ಜನಪರ ಸೇವಾ ಕಾಳಜಿ ಇರಲಿ

ಕಿನ್ನಿಗೋಳಿ: ಸಂಘ ಸೇವಾ ಸಂಸ್ಥೆಗಳು ಜನಪರ ಸೇವಾ ಕಾಳಜಿಯೊಂದಿಗೆ ಅಭಿವೃದ್ಧಿ ಪರ ಕೆಲಸ ಕಾರ್ಯಗಳನ್ನು ಮಾಡಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ರೋಟರಿ ೩೧೮೦ರ ಗವರ್ನರ್ ಡಾ| ಭಾಸ್ಕರ್ ಎಸ್. ಹೇಳಿದರು.
ಸೋಮವಾರ ಕಿನ್ನಿಗೋಳಿ ರೋಟರಿ ಕ್ಲಬ್‌ಗೆ ಅಧಿಕೃತ ಭೇಟಿ ನೀಡಿದ ಸಂದರ್ಭ ಕಿನ್ನಿಗೋಳಿ ರಾಜಾಂಗಣ ಸಭಾ ಭವನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದರು.
ಈ ಸಂದರ್ಭ ಉಲ್ಲಂಜೆ ಹಿರಿಯ ಪ್ರಾಥಮಿಕ ಶಾಲೆಯ ಗ್ರಂಥಾಲಯಕ್ಕೆ ಪುಸ್ತಕಗಳನ್ನು ವಿತರಿಸಿದರು.
ಸಹಾಯಕ ಗವರ್ನರ್ ಎಮ್. ಜಿ. ನಾಗೇಂದ್ರ ರೋಟರಿ ಮುಖವಾಣಿ ಸಿಂಚನವನ್ನು ಬಿಡುಗಡೆಗೊಳಿಸಿದರು.
ಕಿನ್ನಿಗೋಳಿ ರೋಟರಿಗೆ ರಘುರಾಮ ಶೆಟ್ಟಿ, ಜಿನರಾಜ ಜೆ. ಬಂಗೇರ ಅವರನ್ನು ಹೊಸ ಸದಸ್ಯರಾಗಿ ಸೇರಿಸಲಾಯಿತು.
ಮಂಜುಳಾ ಭಾಸ್ಕರ್, ವಲಯ ಸೇನಾನಿ ಶರತ್ ಶೆಟ್ಟಿ, ಕಿನ್ನಿಗೋಳಿ ರೋಟರಿ ಅಧ್ಯಕ್ಷ ವಿಲಿಯಂ ಸಿಕ್ವೇರಾ, ಕಾರ್ಯದರ್ಶಿ ಗಂಗಾಧರ ಶೆಟ್ಟಿ ಉಪಸ್ಥಿತರಿದ್ದರು. ಕಳ್ಳಿಗೆ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigolii-28101406

Comments

comments

Comments are closed.

Read previous post:
Kinnigolii-28101405
ಕಿನ್ನಿಗೋಳಿ ನಗರ ಸಂಕೀರ್ತನೆ

ಕಿನ್ನಿಗೋಳಿ: ಕಿನ್ನಿಗೋಳಿಯ ಶ್ರೀ ರಾಮಮಂದಿರದಲ್ಲಿ ಸೋಮವಾರ ನಗರ ಭಜನೆಯ ಭಜನಾ ಮಂಗಲೋತ್ಸವ ನಡೆಯಿತು. ಶ್ರೀ ರಾಮಮಂದಿರದ ಅಧ್ಯಕ್ಷ ಕೆ. ಅಚ್ಚುತ ಮಲ್ಯ, ಅರ್ಚಕ ವೆ.ಮೂ. ಗಿರೀಶ್ ಭಟ್, ಮಂದಿರ...

Close