ಮೂಲ್ಕಿ: ಚಿಕಿತ್ಸೆಗೆ ಧನ ಸಹಾಯ

ಮೂಲ್ಕಿ: ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರು ಸದೃಢರಾದಾಗ ಮಾತ್ರ ದೇಶದ ಅಭಿವೃದ್ದಿ ಸಾಧ್ಯವಿದ್ದು ಅಂತವರನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಸಮಾಜದ ಅಭಿವೃದ್ದಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ಅಂತರಾಷ್ತ್ರೀಯ ಖ್ಯಾತಿಯ ವಾಸ್ತು ತಜ್ನ, ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಮೂಲ್ಕಿಯ ಗೇರುಕಟ್ಟೆಯಲ್ಲಿರುವ ಸ್ವಾಮೀಜಿಯವರ ಆಶ್ರಮದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಚಂದ್ರಶೇಖರ ಸ್ವಾಮೀಜಿಯವರು ಅನಾರೋಗ್ಯದಿಂದ ಬಳಲುತ್ತಿರುವ ಮೂಲ್ಕಿಯ ಬಪ್ಪನಾಡಿನ ನಿವಾಸಿ ರಾಧಕೃಷ್ಣ ಭಟ್ ಅವರ ತಾಯಿ ಶಾಂತ ಅವರ ಚಿಕಿತ್ಸೆಗೆ ಆರ್ಥಿಕ ಧನ ಸಹಾಯವನ್ನು ನೀಡಿದರು.
ಈ ಸಂದರ್ಭದಲ್ಲಿ ಪ್ರೈಡ್ ಆಫ್ ಏಷ್ಯಾ ಪ್ರಶಸ್ತಿ ಪುರಸ್ಕೃತ ಡಾ. ದೇವಿ ಪ್ರಸಾದ್ ಶೆಟ್ಟಿ, ಉದ್ಯಮಿ ರಿಜ್ವಾನ್ ಬಪ್ಪನಾಡು, ಆಶ್ರಮದ ನಿರ್ದೇಶಕಿ ರಜನಿ ಸಿ ಭಟ್, ರಾಹುಲ್ ಸಿ ಭಟ್, ರೋಶನಿ ಭಟ್, ಆಶ್ರಮದ ಸಂಚಾಲಕ ಮಧು ಆಚಾರ್ಯ, ಗಿರೀಶ್ ಕಾಮತ್ ಉಪಸ್ಥಿತರಿದ್ದರು.

Prakash Suvarna

Mulki-211001

Comments

comments

Comments are closed.

Read previous post:
Mulki-20101403
ಜೀವ ವಿಮಾ ನಿಗಮದ ದಶಮಾನೋತ್ಸವ

ಮೂಲ್ಕಿ: ದುರ್ಬಲ ವರ್ಗಗಳ ನ್ಯಾಯಕ್ಕಾಗಿ ಎಲ್ಲರೂ ಸಮಾನ ಮನಸ್ಕರಾಗಿ ಹೋರಾಡುವುದರಿಂದ ಸಂಘಟನೆಗೆ ಬಲತರುತ್ತದೆ ಎಂದು ಮೂಲ್ಕಿ ಅಟೋ ರಿಕ್ಷಾ ಚಾಲಕರ ಮಾಲಕರ ಸಂಘದ ಗೌರವಾಧ್ಯಕ್ಷ ವಕೀಲ ಎಂ.ಭಾಸ್ಕರ...

Close