ಪಕ್ಷಿಕೆರೆ ಉಚಿತ ಸಾಮೂಹಿಕ ವಿವಾಹ

 ಕಿನ್ನಿಗೋಳಿ: ಮಕ್ಕಳನ್ನು ಉತ್ತಮ ಧಾರ್ಮಿಕ ಸಂಸ್ಕಾರ ದೊಂದಿಗೆ ಬೆಳೆಸುವ ಕರ್ತವ್ಯ ನಮ್ಮದಾಗಬೇಕು ಸಂಘಟಿತ ನಿರಂತರ ಪ್ರಾರ್ಥನೆ ಹಾಗೂ ಪರಸ್ಪರ ಸಹಕಾರ ಮನೋಭಾವನೆಯು ಬಾಳಿನ ಉನ್ನತಿಗೆ ಕಾರಣವಾಗುವುದು ಎಂದು ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ವಂ. ಡಾ. ಎಲೋಷಿಯಸ್ ಪಾವ್ಲ್ ಡಿಸೋಜ ಹೇಳಿದರು.
ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದ ವಾರ್ಷಿಕ ಹಬ್ಬ ಸ್ವರ್ಣ ಮಹೋತ್ಸವ ಮತ್ತು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ ನೀಡಿ ಅವರಿಗೆ ಜೀವನದ ಯಶಸ್ಸಿನ ದಾರಿ ತೋರಿಸಿದಲ್ಲಿ ಭಗವಂತನ ಕೃಪಕಟಾಕ್ಷ ಖಂಡಿತಾ ಸಿಗಲಿದೆ. ಎಂದರು.

ಉಚಿತ ಸಾಮೂಹಿಕ ವಿವಾಹ ಹಾಗೂ ವಾರ್ಷಿಕ ಹಬ್ಬದ ದಿವ್ಯ ಬಲಿ ಪೂಜೆಯನ್ನು ಬಿಷಪ್ ವಂ. ಡಾ. ಎಲೋಷಿಯಸ್ ಪ್ಲಾವ್ ಡಿಸೋಜಾ ನೆರೆವೇರಿಸಿದರು
ಈ ಸಂದರ್ಭ ಪಕ್ಷಿಕೆರೆ ಚರ್ಚಿನಲ್ಲಿ ಕಳೆದ ೫೦ ವರ್ಷಗಳಿಂದ ಸೇವೆ ಸಲ್ಲಿಸಿದ ಧರ್ಮಗುರುಗಳು, ಸಹಾಯಕ ಧರ್ಮಗುರುಗಳು, ಭಗಿನಿಯರು, ಸ್ಥಾಪಕ ಸದಸ್ಯರು, ಮಾಜಿ ಉಪಾಧ್ಯಕ್ಷರುಗಳು ಹಾಗೂ ವಿಶೇಷ ದಾನ ನೀಡಿದ ದಾನಿಗಳನ್ನು ಬಿಷಪ್‌ರು ಗೌರವಿಸಿದರು.
ಸ್ವರ್ಣ ಮಹೋತ್ಸವದ ಸವಿ ನೆನಪಿಗಾಗಿ ಅರ್ಹ ಫಲಾನುಭವಿ ಮಹಿಳೆಗೆ ನೂತನ ಮನೆಯ ಕೀಲಿಕೈಯನ್ನು ಬಿಷಪ್ ಹಸ್ತಾಂತರಿಸಿದರು. ಚರ್ಚಿನ ಯಾತ್ರಿಕ್ ಸಂಚಿಕೆಯನ್ನು ಬಿಷಪರು ಬಿಡುಗಡೆಗೊಳಿಸಿದರು. ಸ್ವರ್ಣ ಮಹೋತ್ಸವದ ಪರವಾಗಿ ಬಿಷಪ್ ವಂ. ಡಾ. ಎಲೋಷಿಯಸ್ ಪ್ಲಾವ್ ಡಿಸೋಜಾರನ್ನು ವಿಶೇಷವಾಗಿ ಗೌರವಿಸಲಾಯಿತು.
ಈ ಸಂದರ್ಭ ನಡೆದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿಜಯಡ್ಕದ ಮೆಲ್ವಿನ್ ಮತ್ತು ವಿಟ್ಲದ ಫಿಲೋಮಿನಾ, ಬಜಾಲ್‌ನ ಮಾರ್ಟಿನ್ ಮತ್ತು ತಲ್ಲೂರಿನ ಈವ್, ದಾಮಸ್‌ಕಟ್ಟೆಯ ಜೈಸನ್ ಮತ್ತು ಪಕ್ಷಿಕೆರೆಯ ಮರಿಯಾ, ನಿಡ್ಡೋಡಿಯ ಲಾರೆನ್ಸ್ ಮತ್ತು ಸುನೀತಾ ದಾಂಪತ್ಯ ಜೀವನ ಸ್ವೀಕರಿಸಿದರು.
ಕಿನ್ನಿಗೋಳಿ ವಲಯದ ಪ್ರಧಾನ ಧರ್ಮಗುರು ಫಾ. ವಿನ್ಸೆಂಟ್ ಮೊಂತೆರೊ ಸಹಿತ ಪರಿಸರದ ಹಾಗೂ ಹೊರ ರಾಜ್ಯದ ಚರ್ಚುಗಳ ಧರ್ಮಗುರುಗಳು ಮತ್ತು ಪಕ್ಷಿಕೆರೆ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ವಿನ್ಸೆಂಟ್ ಡಿ ಸೋಜಾ ಉಪಸ್ಥಿತರಿದ್ದರು.
ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದ ಪ್ರಧಾನ ಧರ್ಮಗುರು ಫಾ. ಆಂಡ್ರ್ಯೂ ಲಿಯೋ ಡಿ ಸೋಜ ಸ್ವಾಗತಿಸಿದರು. ಕಾನ್ವೆಂಟ್ ಮುಖ್ಯಸ್ಥೆ ಭಗಿನಿ ಶೀಭಾ, ಝೀಟಾ ಕುಟೀನ್ಹೋ ಸನ್ಮಾನಿತರನ್ನು ಪರಿಚಯಿಸಿದರು. ಪಕ್ಷಿಕೆರೆ ಚರ್ಚಿನ ಸಹಾಯಕ ಧರ್ಮ ಗುರು ಪ್ಯಾಟ್ರಿಕ್ ಸಿಕ್ವೇರಾ, ವಂದಿಸಿದರು. ಪಾಲನಾ ಸಮಿತಿ ಕಾರ್ಯದರ್ಶಿ ಲೂಸಿ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.

Pakshikere-28101409 Pakshikere-28101410 Pakshikere-28101411

Comments

comments

Comments are closed.

Read previous post:
Yekkar-28101408
ಸಮಾಜ ಮುಖಿ ಸೇವಾ ಕಾರ್ಯಗಳಿಂದ ಆತ್ಮ ಸಂತೃಪ್ತಿ

 ಕಿನ್ನಿಗೋಳಿ: ಯಾವುದೇ ಪ್ರತಿಫಲಾಪೇಕ್ಷೆ ಬಯಸದೆ ಸಮಾಜ ಮುಖಿ ಸೇವಾ ಕಾರ್ಯಗಳನ್ನು ಮಾಡಿದಾಗ ಮಾತ್ರ ಆತ್ಮ ಸಂತೃಪ್ತಿ ಸಿಗುತ್ತದೆ. ಎಂದಿ ಕಿನ್ನಿಗೋಳಿ ರೋಟರಿ ಅಧ್ಯಕ್ಷ ವಿಲಿಯಂ ಸಿಕ್ವೇರಾ ಹೇಳಿದರು. ಎಕ್ಕಾರು...

Close