ಬಳಕುಂಜೆ ಸಂತ ಪೌಲರ ಚರ್ಚ್ ಕ್ರೀಡಾಕೂಟ

ಕಿನ್ನಿಗೋಳಿ : ಬಳಕುಂಜೆ ಸಂತ ಪೌಲರ ಚರ್ಚ್‌ನ ಶತಮಾನೋತ್ಸವದ ಅಂಗವಾಗಿ ಕ್ರೈಸ್ತ ಬಾಂದವರಿಗಾಗಿ ಕ್ರೀಡಾಕೂಟವು ನಡೆಯಿತು.
ಪಾಲಡ್ಕದ ನಿವೃತ್ತ ಶಿಕ್ಷಕರಾದ ಆಂಡ್ರ್ಯೂ ಡಿಸೋಜ ಮತ್ತುಬಳಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಪುತ್ರನ್ ಪಾರಿವಾಳ ಮುಗಿಲ ಕಡೆ ಹಾರಿಸುವ ಮುಖಾಂತರ ಕ್ರೀಡಾಕೂಟ ಉದ್ಘಾಟಿಸಿದರು.
ಬಳಕುಂಜೆ ಚರ್ಚ್ ಧರ್ಮಗುರು ಫಾ. ಮೈಕಲ್ ಡಿಸಿಲ್ವಾ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಪ್ಯಾಟ್ರಿಕ್ ಪಿಂಟೊ, ಕಾರ್ಯದರ್ಶಿ ನ್ಯಾನ್ಸಿ ಕಾರ್ಡೋಜ, ಶತಮಾನೋತ್ಸವ ಸಮಿತಿ ಸಂಯೋಜಕ ನೆಲ್ಸನ್ ಲೋಬೊ, ಕಾರ್ಯದರ್ಶಿ ಅನಿತಾ ಡಿಸೋಜ ಹಾಗೂ ಕ್ರೀಡಾ ಕಾರ್ಯದರ್ಶಿ ಮೈಕಲ್ ರೊಡ್ರಿಗಸ್ ಉಪಸ್ಥಿತರಿದ್ದರು.
ಚರ್ಚ್‌ನ ೩೦೦ ಮಂದಿ ಕ್ರೈಸ್ತ ಬಾಂದವರು ಈ ಕ್ರೀಡಾಕೂಟದಲಿ ಭಾಗವಹಿಸಿದ್ದರು ವಿವಿಧ ಆಟೋಟಗಳೊಂದಿಗೆ ತುಳುನಾಡಿನ ಆಕರ್ಷಣೀಯ ಆಟಗಳಾದ ತೆಂಗಿನ ಗರಿ ಹೆಣೆಯುವುದು, ಪೊರಕೆ ಮಾಡುವುದು ತೆಂಗಿನ ಕಾಯಿ ಸುಲಿಯುವುದು, ಅಡಿಕೆ ಮರದ ಹಾಳೆಯಿಂದ ಎಳೆಯುವುದು, ಲಗೋರಿ, ಪುರುಷರ ಜೊತೆಗೆ ಮಹಿಳೆಯರಿಗೂ ಕ್ರಿಕೆಟ್ ಆಟಗಳನ್ನು ಏರ್ಪಡಿಸಲಾಗಿತ್ತು. ಪ್ರೀಡಾರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.

Balkunje-21101402 Balkunje-21101403 Balkunje-21101404 Balkunje-21101405 Balkunje-21101406

Comments

comments

Comments are closed.

Read previous post:
Mulki-211001
ಮೂಲ್ಕಿ: ಚಿಕಿತ್ಸೆಗೆ ಧನ ಸಹಾಯ

ಮೂಲ್ಕಿ: ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರು ಸದೃಢರಾದಾಗ ಮಾತ್ರ ದೇಶದ ಅಭಿವೃದ್ದಿ ಸಾಧ್ಯವಿದ್ದು ಅಂತವರನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಸಮಾಜದ ಅಭಿವೃದ್ದಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ಅಂತರಾಷ್ತ್ರೀಯ ಖ್ಯಾತಿಯ ವಾಸ್ತು ತಜ್ನ, ಜ್ಯೋತಿಷಿ...

Close