ಕಟೀಲು ದಿ.ಪು.ಶ್ರೀನಿವಾಸ ಭಟ್ ಸಂಸ್ಮರಣೆ, ಪ್ರಶಸ್ತಿ ಪ್ರದಾನ

ಕಿನ್ನಿಗೋಳಿ : ಜಾನಪದೀಯ ಸಂಸ್ಕಾರ ಆಚಾರ ವಿಚಾರಗಳು ಮಾನವನ ಮನಸ್ಸಿನಗುಣವಾಗಿ ಕಾಲ ಕಾಲಕ್ಕೆ ಮೂಲ ಸ್ವರೂಪ ಬದಲಾವಣೆಯಾಗಿ ನೈಜತೆ ಹಾಗೂ ನಂಬಿಕೆ ಕಳೆದುಕೊಳ್ಳುತ್ತಿರುವುದು ಬೇಸರದ ವಿಷಯವಾಗಿದೆ ಎಂದು ಹಿರಿಯ ಜಾನಪದ ವಿದ್ವಾಂಸ ಕೆ. ಎಲ್ ಕುಂಡಂತಾಯ ಹೇಳಿದರು.
ಶನಿವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆದ ಕಟೀಲು ದಿ. ಪು. ಶ್ರೀನಿವಾಸ ಭಟ್ ಸಂಸ್ಮರಣಾರ್ಥ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಹಿರಿಯ ಸಾಹಿತಿ ಕೆ. ಜಿ. ಮಲ್ಯ ಪು. ಶ್ರೀನಿವಾಸ ಭಟ್ ರಚಿತ ಕೋಲಬಲಿ ಕೃತಿಯ ದ್ವಿತೀಯ ಅವೃತ್ತಿಯ ಬಿಡುಗಡೆಗೋಳಿಸಿದರು.
ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿ ದಿ. ಪು. ಶ್ರೀನಿವಾಸ ಭಟ್ ಅವರು ಪಶಸ್ತಿ ಪುರಸ್ಕಾರಗಳಿಗೆ ಮಾರು ಹೋಗದೆ ಜಾನಪದೀಯ ಸಂಸ್ಕೃತಿಗಳನ್ನು ಮುಂದಿನ ಪೀಳಿಗೆಗೆ ಬರಹ ರೂಪದಲ್ಲಿ ಹಾಗೂ ಸಮಕಾಲೀನರಲ್ಲಿ ಅದರ ಸಾರ ತಿಳಿಸಿ ಸಂಸ್ಕೃತಿ ಉಳಿಸುವಲ್ಲಿ ಶ್ರಮ ಪಟ್ಟವರು ಎಂದು ಹೇಳಿದರು.
ದ್ದರು. ಕಟೀಲು ದೇವಳ ಅರ್ಚಕ ವೆ.ಮೂ. ಲಕ್ಷ್ಮೀನಾರಾಯಣ ಆಸ್ರಣ್ಣ ಶುಭ ಹಾರೈಸಿದರು. ಸಾಹಿತಿ ಎನ್. ಪಿ. ಶೆಟ್ಟಿ ಸಂಸ್ಮರಣೆ ಭಾಷಣಗೈದರು. ಪತ್ರಕರ್ತ ರಘುನಾಥ ಕಾಮತ್ ಕೆಂಚನಕೆರೆ ಅಭಿನಂದನಾ ಭಾಷಣಗೈದರು.
ಜ್ಯೋತಿಷಿ ರಾಮಚಂದ್ರ ಭಟ್ ಶಿಮಂತೂರು, ಬೆಳ್ಮಣ್ಣು ಪದವಿ. ಪೂರ್ವ ಕಾಲೇಜು ಪ್ರಿನ್ಸಿಪಾಲ್ ಬಿ. ಜನಾರ್ದನ ಭಟ್, ಸಾಹಿತಿ ಅಜಾರು ನಾಗರಾಜ ರಾಯರು ಕಟೀಲು, ಹರಿಶ್ಚಂದ್ರ ರಾವ್ ಕಟೀಲು, ಕಾವ್ಯ ಶ್ರೀ ಮತ್ತಿತರರು ಉಪಸ್ಥಿತರಿದ್ದರು.
ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಪ್ರಸ್ತಾವನೆಗೈದು ಸ್ವಾಗತಿಸಿದರು. ಪು. ಗುರುಪ್ರಸಾದ್ ಭಟ್ ವಂದಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-25101401 Kinnigoli-25101402

 

Comments

comments

Comments are closed.

Read previous post:
Subramanya-udupa
ಸುಬ್ರಹ್ಮಣ್ಯ ಉಡುಪ ನಿಧನ

ಕಿನ್ನಿಗೋಳಿ : ಕೆಮ್ರಾಲ್ ಮೊಗಪಾಡಿ ಸುಬ್ರಹ್ಮಣ್ಯ ಉಡುಪ (71 ವರ್ಷ) ಶನಿವಾರ ನಿಧನರಾದರು. ಗ್ರಾಮಕರಣಿಕರಾಗಿ ನಿವೃತ್ತರಾಗಿದ್ದ ಮೃತರು, ಯಕ್ಷಗಾನ ಹವ್ಯಾಸಿ ಕಲಾವಿದ ಹಾಗೂ ಕೃಷಿಕರಾಗಿದ್ದರು. ಇಬ್ಬರು ಹೆಣ್ಣು ಮಕ್ಕಳನ್ನು...

Close