ಶಿಕ್ಷಕರನ್ನು ಗೌರವಿಸುವುದು ನಮ್ಮ ದೇಶದ ಸಂಸ್ಕ್ರತಿ

ಮೂಲ್ಕಿ: ವಿದ್ಯಾರ್ಥಿ ಜೀವನದಲ್ಲಿ ಮಕ್ಕಳನ್ನು ತಿದ್ದಿ ತೀಡಿ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಹಾಗೂ ಆವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಭವಿಷ್ಯವನ್ನು ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದ್ದು ಗುರು ಹಿರಿಯರನ್ನು, ಶಿಕ್ಷಕರನ್ನು ಗೌರವಿಸುವ ನಮ್ಮ ದೇಶದ ಹಿರಿಯರಿಂದ ಬಂದಂತಹ ಸಂಸ್ಕ್ರತಿಯನ್ನು ಯುವ ಪೀಳಿಗೆಯು ಅನುಸರಿಸಬೇಕೆಂದು ಅಂತರಾಷ್ಟ್ರೀಯ ಖ್ಯಾತಿಯ ವಾಸ್ತು ತಜ್ನ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಮೂಲ್ಕಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯ ಹಾಗೂ ತನ್ನ ಶಿಕ್ಷಕರಾದ ಯಕ್ಷಗಾನ ಅರ್ಥಧಾರಿ ಶಿಮಂತೂರು ಸುಬ್ಬರಾವ್ ಅವರನ್ನು ಶಿಮಂತೂರಿನ ಅವರ ಮನೆಯಲ್ಲಿ ಗೌರವಿಸಿ ಮಾತನಾಡಿದ ಅವರು ತನ್ನ ಶಿಕ್ಷಣದ ಅವಧಿಯಲ್ಲಿ ಶಿಕ್ಷಕರು ನೀಡಿದ ಶಿಕ್ಚಣದಿಂದ ತಾನು ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಲು ಸಾಧ್ಯವಾಗಿದ್ದು ಇಂದಿನ ದಿನಗಳಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದ್ದು ಆಧುನಿಕತೆಗೆ ತಕ್ಕಂತೆ ಶಿಕ್ಷಣ ಪದ್ದತಿಯಲ್ಲಿ ಹಾಗೂ ಶಿಕ್ಷಕರಲ್ಲಿ ಬದಲಾವಣೆಯಾದಾಗ ಭವಿಷ್ಯದಲ್ಲಿ ಸಮಾಜಕ್ಕೆ ಉತ್ತಮ ವ್ಯಕ್ತಿಗಳನ್ನು ನೀಡಲು ಸಾಧ್ಯವೆಂದು ಅವರು ಹೇಳಿದರು. ಫ್ರೈಡ್ ಆಫ್ ಏಷ್ಯಾ ಪ್ರಶಸ್ತಿ ಪುರಸ್ಕ್ರತ, ಬೆಳಪು ಡಾ ದೇವಿ ಪ್ರಸಾದ್ ಶೆಟ್ಟಿ, ಹಿರಿಯ ಜ್ಯೋತಿಷಿ ಕಿಲ್ಪಾಡಿ ಗೋವಿಂದ ಭಟ್, ಶಾರದ ಗೋವಿಂದ ಭಟ್, ಸ್ವಾಮೀಜಿಯವರ ಆಶ್ರಮದ ಸಂಚಾಲಕ ಮಧು ಆಚಾರ್ಯ, ಗಿರೀಶ್ ಕಾಮತ್, ಸುಬ್ಬರಾವ್ ಮತ್ತಿತರಿದ್ದರು.

Prakash Suvarna

Mulki-28101403

Comments

comments

Comments are closed.

Read previous post:
Mulki-28101401
ಮುಲ್ಕಿ ಸಬ್-ರಿಜಿಸ್ಟಾರ್ ಕಛೇರಿ ಗೋಳು

ಮುಲ್ಕಿ: ಮುಲ್ಕಿ ಪೋಲೀಸ್ ಠಾಣೆಯ ರಸ್ತೆಯಲ್ಲಿ ಕಾರ‍್ಯಾಚರಿಸುತ್ತಿರುವ ಸಬ್ ರಿಜಿಸ್ಟಾರ್ ಕಛೇರಿ ಅವ್ಯವಸ್ಥೆಗಳ ಆಗರವಾಗಿದ್ದು ಇಲ್ಲಿಗೆ ಅನೇಕ ಜನರು ವ್ಯವಹಾರಕ್ಕೆ ಬರುತ್ತಿದ್ದು ಇಲ್ಲಿನ ಅವ್ಯವಸ್ಥೆಗಳನ್ನು ಕಂಡು ಸರಕಾರಕ್ಕೆ...

Close