ಕಿನ್ನಿಗೋಳಿ : ಗೂಡುದೀಪ ಸ್ಪರ್ಧೆ

ಕಿನ್ನಿಗೋಳಿ: ಯುಗಪುರುಷದ ಸಹಕಾರದೊಂದಿಗೆ ಕಿನ್ನಿಗೋಳಿ ರೋಟರಿ ಕ್ಲಬ್, ರೋಟರ‍್ಯಾಕ್ಟ್ ಕ್ಲಬ್, ಇನ್ನರ್‌ವೀಲ್ ಕ್ಲಬ್, ಲಯನ್ಸ್ ಕ್ಲಬ್ ಮೂಲ್ಕಿ, ಲಯನ್ಸ್ ಕ್ಲಬ್ ಕಿನ್ನಿಗೋಳಿ, ಸೌತ್ ಕೆನರಾ ಫೋಟೋಗ್ರಾಫರ‍್ಸ್ ಅಸೋಸಿಯೇಶನ್ ಮೂಲ್ಕಿ ವಲಯ, ಭ್ರಾಮರೀ ಮಹಿಳಾ ಸಮಾಜ ಮೆನ್ನಬೆಟ್ಟು, ಆದರ್ಶ ಬಳಗ ಕೊಡೆತ್ತೂರು ಹಾಗೂ ನಮ್ಮಕಿನ್ನಿಗೋಳಿ ಡಾಟ್ ಕಾಮ್ ಸಂಸ್ಥೆಗಳ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ಗೂಡುದೀಪ ಸ್ಪರ್ಧೆ ಬುಧವಾರ ಸಾಯಂಕಾಲ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆಯಿತು.
ಈ ಸಂದರ್ಭ ಸತತ ಐದು ವರ್ಷಗಳಿಂದ ವಿಭಿನ್ನ ಶೈಲಿಯ ಗೂಡುದೀಪ ಪ್ರದರ್ಶಿಸಿ ಪ್ರಶಸ್ತಿ ಗಳಿಸುತ್ತಿದ್ದ ಜಗದೀಶ್ ಅಮೀನ್ ಸುಂಕದಕಟ್ಟೆ ಅವರನ್ನು ಸನ್ಮಾನಿಸಲಾಯಿತು.
ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ವಿಲಿಯಂ ಸಿಕ್ವೇರಾ, ಇನ್ನರ್‌ವೀಲ್ ಕ್ಲಬ್ ಮಾಜಿ ಅಧ್ಯಕ್ಷೆ ಸಿಂತಿಯಾ ಕುಟಿನ್ಹೊ, ಕಾರ್ಯದರ್ಶಿ ರಾಧಾ ಶೆಣೈ, ಮುಲ್ಕಿ ಲಯನ್ಸ್ ಕ್ಲಬ್ ಅಧಕ್ಷ ದೇವಪ್ರಸಾದ್ ಪುನರೂರು, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಬರ್ಟನ್ ಸಿಕ್ವೇರಾ, ಸೌತ್ ಕೆನರಾ ಫೋಟೋಗ್ರಾಫರ‍್ಸ್ ಅಸೋಸಿಯೇಶನ್ ಮೂಲ್ಕಿ ವಲಯ ದ ಅಧ್ಯಕ್ಷ ನವೀನ್ ಕುಮಾರ್ ಕಟೀಲ್, ಮೆನ್ನಬೆಟ್ಟು ಭ್ರಾಮರೀ ಮಹಿಳಾ ಸಮಾಜದ ಅನುಷಾ ಕರ್ಕೆರಾ, ರೋಟರ‍್ಯಾಕ್ಟ್ ಕ್ಲಬ್ ಸಭಾಪತಿ ಸಂತೋಷ್ ಕುಮಾರ್, ನಮ್ಮಕಿನ್ನಿಗೋಳಿ ಡಾಟ್ ಕಾಮ್ ನ ಯಶವಂತ ಐಕಳ, ರೋಟರ‍್ಯಾಕ್ಟ್ ಮಾಜಿ ಜಿಲ್ಲಾ ಪ್ರತಿನಿಧಿ ಸುಮೀತ್ ಕುಮಾರ್, ವಿಜಯಾ ಕಲಾವಿದರ ಅಧ್ಯಕ್ಷ ಶರತ್ ಶೆಟ್ಟಿ, ಕೆ.ಬಿ. ಸುರೇಶ್ ಉಪಸ್ಥಿತರಿದ್ದರು.

ಫಲಿತಾಂಶ ವಿವರ
ಪ್ರಥಮ : ಪೂಜಾ ಎರೇಂಜರ‍್ಸ್ ಹಳೆಯಂಗಡಿ, ದ್ವಿತಿಂii ಗಿರೀಶ್ ಮಂಗಳೂರು, ತೃತಿಯಾ ಹರೀಶ್ ಕಾವೂರು, ಚತುರ್ಥ ಉಮೇಶ್ ಕಾವೂರು, ಪಂಚಮ ರಿಕ್ಷಾ ಚಾಲಕರು ಕಟೀಲು
ಪ್ರತಿಕೃತಿ ವಿಭಾಗ
ಪ್ರಥಮ: ಶ್ರೀಧರ ಮೂಡುಶೆಡ್ಡೆ (ಅಕ್ಷರದಾಮ ) ದ್ವಿತಿಯ: ಕಿಶೋರ್ ಕುತ್ತಾರು (ಐಫಲ್ ಟವರ್) ಪಡೆದರು.

Kinnigoli--23101409 Kinnigoli--23101410 Kinnigoli--23101411 Kinnigoli--23101412 Kinnigoli--23101413 Kinnigoli--23101414 Kinnigoli--23101415 Kinnigoli--23101416 Kinnigoli--23101417 Kinnigoli--23101418 Kinnigoli--23101419 Kinnigoli--23101420 Kinnigoli--23101421 Kinnigoli--23101422 Kinnigoli--23101423 Kinnigoli--23101424

Comments

comments

Comments are closed.

Read previous post:
Pakshikere-23101402
ಪಕ್ಷಿಕೆರೆ ಚರ್ಚ್ ಗೂಡುದೀಪ ಸ್ಪರ್ಧೆ

ಕಿನ್ನಿಗೋಳಿ: ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದ ವಾರ್ಷಿಕ ಹಬ್ಬ, ಸ್ವರ್ಣ ಮಹೋತ್ಸವ ದ ಅಂಗವಾಗಿ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಚರ್ಚ್ ವತಿಯಿಂದ ಬುಧವಾರ ಬೆಳಿಗ್ಗೆ ಸಾರ್ವಜನಿಕರಿಗಾಗಿ...

Close