ಸ್ವಾವಲಂಬನೆ ಹಾಗೂ ಸ್ವಪ್ರಯತ್ನ ಮುಖ್ಯ

ಕಿನ್ನಿಗೋಳಿ : ಜೀವನ ಮತ್ತು ಸಮಾಜದಲ್ಲಿ ಯಶಸ್ಸು ಗಳಿಸಬೇಕಾದರೆ ಸ್ವಾವಲಂಬನೆ ಹಾಗೂ ಸ್ವಪ್ರಯತ್ನ ಮುಖ್ಯ ಎಂದು ಮೀನುಗಾರಿಕೆ ಮತ್ತು ಯುವ ಜನಾ ಕ್ರೀಡಾ ಸಚಿವ ಅಭಯಚಂದ್ರ ಜೈನ್ ಹೇಳಿದರು.
ಬುಧವಾರ ಕಟೀಲು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಿಸ್ತರಣಾ ಕಟ್ಟಡ ಹಾಗೂ ಪಶು ಆಹಾರ ದಾಸ್ತಾನು ಕೊಠಡಿ ಉದ್ಘಾಟಿಸಿ ಮಾತನಾಡಿದರು.
ಕಟೀಲು ಸಂತ ಜಾಕೋಬ ಚರ್ಚ್‌ನ ಧರ್ಮಗುರು ಫಾ. ಡಾ. ರೋನಾಲ್ಡ್ ಕುಟಿನ್ಹೊ ಆಶೀರ್ವಚನ ನೀಡಿದರು. ಮೆನ್ನಬೆಟ್ಟು ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಮೋನಪ್ಪ ಶೆಟ್ಟಿ ಎಕ್ಕಾರು, ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿರ್ದೇಶಕರುಗಳಾದ ಡಾ. ಬಿ.ವಿ. ಸತ್ಯನಾರಾಯಣ, ಕೆ.ಪಿ. ಸುಚರಿತ ಶೆಟ್ಟಿ, ಕೃಷ್ಣ ಭಟ್, ನರಹರಿ ಪ್ರಭು, ವೀಣಾ ಆರ್ ರೈ, ಮೆನ್ನಬೆಟ್ಟು ಪಂಚಾಯಿತಿ ಸದಸ್ಯೆ ರೋಜಿ ಪಿಂಟೊ, ಕಟೀಲು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ವಸಂತಿ ಎನ್. ಶೆಟ್ಟಿ, ಉಪಾಧ್ಯಕ್ಷೆ ಅಪ್ಪಿ, ನಿರ್ದೇಶಕರುಗಳಾದ ಸುಮತಿ ಎಸ್., ಪುಷ್ಪ ಜೆ. ಶೆಟ್ಟಿ, ಸುಮತಿ, ಮೇರಿ ಡಿಕೋಸ್ತ, ವಾರಿಜ ಎಸ್. ಶೆಟ್ಟಿ, ಭುವನೇಶ್ವರಿ ರಾವ್, ಜಲಜ, ವಿಸ್ತರಣಾಧಿಕಾರಿ ಮಾಲತಿ ಪಿ, ಕಾರ್ಯದರ್ಶಿ ಯಶೋದ ಆರ್ ಉಪಸ್ಥಿತರಿದ್ದರು.
ಕಟೀಲು ಸಂಜೀವ ಮಡಿವಾಳ ಕಾರ್ಯಕ್ರಮ ನಿರೂಪಿಸಿದರು.

Kinnigoli-24101401

Comments

comments

Comments are closed.

Read previous post:
KamalaRanchan
ಕಮಲಾ ಆರ್.ಅಂಚನ್

ಮೂಲ್ಕಿ: ಚಿತ್ರಾಪು ಶ್ರೀವಿಠೋಭ ಬಾಲಲೀಲಾ ಭಜನಾ ಮಂದಿರದ ಬಳಿಕ ರಾಜ್‌ಕಮಲ್ ನಿವಾಸಿ ಕಮಲಾ ಆರ್ ಆಂಚನ್ (78) ಅಲ್ಪಕಾಲದ ಅಸೌಖ್ಯದಿಂದ ಮುಂಬೈ ವಿಕ್ರೋಲಿಯ ಮಗಳ ಮನೆಯಲ್ಲಿ ಬುಧವಾರ...

Close