರಾಂತ್ಯದ ಪ್ರಧಾನ ಧರ್ಮ ಗುರು ಫಾ| ಡೆನ್ನಿಸ್ ಮೋರಾಸ್ ಪ್ರಭು ಹೇಳಿದರು.
ಭಾನುವಾರ ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದಲ್ಲಿ ಯಾತ್ರಿಕ ಕೇಂದ್ರದ ಸ್ವರ್ಣ ಮಹೋತ್ಸವ ಆಚರಣೆಯ ಅಂಗವಾಗಿ ಚರ್ಚ್ ವಿಸ್ತರಣಾ ಭಾಗ, ಸಾರ್ವಜನಿಕ ಸ್ವಚ್ಛತಾ ಕಾರ್ಯಕ್ರಮ, ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೂಲ್ಕಿ ಸೀಮೆಯ ಸಾವಂತ ಅರಸರಾದ ದುಗ್ಗಣ್ಣ ಸಾವಂತ ಅರಸರು ಕಾರ್ಯಕ್ರಮ ಉದ್ಘಾಟಿಸಿ ಸ್ವಚ್ಚ ಮನಸ್ಸುಗಳು ಒಗ್ಗೂಡಿದಾಗ ಸ್ವಚ್ಚ ಸಮಾಜ ಸ್ವಚ್ಚ ಭಾರತದ ಕನಸು ನನಸಾಗುತ್ತದೆ. ಎಂದು ಹೇಳಿದರು.
ಈ ಸಂದರ್ಭ ದುಗ್ಗಣ ಸಾವಂತ ಅವರನ್ನು ಸಮ್ಮಾನಿಸಲಾಯಿತು. ಗುತ್ತಿಗೆದಾರ ವಾಲ್ಟರ್ ಡಿಸೋಜ ಅವರನ್ನು ಗೌರವಿಸಲಾಯಿತು.
ಮುಕ್ಕ ಶ್ರೀನಿವಾಸ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅಣ್ಣಯ ಕುಲಾಲ್, ಮಂಗಳೂರು ಎ. ಜೆ. ಆಸ್ಪತ್ರೆಯ ರಕ್ತ ನಿಧಿ ಘಟಕದ ಡಾ. ಗೋಪಾಲಕೃಷ್ಣ, ಪಕ್ಷಿಕೆರೆ ಚರ್ಚ್ ಸಹಾಯಕ ಧರ್ಮಗುರು ಫಾ. ಪ್ಯಾಟ್ರಿಕ್ ಸಿಕ್ವೇರಾ ಉಪಸ್ಥಿರಿದ್ದರು.
ಪಕ್ಷಿಕೆರೆ ಚರ್ಚ್ ಪ್ರಧಾನ ಧರ್ಮಗುರು ಫಾ. ಆಂಡ್ರ್ಯೂ ಲಿಯೋ ಡಿಸೋಜ ಸ್ವಾಗತಿಸಿದರು. ಚರ್ಚ್‌ನ ಪಾಲನಾ ಮಂಡಳಿಯ ಉಪಾಧ್ಯಕ್ಷ ವಿನ್ಸಂಟ್ ಡಿಸೋಜ ವಂದಿಸಿದರು. ಉಪನ್ಯಾಸಕ ಜಯಾನಂದ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

ಪಕ್ಷಿಕೆರೆಯ ಇತಿಹಾಸದಲ್ಲಿಯೇ ಪ್ರಥಮ ಬಾರಿ
ಪಕ್ಷಿಕೆರೆ ಪರಿಸರದ ಸುಮಾರು 35 ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ 200 ಕ್ಕೂ ಮಿಕ್ಕಿ ಸಾರ್ವಜನಿಕರು ಪರಿಸರದ ಹೆಚ್ಚಿನ ಕೊಂಡಿ ರಸ್ತೆಗಳು ಹಾಗೂ ಮುಖ್ಯ ರಸ್ತೆಯ ಬದಿಗಳ ಕಳೆಗಿಡಗಳು, ಪ್ಲಾಸ್ಟಿಕ್ ಹಾಗೂ ಕಸಕಡ್ಡಿಗಳನ್ನು ಸ್ವಚ್ಚಗೊಳಿಸಿ ಬ್ರಹತ್ ಸ್ವಚ್ಚತಾ ಆಂದೋಲನದ ಕಾರ್ಯಕ್ಕೆ ತಮ್ಮದಾದ ಕಿರು ಕಾಣಿಕೆ ನೀಡಿ ಒಗ್ಗಟ್ಟನ್ನು ಪ್ರದರ್ಶಿಸಿದರು.

Kinnigoli-19101401 Kinnigoli-19101402 Kinnigoli-19101403 Kinnigoli-19101404 Kinnigoli-19101405 Kinnigoli-19101406 Kinnigoli-19101407 Kinnigoli-19101408 Kinnigoli-19101409 Kinnigoli-19101410 Kinnigoli-19101411 Kinnigoli-19101412

Comments

comments

Comments are closed.

Read previous post:
Kinnigoli-17101406
ಶ್ರೀ ದುರ್ಗಾ ಭಜನಾ ಮಂದಿರ ಶಿಲಾನ್ಯಾಸ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಕಮ್ಮಾಜೆ ನೇಕಾರ ಕಾಲೋನಿಯಲ್ಲಿ ಶುಕ್ರವಾರ ಶ್ರೀ ದುರ್ಗಾ ಭಜನಾ ಮಂದಿರದ ಶಿಲಾನ್ಯಾಸ ನಡೆಯಿತು. ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯ ಈಶ್ವರ ಕಟೀಲ್,...

Close