ಬಾಳಪಯಣ ಪುಸ್ತಕ ಬಿಡುಗಡೆ

ಕಿನ್ನಿಗೋಳಿ : ಸಮಾಜವನ್ನು ತಿದ್ದುವಂತಹ ತತ್ವ ಸಾರವುಳ್ಳ ಉತ್ತಮ ಸಾಹಿತ್ಯ ಕೃತಿಗಳು ರಚನೆಯಾಗಬೇಕು ಎಂದು ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ಮಂಗಳಾವಾರ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಪಿ. ವಿ. ಪ್ರದೀಪ್ ಕುಮಾರ್ ಅವರು ಬರೆದ ಬಾಳಪಯಣ ಕಾದಂಬರಿಯ ಬಿಡುಗಡೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಿನ್ನಿಗೋಳಿಯ ವೈದ್ಯ ಡಾ. ಪ್ರಕಾಶ್ ನಂಬಿಯಾರ್ ಕೃತಿ ಬಿಡುಗಡೆಗೊಳಿಸಿದರು. ಸಾಹಿತಿ ವಿಮರ್ಶಕ ಶ್ರೀಧರ ಡಿ. ಎಸ್, ಯುಗಪುರುಷದ ಪ್ರಧಾನ ಸಂಪಾದಕ ಕೆ.ಭುವನಾಭಿರಾಮ ಉಡುಪ, ಉದ್ಯಮಿ ಪ್ರಥ್ವಿರಾಜ ಆಚಾರ್ಯ, ಕಾದಂಬರಿಕಾರ ಪಿ. ವಿ. ಪ್ರದೀಪ್ ಉಪಸ್ಥಿತರಿದ್ದರು.

Kinnigolii--29101406

Comments

comments

Comments are closed.

Read previous post:
Mulki--29101405
ಕೋಟೆಕೇರಿ ಜೀರ್ಣೋದ್ಧಾರ ಕಾರ್ಯಕ್ಕೆ ದೇಣಿಗೆ

ಮೂಲ್ಕಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ  ವಿರೇಂದ್ರ ಹೆಗ್ಗಡೆ  ಅವರು ಮುಲ್ಕಿ ಕೋಟೆಕೇರಿಯ ವೀರಮಾರುತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ರೂ 3 ಲಕ್ಷ ದೇಣಿಗೆಯನ್ನು ನೀಡಿದ್ದಾರೆ. ಧರ್ಮಸ್ಥಳದ...

Close