ಸಹಿ ಸಂಗ್ರಹ ಅಭಿಯಾನ

ಕಿನ್ನಿಗೋಳಿ: ರಿಲಯನ್ಸ್ ಎಸೋಸಿಯೇಶನ್ ಬೊಳ್ಳೂರು ಹಳೆಯಂಗಡಿ ನೇತೃತ್ವದಲ್ಲಿ ಕಿನ್ನಿಗೋಳಿ, ಪಕ್ಷಿಕೆರೆ ಮತ್ತು ಹಳೆಯಂಗಡಿ ಪರಿಸರದ ವಿವಿಧ ಸಂಘ ಸಂಸ್ಥೆಗಳ ಸಂಯೋಜನೆಯಲ್ಲಿ ಸೋಮವಾರ ಹಳೆಯಂಗಡಿ ಸಮೀಪದ ಇಂದಿರಾನಗರ ಬಸ್ಸನಿಲ್ದಾಣದ ಬಳಿ ರೈಲ್ವೇಗೇಟಿನ ಬಳಿ ಮೇಲ್ಸೇತುವೆ ನಿರ್ಮಿಸುವ ಬಗ್ಗೆ ಸಹಿ ಸಂಗ್ರಹ ಅಭಿಯಾನ ಮತ್ತು ಅಂಚೆ ಕಾರ್ಡ್ ಚಳುವಳಿ ನಡೆಯಿತು.
ತೋಕೂರು ಸುಬ್ರಹ್ಮಣ್ಯ ದೇವಳದ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ಗುಣಪಾಲ ಶೆಟ್ಟಿ ಅಂಚೆ ಕಾರ್ಡು ಬರೆಯುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ರಿಲಯನ್ಸ್ ಎಸೋಸಿಯೇಶನ್ ಅಧ್ಯಕ್ಷ ಆರಿಷ್, ಹಳೆಯಂಗಡಿ ಗ್ರಾಮ ಪಂಚಾಯಿತಿ ಸದಸ್ಯ ಖಾಸಿಂ ಮತ್ತಿತರರು ಉಪಸ್ಥಿತರಿದ್ದರು.
ಇಂದಿರಾನಗರದ ಬಳಿಯ ರೈಲ್ವೇಗೇಟ್ ಮೂಲಕ ಕಿನ್ನಿಗೋಳಿಯಿಂದ ಪಕ್ಷಿಕೆರೆ ಮಾರ್ಗವಾಗಿ ಹಳೆಯಂಗಡಿ ಕಡೆಗೆ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತಿದ್ದು ಪ್ರತಿದಿನ 34 ಬಸ್ಸುಗಳು ಸುಮಾರು 125 ಟ್ರಿಪ್‌ಗಳನ್ನು ನಡೆಸುತ್ತಿವೆಲಲ್ಲದೆ ಬಜ್ಪೆ ವಿಮಾನ ನಿಲ್ದಾಣ, ಕಟೀಲು ದೇವಸ್ಥಾನ, ಮೂಡಬಿದ್ರೆಯಂತಹ ನಗರಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆಯಾಗಿದೆ. ದಿನವೊಂದಕ್ಕೆ ಈ ಗೇಟು ಮೂಲಕ 40 ರೈಲುಗಳು ಹಾಗು ಕಲ್ಲಿದ್ದಲ್ಲಿಗೆ ಸಂಬಂಧಪಟ್ಟ ಸುಮಾರು 8 ರೈಲುಗಲೂ ಓಡಾಡುತ್ತಿದ್ದು ಪೂರ್ಣ ಪ್ರಮಾಣದ ಯುಪಿಸಿಎಲ್ ಸ್ಥಾಪನೆಯಾದಲ್ಲಿ ಕಲ್ಲಿದ್ದಲ್ಲಿನ ರೈಲುಗಳು ದ್ವಿಗುಣಗೊಳ್ಳುವ ಸಂಭವವಿದೆ. ಮೆಲ್ಸೇತುವೆ ಇಲ್ಲದ ರೈಲ್ವೆ ಗೇಟ್ ನಿಂದಾಗಿ ಸಾರ್ವಜನಿಕರಿಗೆ ಶಾಲಾ ಮಕ್ಕಳಿಗೆ , ಅಂಬುಲೆನ್ಸ್, ವಾಹನ ಸವಾರರು ಮತ್ತು ನಿತ್ಯ ಪ್ರಯಾಣಿಕರಿಗೆ ಸಮಸ್ಸ್ಯೆಯುಂಟಾಗುತ್ತಿದೆ. ಹಳೆಯಂಗಡಿಯಿಂದ ಕಿನ್ನಿಗೋಳಿವರೆಗಿನ ನಾಗರಿಕರ ಅಹವಾಲನ್ನು ಸಂಬಂದಪಟ್ಟ ಅಧಿಕಾರಿಗಳಿಗೆ ಹಾಗೂ ಸರಕಾರಕ್ಕೆ ಮಂಡಿಸುವ ಉದ್ದೇಶದಿಂದ ರೈಲ್ವೇಗೇಟಿನ ಬದಲಾಗಿ ಈ ರಸ್ತೆಗೆ ಮೇಲ್ಸೇತುವೆ ನಿರ್ಮಿಸುವಂತೆ ರೈಲ್ವೆ ಸಚಿವರಾದ ಸದಾನಂದ ಗೌಡ ಅವರಿಗೆ ಕಾರ್ಡ್ ಚಳುವಳಿ ಮತ್ತು ಸಹಿ ಸಂಗ್ರಹ ಅಭಿಯಾನದ ಮೂಲಕ ಒತ್ತಾಯಿಸಲಾಯಿತು, ಸಾವಿರಾರು ಮಂದಿ ಕಾರ್ಡ್ ಬರೆದು ಒತ್ತಾಯಿಸಿದರು.

Haleyangadi-27101401 Haleyangadi-27101402 Haleyangadi-27101403 Haleyangadi-27101404 Haleyangadi-27101405

Comments

comments

Comments are closed.

Read previous post:
Kinnigoli-27101409
ಪಕ್ಷಿಕೆರೆ ಚರ್ಚ್‌ – ಹೊರೆಕಾಣಿಕೆ ಮೆರವಣಿಗೆ

ಕಿನ್ನಿಗೋಳಿ: ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದ ವಾರ್ಷಿಕ ಹಬ್ಬ, ಸ್ವರ್ಣ ಮಹೋತ್ಸವದ ಪ್ರಯುಕ್ತ ಭಾನುವಾರ ಕಿನ್ನಿಗೋಳಿ ಚರ್ಚ್‌ನಿಂದ ಪಕ್ಷಿಕೆರೆ ಚರ್ಚ್‌ವರೆಗೆ ಹೊರೆಕಾಣಿಕೆ ಮೆರವಣಿಗೆ ಹಾಗೂ ದಿವ್ಯ ಬಲಿ...

Close