ತುಡರ ಪರ್ಬದ ಲೇಸ್

ಮೂಲ್ಕಿ: ಪರ ಧರ್ಮವನ್ನು ನಿಂದಿಸದೆ ಅದರ ಬಗ್ಗೆ ಆಳ ಅಧ್ಯಯನ ನಡೆಸುವ ಮೂಲಕ ಸರ್ವತ್ರ ಶಾಂತಿ ಸಮಾಧಾನಗಳನ್ನು ಕಂಡುಕೊಳ್ಳಬಹುದು ಎಂದು ಕೇರಳ ಶಿವಗಿರಿ ಮಠದ ಶ್ರೀ ಸತ್ಯಾನಂದ ಸ್ವಾಮೀಜಿ ಹೇಳಿದರು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಯುವ ವಾಹಿನಿ ಮೂಲ್ಕಿ ಘಟಕದ ಆಶ್ರಯದಲ್ಲಿ ಜರುಗಿದ ತುಡರ ಪರ್ಬದ ಲೇಸ್ ಕಾರ್ಯಕ್ರಮದಲ್ಲಿ ಬಲಿಕಿಮರದಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಎಲ್ಲೋ ಹುಟಿದ ನದಿಗಳು ನಂತರ ಸಾಗರ ಸೇರುವಂತೆ ಎಲ್ಲಾ ಧರ್ಮಗಳು ಏಕದೇವ ವಿಶ್ವಾಸವನ್ನು ನೀಡುವುದರಿಂದ ಧರ್ಮದ ಹೆಸರಿನಲ್ಲಿ ನಡೆಸುವ ಹೋರಾಟ ನಿರರ್ಥಕ ವಾಗಿದ್ದು ದೇಶದ ಹಬ್ಬಹರಿದಿನಗಳನ್ನು ಎಲ್ಲರೂ ಸೇರಿ ಆಚರಿಸುವ ಮೂಲಕ ಶಾಂತಿ ಸಹಬಾಳ್ವೆ ಸಾಧ್ಯವಾಗಲಿದೆ ಈ ನಿಟ್ಟಿನಲ್ಲಿ ಯುವವಾಹಿನಿ ಮೂಲ್ಕಿ ಘಟಕದ ಕಾರ್ಯ ಅಭಿನಂದನೀಯ ಎಂದರು.
ದೀಪಾವಳಿ ಹಬ್ಬದ ಪ್ರಯುಕ್ತ ಹಿರಿಯ ನಾಟಕ ಬರಹಗಾರ ರಂಗಕರ್ಮಿ ಚರಂತಿಪೇಟೆ ಸುಂದರ ಅಂಚನ್ ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಪ್ರೇಮ್‌ನಾಥ್ ವಹಿಸಿದ್ದರು.
ಅತಿಥಿಗಳಾಗಿ ರಂಗಕರ್ಮಿ ಪರಮಾನಂದ ಸಾಲ್ಯಾನ್ ಸಸಿಹಿತ್ಲು, ಹೆಜಮಾಡಿ ಗ್ರಾಮಪಂ.ಸದಸ್ಯ ಮೊಹಮ್ಮದ್ ಕಬೀರ್,ಮೂಲ್ಕಿ ಅಮಲೋದ್ಭವ ಮಾತಾ ಚರ್ಚು ಪಾಲನಾ ಸಮಿತಿ ಉಪಾಧ್ಯಕ್ಷ ಹಾಗೂ ಮೂಲ್ಕಿ ರೋಟರಿ ಅಧ್ಯಕ್ಷ ಜೋಯಲ್ ಹೆರಾಲ್ಡ್ ಡಿಸೋಜಾ, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಹರಿಶ್ಚಂದ್ರ.ಪಿ.ಸಾಲ್ಯಾನ್, ಯುವವಾಹಿನಿ ಮೂಲ್ಕಿ ಘಟಕದ ಅಧ್ಯಕ್ಷ ಮೋಹನ್ ಸುವರ್ಣ, ಕಾರ್ಯದರ್ಶಿ ರಕ್ಷಿತಾ ಯೋಗೀಶ್ ಕೋಟ್ಯಾನ್,ಕೋಶಾಧಿಕಾರಿ ಚೇತನ್ ಕುಮಾರ್,ಕಾರ್ಯಕ್ರಮ ಸಂಯೋಜಕರಾದ ರಮಾನಾಥ ಸುವರ್ಣ ಮತ್ತು ಶಕಿಲಾ ಸುವರ್ಣ ಉಪಸ್ಥಿತರಿದ್ದರು.ಸುಗಂಧಿ ಸತೀಶ್ ಮತ್ತು ಚಿತ್ರಾ ಸುವರ್ಣ ಪ್ರಾರ್ಥಿಸಿದರು, ಮೋಹನ್ ಸುವರ್ಣ ಸ್ವಾಗತಿಸಿದರು, ಯೋಗೀಶ್ ಕೋಟ್ಯಾನ್ ಪ್ರಸ್ತಾವಿಸಿದರು. ಜಯಕುಮಾರ್ ಕುಮಾರ್ ಕುಬೆವೂರು ಸನ್ಮಾನ ಪತ್ರ ವಾಚಿಸಿದರು. ವಿಜಯ ಕುಮಾರ್ ಕುಬೆವೂರು, ಉದಯ ಅಮೀನ್ ಮಟ್ಟು ನಿರೂಪಿಸಿದರು. ರಕ್ಷಿತಾ ಯೋಗೀಶ್ ವಂದಿಸಿದರು.

Mulki-24101403

Comments

comments

Comments are closed.

Read previous post:
Mulki-24101402
17 ಅಡಿ ಎತ್ತರದ ಬೃಹತ್ ಗೂಡು ದೀಪ

ಮೂಲ್ಕಿ: ಎಸ್.ವಿ.ಟಿ ಗೆಳೆಯರ ಬಳಗದ ಸಂಯೋಜನೆಯಲ್ಲಿ ಸುಮಾರು 17 ಅಡಿ ಎತ್ತರದ ಬೃಹತ್ ಗೂಡು ದೀಪ ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಎದುರಿನ ಶ್ರೀ ವ್ಯಾಸಮಹರ್ಷಿ ವಿದ್ಯಾಪೀಠ ವೇದಪಾಠ...

Close