ಪಂಜ ರಸ್ತೆ ತಡೆ ಪ್ರತಿಭಟನೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಪಕ್ಷಿಕೆರೆ ಪಂಜ ಮಧ್ಯ ಖಡ್ಗೇಶ್ವರಿ ದೇವಳವನ್ನು ಸಂಪರ್ಕಿಸುವ ರಸ್ತೆ ಕಾಮಗಾರಿ ವಿಳಂಬ ಗೊಂಡಿರುವ ಪರಿಣಾಮ ಪಂಜ, ಕಾಪಿಕಾಡು, ಸುರಗಿರಿ ಪರಿಸರದ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳು ಹಾಗೂ ರಿಕ್ಷಾ ಚಾಲಕರು ಸೋಮವಾರ ಬೆಳಿಗ್ಗೆ ಪಕ್ಷಿಕೆರೆಯಿಂದ ಪಂಜಕ್ಕೆ ಹೋಗುವ ರಸ್ತೆಯನ್ನು ತಡೆದು ಪ್ರತಿಭಟಿನೆ ಮಾಡಿದರು.
ಸುಮಾರು ೧.೭೫ ಕಿಮೀ ಉದ್ದದ ಈ ರಸ್ತೆಯ ಕಾಮಾಗಾರಿಯನ್ನು ಫೆಬ್ರವರಿಯಲ್ಲಿ ಪ್ರಾರಂಭಿಸಿ ಮಣ್ಣುಹಾಕಿ ರಸ್ತೆ ಸಮತಟ್ಟು ಮಾಡಿ ಜಲ್ಲಿ ರಸ್ತೆಯನ್ನು ನಿರ್ಮಿಸಿ ಮಳೆಗಾಲ ಬಂದ ಕಾರಣ ಕಾಮಗಾರಿ ಸ್ಥಗಿತಗೊಳಿಸಿದ್ದರು. ಪಕ್ಷಿಕೆರೆಯಿಂದ ಪಂಜದ ವರೆಗೆ ಮಣ್ಣು ಜಲ್ಲಿಹಾಕಿ ನಿರ್ಮಾಣ ಗೊಂಡ ರಸ್ತೆಗೆ ಮಳೆಗಾಲದ ಮೊದಲು ಡಾಮರ್ ಹಾಕಿದಲ್ಲಿ ಸಂಚಾರ ಸುಗಮವಾಗುತ್ತಿತ್ತು. ಮಳೆ ನೀರಿನೊಂದಿಗೆ ಮಣ್ಣು ಸೇರಿ ಈ ಪ್ರದೇಶದಲ್ಲಿ ಜಲ್ಲಿ ಎದ್ದಿದ್ದು ರಿಕ್ಷಾ ಚಾಲಕ ಹಾಗೂ ಇತರ ವಾಹನಗಳಿಗೆ ವಾಹನ ಚಲಾಯಿಸುವುದು ಕಷ್ಟ ಸಾಧ್ಯವಾಗಿದೆ. ಎಂದು ರಿಕ್ಷಾ ಚಾಲಕರ ಹೇಳುತ್ತಾರೆ ಜಲ್ಲಿ ಮೇಲೆದ್ದು ವಾಹನಗಳ ಸಂಚಾರಕ್ಕೆ ತಡೆಯುಂಟಾಗುತ್ತಿರುವ ಆತಂಕದಲ್ಲಿ ಹಾಗೂ ತ್ವರಿತ ಕಾಮಗಾರಿಯ ಚಾಲನೆಗಾಗಿ ಸಾರ್ವಜನಿಕರು ಪ್ರತಿಭಟನೆ ಮಾಡಿದರು.
ಸಾರ್ವಜನಿಕ ಹಿತಾಸಕ್ತಿಗೆ ಅಡ್ಡಿ ಪಡಿಸಿದ ಕಾರಣ ಪ್ರತಿಭಟನಾ ನಿರತರನ್ನು ಮುಲ್ಕಿ ಪೋಲಿಸರು ಬಂಧಿಸಿ ಬಿಡುಗಡೆ ಗೊಳಿಸಿದರು.

Panja-20101401

Comments

comments

Comments are closed.

Read previous post:
Kinnigoli-19101406
ಪಕ್ಷಿಕೆರೆ ಆರೋಗ್ಯ ಶಿಬಿರ

ಕಿನ್ನಿಗೋಳಿ : ಸಮಾಜದ ಎಲ್ಲಾ ವರ್ಗಗಳು ಉತ್ತಮ ಧ್ಯೇಯ ಉದ್ದೇಶಗಳೊಂದಿಗೆ ಒಂದುಗೂಡಿ ಶಾಂತಿ ಸೌಹಾರ್ಧತೆ ಪರಸ್ಪರ ನಂಬಿಕೆಗಳ ವಿಶ್ವಾಸವಿರಿಸಿ ಸಮಾಜ ಸೇವೆ ಮಾಡಿದಾಗ ಭವ್ಯ ಸಮಾಜದ ನಿರ್ಮಾಣ ಸಾಧ್ಯ....

Close