ಮುಲ್ಕಿ ಸಬ್-ರಿಜಿಸ್ಟಾರ್ ಕಛೇರಿ ಗೋಳು

ಮುಲ್ಕಿ: ಮುಲ್ಕಿ ಪೋಲೀಸ್ ಠಾಣೆಯ ರಸ್ತೆಯಲ್ಲಿ ಕಾರ‍್ಯಾಚರಿಸುತ್ತಿರುವ ಸಬ್ ರಿಜಿಸ್ಟಾರ್ ಕಛೇರಿ ಅವ್ಯವಸ್ಥೆಗಳ ಆಗರವಾಗಿದ್ದು ಇಲ್ಲಿಗೆ ಅನೇಕ ಜನರು ವ್ಯವಹಾರಕ್ಕೆ ಬರುತ್ತಿದ್ದು ಇಲ್ಲಿನ ಅವ್ಯವಸ್ಥೆಗಳನ್ನು ಕಂಡು ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ದಿನಕ್ಕೆ ಲಕ್ಷಗಟ್ಟಲೆ ಆದಾಯವಿರುವ ಈ ಕಛೇರಿ ಹರಕು ಮುರುಕು ಕಟ್ಟಡದಲ್ಲಿದ್ದು ಬೀಳುವ ಹಂತದಲ್ಲಿದೆ. ಸರಕಾರದ ಅನುದಾನದಲ್ಲಿ ಬದಿಯಲ್ಲೇ ಹೊಸ ಕಟ್ಟಡ ಸಿದ್ದವಾಗಿದ್ದರೂ ಉದ್ಘಾಟನೆಗೆ ಕಾಲ ಕೂಡಿ ಬಂದಿಲ್ಲ ಹಾಗೂ ಸುಮಾರು 3 ಲಕ್ಷ ವೆಚ್ಚದ ಸರಕಾರಿ ವೆಚ್ಚದಲ್ಲಿ ನೀಡಲಾದ ಹೊಸ ಜನರೇಟರ್ ಸಿಬ್ಬಂದಿಗಳ ನಿರ್ಲ್ಯಕ್ಷದಿಂದ ರಕ್ಷಣಾ ಕವಚವಿಲ್ಲದೆ ಅಪಾಯದಲ್ಲಿದೆ.
ಸರಕಾರಕ್ಕೆ ಲಕ್ಷಗಟ್ಟಲೆ ಆದಾಯವಿರುವ ಈ ಕಛೇರಿಯಲ್ಲಿ ಕೆಲಸಕ್ಕೆಂದು ಬರುವ ಜನರ ಪಾಡು ಅದರಲ್ಲೂ ಮಹಿಳೆಯರ ಪಾಡು ಹೇಳತೀರದು, ಶೌಚಾಯದ ಸಮಸ್ಯೆ ಎದ್ದು ಕಾಣುತ್ತಿದೆ. ಕುಡಿಯುವ ನೀರಿನ ವ್ಯವಸ್ಥೆಯಂತೂ ಯಾರಿಗೂ ಇಲ್ಲ ಕಛೇರಿಗೆಂದು ಕಟ್ಟಿದ ನೀರಿನ ಟ್ಯಾಂಕ್ ಮಣ್ಣುಪಾಲಾಗುತ್ತಿದೆ. ಕಛೇರಿಗೆ ಬಂದವರು ತಮ್ಮ ಕೆಲಸ ಆಗುವವರೆಗೂ ಅದರಲ್ಲೂ ಮಳೆಗಾಲದಲ್ಲಿ ಕುಳಿತುಕೊಳ್ಳಲು ಅಥವಾ ನಿಲ್ಲಲು ಜಾಗವಿಲ್ಲದಂತಹ ಪರೀಸ್ಥಿತಿ ಇದೆ. ಕೋಟಿಕಟ್ಟಲೆ ದಾಖಲೆಗಳು ಇರುವ ಈ ಕಟ್ಟಡದ ಉಸ್ತುವಾರಿ ನೋಡಿಕೊಳ್ಳಲು ಭದ್ರತಾ ಸಿಬ್ಬಂದಿಯೂ ಇಲ್ಲದೆ ಸರಿಯಾದ ಆವರಣಗೋಡೆಯೂ ಇಲ್ಲದೆ ಸರಕಾರದ ದಿವ್ಯನಿರ್ಲ್ಯಕ್ಷಕ್ಕೆ ಒಳಗಾಗಿದೆ.
ಸರಕಾರದಿಂದ ಸುಮಾರು 3 ಲಕ್ಷ ವೆಚ್ಚದಲ್ಲಿ ಹೊಸ ಜನರೇಟರನ್ನು ಕಛೇರಿಗೆ ಅಳವಡಿಸಲಾಗಿದ್ದು ಇದನ್ನು ತೆರೆದ ಸ್ಥಳದಲ್ಲೇ ಇರಿಸಲಾಗಿದೆ. ತೆರೆದ ಸ್ಥಳದಲ್ಲಿ ಕಳ್ಳ-ಕಾಕರರ ವಕ್ರ ದೃಷ್ಠಿ ಇದರ ಮೇಲೆ ಬೀಳುವ ಮೊದಲೇ ಸುರಕ್ಷಿತ ಜಾಗಕ್ಕೆ ವರ್ಗಾಯಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Puneethakrishna

Mulki-28101401 Mulki-28101402

Comments

comments

Comments are closed.

Read previous post:
Haleyangadi-27101405
ಸಹಿ ಸಂಗ್ರಹ ಅಭಿಯಾನ

ಕಿನ್ನಿಗೋಳಿ: ರಿಲಯನ್ಸ್ ಎಸೋಸಿಯೇಶನ್ ಬೊಳ್ಳೂರು ಹಳೆಯಂಗಡಿ ನೇತೃತ್ವದಲ್ಲಿ ಕಿನ್ನಿಗೋಳಿ, ಪಕ್ಷಿಕೆರೆ ಮತ್ತು ಹಳೆಯಂಗಡಿ ಪರಿಸರದ ವಿವಿಧ ಸಂಘ ಸಂಸ್ಥೆಗಳ ಸಂಯೋಜನೆಯಲ್ಲಿ ಸೋಮವಾರ ಹಳೆಯಂಗಡಿ ಸಮೀಪದ ಇಂದಿರಾನಗರ ಬಸ್ಸನಿಲ್ದಾಣದ ಬಳಿ...

Close