ಶ್ರೀದೇವಿ ನೃತ್ಯ ಕೇಂದ್ರದ ನೃತ್ಯ ಕಾರ್ಯಾಗಾರ

ಕಿನ್ನಿಗೋಳಿ: ಕಲಾವಿದರಿಗೆ ಕಲೆಯ ಬಗ್ಗೆ ಆಳವಾದ ಅಧ್ಯಯನ, ಆಸಕ್ತಿ, ವಿಭಿನ್ನ ಚಿಂತನಾಶಕ್ತಿ ಮೈಗೂಡಿಸಿದಾಗ ಕಲೆಯು ವಿಕಸನಗೊಳ್ಳುವುದು ಎಂದು ಕಸಾಪದ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ಮಂಗಳವಾರ ಪುನರೂರು ಶ್ರೀ ವಿಶ್ವನಾಥ ದೇವಳದಲ್ಲಿ ಮಂಗಳೂರಿನ ಶ್ರೀದೇವಿ ನೃತ್ಯ ಕೇಂದ್ರದ ಆಶ್ರಯದಲ್ಲಿ ಕಳೆದ ಮೂರುದಿನಗಳಿಂದ ನಡೆಯುತ್ತಿರುವ ನೃತ್ಯ ಹಾಗೂ ಅಭಿನಯ ಕಾರ್ಯಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಯುಗಪುರುಷದ ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು. ಪುನರೂರು ದೇವಳದ ಧರ್ಮದರ್ಶಿ ಪಟೇಲ್ ವೆಂಕಟೇಶ್ ರಾವ್ , ಸಾಹಿತಿ ಶಕುಂತಳಾ ಭಟ್, ನೃತ್ಯಗುರು ಜಯಲಕ್ಷ್ಮೀ ಆಳ್ವ ಕಾರ್ಯಗಾರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು. ಶಿಕ್ಷಕಿ ಆರತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ನಂದಿನಿ ರಮಣಿ ಚೆನೈ ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು. ನಂತರ ನೃತ್ಯ ಕಲಾ ಸಿಂಧು ಕೇಂದ್ರದ ಪೂರ್ಣಿಮ ಗುರುರಾಜ್ ಅವರ ಶಿಷ್ಯೆಯಂದಿರು ನೃ ಕಾರ್ಯಕ್ರಮ ನೀಡಿದರು.

Kinnigolii-28101407

Comments

comments

Comments are closed.

Read previous post:
ಜನಪರ ಸೇವಾ ಕಾಳಜಿ ಇರಲಿ

ಕಿನ್ನಿಗೋಳಿ: ಸಂಘ ಸೇವಾ ಸಂಸ್ಥೆಗಳು ಜನಪರ ಸೇವಾ ಕಾಳಜಿಯೊಂದಿಗೆ ಅಭಿವೃದ್ಧಿ ಪರ ಕೆಲಸ ಕಾರ್ಯಗಳನ್ನು ಮಾಡಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ರೋಟರಿ ೩೧೮೦ರ ಗವರ್ನರ್ ಡಾ| ಭಾಸ್ಕರ್ ಎಸ್....

Close