ಪಂಚಾಯತಿ ಅಬಿವೃದ್ದಿಯಲ್ಲಿ ತಾರತಮ್ಯವಿಲ್ಲ

ಮೂಲ್ಕಿ: ಸರಕಾರದ ಅನುದಾನಗಳನ್ನು ಸದುಪಯೋಗಿಸಿಕೊಂಡು ಮೂಲ್ಕಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಅಬಿವೃದ್ದಿಯಲ್ಲಿ ತಾರತಮ್ಯ ಮಾಡದೆ ಜನರ ಕಲ್ಯಾಣಕ್ಕೆ ಪಂಚಾಯತಿ ಶ್ರಮಿಸುತ್ತಿದ್ದು ಜನರು ಇದನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕೆಂದು ಮೂಲ್ಕಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಮೀನಾಕ್ಷಿ ಬಂಗೇರಾ ಹೇಳಿದರು. ಅವರು ಮೂಲ್ಕಿ ಪ.ಪಂ. ವ್ಯಾಪ್ತಿಯ ಬಪ್ಪನಾಡು ಬೀಚ್ ರಸ್ತೆಯ ಮೂಲ್ಕಿ ಪ.ಪಂ.ಯ ಮಾಜೀ ಅಧ್ಯಕ್ಷ ದಿ. ಶೇಖರ ಕೋಟ್ಯಾನ್ ಸ್ಮರಣಾರ್ಥ ಸುಮಾರು 9 ಲಕ್ಷ ವೆಚ್ಚದಲ್ಲಿ ನಿರ್ಮಿಸಲಿರುವ ಕಾಂಕ್ರೀಟು ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಈ ಸಂದರ್ಭ ಪ.ಪಂ.ನ ಉಪಾಧ್ಯಕ್ಷೆ ವಾಸಂತಿ ಭಂಡಾರಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುನಿಲ್ ಆಳ್ವ, ಸದಸ್ಯ ಪುರುಷೋತ್ತಮ ಬಡಗಹಿತ್ಲು, ಇಂಜಿನಿಯರ್ ಪದ್ಮನಾಭ ಮತ್ತು ದಿ. ಶೇಖರ ಕೋಟ್ಯಾನ್ ಕುಟುಂಬಸ್ಥರು ಉಪಸ್ಥಿತರಿದ್ದರು.

Puneethakrishna

Mulki-211009

Comments

comments

Comments are closed.

Read previous post:
Mulki-211008
ಮುಂಬಯಿ- ಅಧ್ಯಕ್ಷರಾಗಿ ಕರ್ನಿರೆ ವಿಶ್ವನಾಥ ಶೆಟ್ಟಿ ಆಯ್ಕೆ

ಮೂಲ್ಕಿ: ಕುರ್ಲಾ ಬಂಟರ ಭವನದಲ್ಲಿ ಭಾನುವಾರ ಅ. 19ರಂದು ನಡೆದ 86ನೇ ವಾರ್ಷಿಕ ಮಹಾ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆಯಾದರು. ಕಳೆದ ಮೂರು ವರ್ಷಗಳಿಂದ ಬಂಟರ ಸಂಘದ ವಿವಿಧ ಮುಖ್ಯ...

Close