ಮುಂಬಯಿ- ಅಧ್ಯಕ್ಷರಾಗಿ ಕರ್ನಿರೆ ವಿಶ್ವನಾಥ ಶೆಟ್ಟಿ ಆಯ್ಕೆ

Mulki-211008

ಮೂಲ್ಕಿ: ಕುರ್ಲಾ ಬಂಟರ ಭವನದಲ್ಲಿ ಭಾನುವಾರ ಅ. 19ರಂದು ನಡೆದ 86ನೇ ವಾರ್ಷಿಕ ಮಹಾ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆಯಾದರು. ಕಳೆದ ಮೂರು ವರ್ಷಗಳಿಂದ ಬಂಟರ ಸಂಘದ ವಿವಿಧ ಮುಖ್ಯ ಹುದ್ದೆಗಳಲ್ಲಿ ತೊಡಗಿಸಿಕೊಂಡು ಉಪಾಧ್ಯಕ್ಷರಾಗಿ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಯೋಜನೆಯ ಯಶಸ್ಸಿಗೆ ಮಹತ್ತರವಾದ ಸೇವೆ ಸಲ್ಲಿಸಿದ್ದಾರೆ. ಮೂಲ್ಕಿ ಸಮೀಪದ ಕರ್ನಿರೆ ಗ್ರಾಮದವರಾದ ವಿಶ್ವನಾಥ ಶೆಟ್ಟಿಯವರು ಬೋಳ ನಂದಬೆಟ್ಟು ಸುಂದರ ಶೆಟ್ಟಿ ಮತ್ತು ಕರ್ನಿರೆ ಗಿರಿಜಾ ಶೆಟ್ಟಿಯವರ ಪುತ್ರರಾಗಿದ್ದಾರೆ.ಕರ್ನಿರೆಯಲ್ಲಿ ಪ್ರಾಥಮಿಕ ಶಿಕ್ಷಣ,ಪಲಿಮಾರಿನ ಸರ್ಕಾರಿ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಹಾಗೂ ಪದವಿ ಶಿಕ್ಷಣವನ್ನು ಮೂಲ್ಕಿಯ ವಿಜಯಾ ಕಾಲೇಜಿನಲ್ಲಿ ಪಡೆದು ತಮ್ಮ ಬಹುಮುಖ ಪ್ರತಿಭೆಯಿಂದ ಶ್ಯಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಮುಂಬಯಿಯಲ್ಲಿ ಹೋಟೇಲು ಉದ್ಯಮ ಪ್ರಾರಂಭಿಸಿ ಮಂಗಳೂರುಮತ್ತು ಬೆಂಗಳೂರಿನಲ್ಲಿ ಉದ್ಯಮವನ್ನು ವಿಸತರಿಸಿ ಯಶಸ್ವಿ ಉದ್ಯಮಿ ಎನಿಸಿದ್ದಾರೆ. ಬಂಟರ ಸಂಘದ ಸದಸ್ಯರಾಗಿ ಯಶಸ್ವಿ ಕಾರ್ಯ ಚಟುವಟಿಗಳಿಂದ 17 ಚಿನ್ನದ ಪದಕ ಗಳಿಸಿ ಚಿನ್ನದ ಹುಡುಗ ಎಂಬ ಬಿರುದು ಗಳಿಸಿದ್ದಾರೆ. ವಸಾಯಿ ಹೋಟೇಲ್ ಎಸೋಶಿಯೇಶನ್ ಅಧ್ಯಕ್ಷರಾಗಿ, ತುಳುನಾಡ ಬಂಟ್ಸ್ ಇದರ ಸ್ಥಾಪಕ ಅಧ್ಯಕ್ಷರಾಗಿ,ಧಾರ್ಮಿಕ ಮತ್ತು ಶೈಕ್ಷಣಿಕ ಸಂಸ್ಥೆಗಳ ಅಧ್ಯಕ್ಷರಾಗಿ,ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ವಿಶ್ವನಾಥ ಶೆಟ್ಟಿಯವರು ಕರ್ನಿರೆ ಗ್ರಾಮದ ಶಾಲೆಗಳಲ್ಲಿ ವಿದ್ಯಾಬ್ಯಾಸ ನಡೆಸುತ್ತಿರುವ 160ಕ್ಕೂ ಅಧಿಕ ವಿದ್ಯಾಥಿಗಳನ್ನು ದತ್ತು ಸ್ವೀಕರಿಸಿ ಅವರ ಶೈಕ್ಷಣಿಕ ಬದುಕನ್ನು ಹಸನು ಗೊಳಿಸಿದ್ದಾರೆ.ಮೂಲ್ಕಿ ವಿಜಯಾ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಮುಂಬೈ ಸಮಿತಿಯ ಮುಖ್ಯ ಹುದ್ದೆಗಳನ್ನು ಅಲಂಕರಿಸಿ ಕಾಲೇಜಿನ ಸುವರ್ಣ ಮಹೋತ್ಸವಕ್ಕೆ ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ. ಪತ್ನಿ ಲತಾ ವಿ ಶೆಟ್ಟಿ ಮಕ್ಕಳಾದ ರಿಶಿಕಾ, ವೈಷ್ನವಿ ಮತ್ತು ಮಹರ್ಷಿ ಪ್ರತಿಭಾನ್ವಿತರಾಗಿದ್ದಾರೆ.

Bhagyavan Sanil

 

Comments

comments

Comments are closed.

Read previous post:
Kinnigoli-21101407
ಕೆ.ಎಲ್.ಕುಂಡಂತಾಯರಿಗೆ ಪು. ಶ್ರೀನಿವಾಸ ಭಟ್ ಪ್ರಶಸ್ತಿ

ಕಿನ್ನಿಗೋಳಿ: ಕಿನ್ನಿಗೋಳಿ ಯುಗಪುರುಷದ ಆಶ್ರಯದಲ್ಲಿ ನಡೆಯುವ ಕಟೀಲು ದಿ. ಪು. ಶ್ರೀನಿವಾಸ ಭಟ್ ಸಂಸ್ಮರಣಾರ್ಥ ಕೊಡಮಾಡುವ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ, ಜಾನಪದ ವಿದ್ವಾಂಸ ಕೆ.ಎಲ್.ಕುಂಡಂತಾಯ ಅವರಿಗೆ ನೀಡಿ ಗೌರವಿಸಲಾಗುವುದು....

Close