ಕೋಟೆಕೇರಿ ಜೀರ್ಣೋದ್ಧಾರ ಕಾರ್ಯಕ್ಕೆ ದೇಣಿಗೆ

ಮೂಲ್ಕಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ  ವಿರೇಂದ್ರ ಹೆಗ್ಗಡೆ  ಅವರು ಮುಲ್ಕಿ ಕೋಟೆಕೇರಿಯ ವೀರಮಾರುತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ರೂ 3 ಲಕ್ಷ ದೇಣಿಗೆಯನ್ನು ನೀಡಿದ್ದಾರೆ. ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಮಂಗಳೂರು ತಾಲೂಕು ವಲಯದ ಯೋಜನಾಧಿಕಾರಿ ರಾಘವ ಎಮ್‌  ಅವರು ಶ್ರೀ ವೀರಮಾರುತಿ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಅನಿಲ್ ಭಟ್‌  ಅವರಿಗೆ ದೇಣಿಗೆಯನ್ನು ಹಸ್ತಾಂತರಿಸಿದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಪ್ರೊ| ಯು. ನಾಗೇಶ್ ಶೆಣೈ, ಉಪಾಧ್ಯಕ್ಷ ಜಿ. ಜಿ. ಕಾಮತ್, ಆರ್ಚಕ ಅನಂತ ಭಟ್, ಅಶೋಕ ಭಟ್, ಗ್ರಾಮಾಭಿವೃದ್ಧಿ ಯೋಜನೆ ಮುಲ್ಕಿ ವಲಯದ ಮೇಲ್ವಿಚಾರಕಿ ರೇಖಾ ಶೆಟ್ಟಿ, ಮುಲ್ಕಿ ಒಕ್ಕೂಟದ ವಲಯಾಧ್ಯಕ್ಷ ಹೇಮಂತ್ ಮತ್ತು ಮಾಜಿ ಅಧ್ಯಕ್ಷ ಯುವರಾಜ್ ಹಾಗೂ ಸದಸ್ಯ ಮುರಲೀಧರ ಕಾಮತ್ ಉಪಸ್ಥಿತರಿದ್ದರು.

Bhagyavan Sanil

Mulki--29101405

Comments

comments

Comments are closed.

Read previous post:
Mulki--29101403
ಜೀವನದಲ್ಲಿ ವೇದ ಪುರಾಣಗಳು ಪಠ್ಯವಿದ್ದಂತೆ

ಮೂಲ್ಕಿ; ಸಂಸ್ಕೃತಿ ಸಂಸ್ಕಾರ ಹಾಗೂ ಧಾರ್ಮಿಕ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಪ್ರದೇಶಕ್ಕೆ ಕಳಶಪ್ರಾಯವಾದ ದೇವಾಲಯ ಬಿಂಬಿಸಿದಂತೆ ಜನಮಾನಸಕ್ಕೆ ಶಾಂತಿ ಸಮಾಧಾನವನ್ನು ದೇವ ಸನ್ನಧಿ ಮಾತ್ರ ನೀಡಬಲ್ಲದು ಎಂದು...

Close