ಪೂಜಾ ದೀಪಾರಾಧನೆ

ಮೂಲ್ಕಿ: ಸಾಂಸಾರಿಕ, ವ್ಯವಹಾರಿಕ ಮತ್ತು ಶೈಕ್ಷಣಿಕ ಕಷ್ಟ ಕಾರ್ಪಣ್ಯಗಳಿಗೆ ಸರ್ವೈಶ್ವರ್ಯ ಪೂಜೆ ಶೀಘ್ರ ಫಲದಾಯಕವಾಗುತ್ತದೆ ಎಂದು ಕೇರಳ ಶಿವಗಿರಿ ಮಠದ ಶ್ರೀ ಸತ್ಯಾನಂದ ಸ್ವಾಮೀಜಿ ಹೇಳಿದರು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಯುವವಾಹಿನಿ ಮೂಲ್ಕಿ ಘಟಕದ ಸಂಯೋಜನೆಯಲ್ಲಿ ಕೇರಳ ಶಿವಗಿರಿ ಮಠದ ಶ್ರೀ ಸತ್ಯಾನಂದ ಸ್ವಾಮೀಜಿ ಪೌರೋಹಿತ್ಯದಲ್ಲಿ ನಡೆದ ಸರ್ವೈಶ್ವರ್ಯ ಪೂಜಾ ದೀಪಾರಾಧನೆ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದರು.
ದೀಪ ಅಭಿವೃದ್ಧಿಯ ಸಂಕೇತವಾಗಿದ್ದು ಅದರಲ್ಲಿ ಅಷ್ಟ ಲಕ್ಷ್ಮಿಯರನ್ನು ನಾರಾಯಣ ನಾಮದೊಂದಿಗೆ ಆರಾಧಿಸುವ ಅಪೂರ್ವ ಪದ್ದತಿಯು ಬಹಳ ಸರಳವೂ ಬಹು ಉತ್ತಮವೂ ಅಗಿದ್ದು ಎಲ್ಲರೂ ದೀಪಾವಳಿ ಸಮಯದಲ್ಲಿ ತಮ್ಮ ಮನೆಯಲ್ಲಿ ಆರಾಧನೆ ನಡೆಸುವ ಮೂಲಕ ಲಕ್ಷ್ಮೀ ಕ್ರಪಾ ಕಟಾಕ್ಷಗಳಿಸಬೇಕು ಎಂದರು.
ಈ ಸಂದರ್ಭ ದೀಪಗಳನ್ನು ಸಾಲಾಗಿರಿಸಿ ಪ್ರತೀಯೋಬ್ಬರೂ ತಮ್ಮ ಕುಟುಂಬಿಕರೊಂದಿಗೆ ಪುಷ್ಪದಳಗಳನ್ನು ಮಂತ್ರೋಚ್ಚಾರದೊಂದಿಗೆ ಶ್ರೀದೇವಿಗೆ ಸಮರ್ಪಿಸಿದರು.

Bhagyavan Sanil

Mulki-24101401

Comments

comments

Comments are closed.

Read previous post:
Kinnigoli-24101401
ಸ್ವಾವಲಂಬನೆ ಹಾಗೂ ಸ್ವಪ್ರಯತ್ನ ಮುಖ್ಯ

ಕಿನ್ನಿಗೋಳಿ : ಜೀವನ ಮತ್ತು ಸಮಾಜದಲ್ಲಿ ಯಶಸ್ಸು ಗಳಿಸಬೇಕಾದರೆ ಸ್ವಾವಲಂಬನೆ ಹಾಗೂ ಸ್ವಪ್ರಯತ್ನ ಮುಖ್ಯ ಎಂದು ಮೀನುಗಾರಿಕೆ ಮತ್ತು ಯುವ ಜನಾ ಕ್ರೀಡಾ ಸಚಿವ ಅಭಯಚಂದ್ರ ಜೈನ್ ಹೇಳಿದರು....

Close