ಜೀವ ವಿಮಾ ನಿಗಮದ ದಶಮಾನೋತ್ಸವ

ಮೂಲ್ಕಿ: ದುರ್ಬಲ ವರ್ಗಗಳ ನ್ಯಾಯಕ್ಕಾಗಿ ಎಲ್ಲರೂ ಸಮಾನ ಮನಸ್ಕರಾಗಿ ಹೋರಾಡುವುದರಿಂದ ಸಂಘಟನೆಗೆ ಬಲತರುತ್ತದೆ ಎಂದು ಮೂಲ್ಕಿ ಅಟೋ ರಿಕ್ಷಾ ಚಾಲಕರ ಮಾಲಕರ ಸಂಘದ ಗೌರವಾಧ್ಯಕ್ಷ ವಕೀಲ ಎಂ.ಭಾಸ್ಕರ ಹೆಗ್ಡೆ ಹೇಳಿದರು.
ಭಾರತೀಯ ಜೀವ ವಿಮಾ ನಿಗಮ ಪ್ರತಿನಿಧಿಗಳ ಸಂಘಟನೆ ಮೂಲ್ಕಿ ಘಟಕ ಇದರ ದಶಮಾನೋತ್ಸವ ಪ್ರಯುಕ್ತ ಬ್ರಹ್ಮಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ನಡೆದ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಘಟನಾತ್ಮಕ ಚಟುವಟಿಗಳಿಗೆ ಸರ್ವಾಧಿಕಾರಿ ಪ್ರವೃತ್ತಿ ಹಿನ್ನಡೆ ತರುವುದರಿಂದ ಸರ್ವರಲ್ಲಿ ಸಹಕಾರಿ ಮನೋಬಾವನೆಯ ಮೂಲಕ ನಾಯಕತ್ವ ವಹಿಸಿಕೊಳ್ಳಬೇಕು ಎಂದರು. ಎಲ್‌ಐಎಒಸಿ ಮೂಲ್ಕಿ ಶಾಖೆಯ ಅಧ್ಯಕ್ಷ ಜೆರಾಲ್ಡ್ ಕ್ರಾಸ್ತ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೂಲ್ಕಿ ಶಾಖೆ ಹಿರಿಯ ಶಾಖಾಧಿಕಾರಿ ಇ.ಬಿ ಲೋಬೋ, ಮೂಲ್ಕಿ ಶಾಖೆ ಅಭಿವೃದ್ಧಿ ಅಧಿಕಾರಿಗಳ ಸಂಘದ ಅಧ್ಯಕ್ಷ ಲಿಯೋ ತಾವ್ರೋ, ಎಲ್‌ಐಸಿ ವಿಮಾ ನೌಕರರ ಸಂಘ ಕಾರ್ಯದರ್ಶಿ ಗುರುದತ್ತ್, ಎಲ್‌ಐಎಒಸಿ ಕರ್ನಾಟಕಸಮಿತಿಯ ಪ್ರಧಾನಕಾರ್ಯದರ್ಶಿ ರಮೇಶ್ ಕುಮಾರ್, ಎಲ್‌ಐಎಒಸಿಉಡುಪಿ ವಿಭಾಗ ಅಧ್ಯಕ್ಷ ಗಂಗಾಧರ ಪೂಜಾರಿ, ಎಲ್‌ಐಎಒಸಿ ಮೂಲ್ಕಿ ಶಾಖೆಯ ಕಾರ್ಯದರ್ಶಿ ಗ್ರೇಸಿ ಸಿಕ್ವೇರಾ,ಕೋಶಾಧಿಕಾರಿ ಎಂ.ಎಸ್. ಗುರುಪುರ್, ಮಹಿಳಾ ಒಕ್ಕೂಟದ ಅಧ್ಯಕ್ಷೆ ವಿಮಲಾ ಕೃಷ್ಣ, ಕಾರ್ಯದರ್ಶಿ ಜ್ಯೋತಿ.ಎ.ಶೆಟ್ಟಿ ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ರಾಜನ್ ಡಿ ಕೋಸ್ಟಾ ಸ್ವಾಗತಿಸಿದರು. ಮಮತಾ ಗಿರೀಶ್ ನಿರೂಪಿಸಿದರು. ಗ್ರೇಸಿ ಸಿಕ್ವೇರಾ ವರದಿ ಮಂಡಿಸಿದರು.ಸಂಧ್ಯಾ ವಂದಿಸಿದರು.ಕಾರ್ಯಕ್ರಮದ ಮೊದಲು ವಾರ್ಷಿಕ ಮಹಾಸಭೆ ಹಾಗೂಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Bhagyavan Sanil

Mulki-20101403

 

Comments

comments

Comments are closed.

Read previous post:
Nellitheertha-20101402
ನೆಲ್ಲಿತೀರ್ಥ ಗುಹಾ ತೀರ್ಥಸ್ನಾನ ಪ್ರಾರಂಭೋತ್ಸವ

ನೆಲ್ಲಿತೀರ್ಥ : ಬ್ರಹ್ಮಶ್ರೀ ಬಿ. ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕಟೀಲು ದೇವಳ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ , ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ,...

Close