ಪಕ್ಷಿಕೆರೆ ಚರ್ಚ್ ಗೂಡುದೀಪ ಸ್ಪರ್ಧೆ

ಕಿನ್ನಿಗೋಳಿ: ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದ ವಾರ್ಷಿಕ ಹಬ್ಬ, ಸ್ವರ್ಣ ಮಹೋತ್ಸವ ದ ಅಂಗವಾಗಿ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಚರ್ಚ್ ವತಿಯಿಂದ ಬುಧವಾರ ಬೆಳಿಗ್ಗೆ ಸಾರ್ವಜನಿಕರಿಗಾಗಿ ಗೂಡುದೀಪ ಸ್ಪರ್ಧೆ ನಡೆಯಿತು.
ಪಕ್ಷಿಕೆರೆ ಚರ್ಚ್ ಧರ್ಮ ಗುರು ಫಾ. ಆಂಡ್ರ್ಯೂ ಲಿಯೋ ಡಿಸೋಜ, ಚರ್ಚ್‌ನ ಪಾಲನಾ ಮಂಡಳಿಯ ಉಪಾಧ್ಯಕ್ಷ ವಿನ್ಸಂಟ್ ಡಿಸೋಜ, ಸಾಗರಿಕಾದ ದನಂಜಯಾ ಶೆಟ್ಟಿಗಾರ್, ತೀರ್ಪುಗಾರರಾದ ನಮ್ಮಟಿ.ವಿ ಯ ನವೀನ್ ಶೆಟ್ಟಿ ಎಡ್ಮಮಾರ್, ಉದಯವಾಣಿ ವರದಿಗಾರ ಶರತ್ ಶೆಟ್ಟಿ, ಕೆ.ಬಿ. ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.
ಗೂಡುದೀಪ ಸ್ಪರ್ಧೆಯಲ್ಲಿ ಪ್ರಥಮ ಪೂಜಾ ಎರೇಂಜರ‍್ಸ್ ಹಳೆಯಂಗಡಿ, ದ್ವಿತಿಯ ಹಾಗೂ ತೃತೀಯ ಪ್ರಶಸ್ತಿಯನ್ನು ಜಗದೀಶ್ ಸುಂಕದಕಟ್ಟೆ ಗಳಿಸಿದರು.
ಪ್ರತಿಕೃತಿ ವಿಭಾಗದಲ್ಲಿ ಶ್ರೀಧರ ಮೂಡುಶೆಡ್ಡೆ (ಅಕ್ಷರದಾಮ) ಪಡೆದರು.

Pakshikere-23101401 Pakshikere-23101402 Pakshikere-23101403 Pakshikere-23101404 Pakshikere-23101405 Pakshikere-23101406 Pakshikere-23101407 Pakshikere-23101408

Comments

comments

Comments are closed.

Read previous post:
Mulki-211009
ಪಂಚಾಯತಿ ಅಬಿವೃದ್ದಿಯಲ್ಲಿ ತಾರತಮ್ಯವಿಲ್ಲ

ಮೂಲ್ಕಿ: ಸರಕಾರದ ಅನುದಾನಗಳನ್ನು ಸದುಪಯೋಗಿಸಿಕೊಂಡು ಮೂಲ್ಕಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಅಬಿವೃದ್ದಿಯಲ್ಲಿ ತಾರತಮ್ಯ ಮಾಡದೆ ಜನರ ಕಲ್ಯಾಣಕ್ಕೆ ಪಂಚಾಯತಿ ಶ್ರಮಿಸುತ್ತಿದ್ದು ಜನರು ಇದನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕೆಂದು...

Close