ಕೆ.ಎಲ್.ಕುಂಡಂತಾಯರಿಗೆ ಪು. ಶ್ರೀನಿವಾಸ ಭಟ್ ಪ್ರಶಸ್ತಿ

Kinnigoli-21101407

ಕಿನ್ನಿಗೋಳಿ: ಕಿನ್ನಿಗೋಳಿ ಯುಗಪುರುಷದ ಆಶ್ರಯದಲ್ಲಿ ನಡೆಯುವ ಕಟೀಲು ದಿ. ಪು. ಶ್ರೀನಿವಾಸ ಭಟ್ ಸಂಸ್ಮರಣಾರ್ಥ ಕೊಡಮಾಡುವ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ, ಜಾನಪದ ವಿದ್ವಾಂಸ ಕೆ.ಎಲ್.ಕುಂಡಂತಾಯ ಅವರಿಗೆ ನೀಡಿ ಗೌರವಿಸಲಾಗುವುದು. ಅಕ್ಟೋಬರ್ 25 ಶನಿವಾರ ಯುಗಪುರುಷ ಸಭಾಭವನದಲ್ಲಿ ಜರಗಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಹರಿಕೃಷ್ಣ ಪುನರೂರುರವರು ಅಧ್ಯಕ್ಷತೆ ವಹಿಸಲಿದ್ದಾರೆ. ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನ ನೀಡಲಿದ್ದಾರೆ. ಸಾಹಿತಿ ಎನ್.ಪಿ. ಶೆಟ್ಟಿಯವರು ಸಂಸ್ಮರಣಾ ಭಾಷಣ ಮಾಡಲಿದ್ದಾರೆ. ಪು. ಶ್ರೀನಿವಾಸ ಭಟ್ ರಚಿತ ಕೋಲ ಬಲಿ ಕೃತಿಯ ದ್ವಿತೀಯ ಆವೃತ್ತಿಯನ್ನು ಕೆ.ಜಿ. ಮಲ್ಯರವರು ಬಿಡುಗಡೆಗೊಳಿಸಲಿದ್ದಾರೆ. ಈ ಸಂದರ್ಭ ರಾಮಚಂದ್ರ ಭಟ್ ಶಿಮಂತೂರು, ಮನೋರಮಾ ಕೆ., ಹರಿಶ್ಚಂದ್ರ ರಾವ್ ಕಟೀಲು, ಕಾವ್ಯಶ್ರೀ ಉಪಸ್ಥಿತರಿರುವರು.
sಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮೂಡಬಿದ್ರೆ ಆಳ್ವಾಸ್ ಪ.ಪೂ. ಕಾಲೇಜಿನ ಉಪನ್ಯಾಸಕ ರಾಮಪ್ರಸಾದ ಕಾಂಚೋಡ್ ಇವರಿಂದ ದಿ.ಪು.ಶ್ರೀನಿವಾಸ ಭಟ್ ರಚಿತ ಕಾವ್ಯಗಳ ಗಾಯನ ಜರಗಲಿದೆ ಎಂದು ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ ಹಾಗೂ ಪು. ಗುರುಪ್ರಸಾದ ಭಟ್‌ರವರು ತಿಳಿಸಿದ್ದಾರೆ.

Comments

comments

Comments are closed.

Read previous post:
Balkunje-21101403
ಬಳಕುಂಜೆ ಸಂತ ಪೌಲರ ಚರ್ಚ್ ಕ್ರೀಡಾಕೂಟ

ಕಿನ್ನಿಗೋಳಿ : ಬಳಕುಂಜೆ ಸಂತ ಪೌಲರ ಚರ್ಚ್‌ನ ಶತಮಾನೋತ್ಸವದ ಅಂಗವಾಗಿ ಕ್ರೈಸ್ತ ಬಾಂದವರಿಗಾಗಿ ಕ್ರೀಡಾಕೂಟವು ನಡೆಯಿತು. ಪಾಲಡ್ಕದ ನಿವೃತ್ತ ಶಿಕ್ಷಕರಾದ ಆಂಡ್ರ್ಯೂ ಡಿಸೋಜ ಮತ್ತುಬಳಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ...

Close