2015ರ ವರ್ಷ ಭವಿಷ್ಯ ಕೃತಿ ಬಿಡುಗಡೆ

ಮೂಲ್ಕಿ: ಪೂರ್ವಾರ್ಜಿತ ಜ್ಞಾನದಿಂದ ಸಮಾಜದ ಉನ್ನತಿಗಾಗಿ ಸಹಕರಿಸುವ ಪ್ರತಿಭಾನ್ವಿತರನ್ನು ಗೌರವಿಸುವುದು ಸಮಾಜದ ಆದ್ಯ ಕರ್ತವ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.
ಮೂಲ್ಕಿಯ ಪುನರೂರು ಟೂರಿಸ್ಟ್ ಹೋಂನ ಸಭಾಂಗಣದಲ್ಲಿ ಜರಗಿದ ಮಂಗಳೂರು ಚಿತ್ತಾ ಪಬ್ಲಿಕೇಷನ್ ಪ್ರಕಾಶಿತ ಜ್ಯೋತಿಷಿ ಹಾಗೂ ಪತ್ರಿಕಾ ಆಂಕಣಕಾರ ಹರಿಶ್ಚಂದ್ರ ಪಿ ಸಾಲ್ಯಾನ್ ಮೂಲ್ಕಿ ರವರು ರಚಿಸಿರುವ 2015ರ ವರ್ಷ ಭವಿಷ್ಯ ಕೃತಿಯನ್ನು ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಅರ್ಚಕ ಶ್ರೀಪತಿ ಉಪಾಧ್ಯಾಯ ಆಶೀರ್ವಚನಗೈದು, ದೈವ ಕೃಪೆ ಮತ್ತು ಆಳ ಅದ್ಯಯನದಿಂದ ಗಳಿಸಲಾಗುವ ಜ್ಯೋತಿಷ್ಯ ಶಾಸ್ತ್ರವನ್ನು ಪ್ರವೃತ್ತಿಯಾಗಿ ಸ್ವೀಕರಿಸಿ ಪ್ರತಿಫಲಾಪೇಕ್ಷೆ ಇಲ್ಲದೆ ಜನ ಜೀವನದ ಅಭ್ಯುದಯಕ್ಕೆ ಸಹಕರಿಸುವ ಹರಿಶ್ಚಂದ್ರ ಸಾಲ್ಯಾನ್ ಕಾರ್ಯ ಸ್ತುತ್ಯರ್ಹ ಎಂದರು. ಕೃತಿಯ ಬಗ್ಗೆ ಮಾತನಾಡಿದ ಹಿರಿಯ ಸಾಹಿತಿ ಎನ್.ಪಿ.ಶೆಟ್ಟಿ ಜನ ಸಾಮಾನ್ಯರಿಗೂ ಸುಲಭವಾಗಿ ಅರ್ಥೈಸುವ ರೀತಿಯಲಿ ದಿನ, ನಕ್ಷತ್ರ, ರಾಶಿ ಭವಿಷ್ಯ ನೀಡಲು ಅತೀವ ಅಧ್ಯಯನ ಹಾಗೂ ಕಾರ್ಯ ಕ್ಷಮತೆ ಅಗತ್ಯವಿದ್ದು ಸಾಲ್ಯಾನ್ ರವರಿಂದ ಜನ ಜೀವನಕ್ಕೆ ಪೂರಕವಾದ ಹೆಚ್ಚು ಕೃತಿಗಳು ಆನಾವರಣಗೊಳ್ಳಲಿ ಎಂದು ಹಾರೈಸಿದರು. ಮೂಲ್ಕಿ ಸೀಮೆ ಅರಸ ದುಗ್ಗಣ್ಣ ಸಾವಂತ ರು 2015 ವರ್ಷ ಭವಿಷ್ಯ ಕೃತಿ ಬಿಡುಗಡೆಗೊಳಿಸಿದರು. ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕೃತಿಕಾರ ಹರಿಶ್ಚಂದ್ರ ಪಿ ಸಾಲ್ಯಾನ್, ವಿಜಯ ಹರಿಶ್ಚಂದ್ರ ಸಾಲ್ಯಾನ್, ರಂಗಕರ್ಮಿ ಪರಮಾನಂದ ಸಾಲ್ಯಾನ್ ಉಪಸ್ಥಿತರಿದ್ದರು.

Bhagyavan Sanil

Mulki--29101402

 

Comments

comments

Comments are closed.

Read previous post:
Kilpady-29101401
ಕಿಲ್ಪಾಡಿ ದೈವಸ್ಥಾನದಲ್ಲಿ ತಾಂಬೂಲ ಪ್ರಶ್ನೆ

ಮೂಲ್ಕಿ: ಶ್ರೀ ಆದಿ ಕಿಲ್ಪಾಡಿ ಧೂಮಾವತಿ ದೈವಸ್ಥಾನ ಕಿಲ್ಪಾಡಿ ಮೂಲ್ಕಿ ಇದರ ಜೀರ್ಣೋದ್ದಾರದ ಕುರಿತು ನಿಟ್ಟೆ ಪ್ರಸನ್ನ ಆಚಾರ್‌ರವರ ನೇತೃತ್ವದಲ್ಲಿ ‘ತಾಂಬೂಲ ಪ್ರಶ್ನೆ’ಇಡಲಾಯಿತು. ಈ ಸಂದರ್ಭ ವಿದ್ವಾನ್ ಪಂಜ...

Close