ಪಕ್ಷಿಕೆರೆ ವಾರ್ಷಿಕ ಹಾಗೂ ಸ್ವರ್ಣ ಮಹೋತ್ಸವ ಧಾರ್ಮಿಕ ಸಭೆ

ಕಿನ್ನಿಗೋಳಿ :ಎಲ್ಲಾ ವರ್ಗದವರು ಪರಸ್ಪರ ಸಹಕಾರ ಶಾಂತಿ ನೆಮ್ಮದಿಯ ಜೀವನ ತಮ್ಮದಾಗಿಸಿಕೊಂಡಾಗ ಭವ್ಯ ಸಮಾಜದ ನಿರ್ಮಾಣವಾಗುವುದು. ಸರ್ವದರ್ಮಿಯರಿಗೆ ಪಕ್ಷಿಕೆರೆ ಯಾತ್ರಿಕ ಕೇಂದ್ರ ಪುಣ್ಯ ತಾಣವಾಗಲಿ ಎಂದು ಮಾಜಿ ಸಚಿವ ಅಮರನಾಥ ಶೆಟ್ಟಿ ಹೇಳಿದರು.
ಮಂಗಳವಾರ ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದ ವಾರ್ಷಿಕ ಹಬ್ಬ ಹಾಗೂ ಸ್ವರ್ಣ ಮಹೋತ್ಸವದ ಅಂಗವಾಗಿ ಚರ್ಚ್ ವಠಾರದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದರು
ಈ ಸಂದರ್ಭ ನಿವೃತ್ತಗೊಳ್ಳುತ್ತಿರುವ ಪಕ್ಷಿಕೆರೆ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಮೇಬಲ್ ಕುಟಿನ್ಹಾ ಅವರನ್ನು ಚರ್ಚ್ ವತಿಯಿಂದ ಸನ್ಮಾನಿಸಲಾಯಿತು. ಅಕ್ಟೋಬರ್ ೨೨ ರಂದು ನಡೆದ ಗೂಡುದೀಪ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಮಂಗಳೂರು ಉತ್ತರ ಶಾಸಕ ಮೊದಿನ್ ಬಾವ, ಉದ್ಯಮಿ ವಲೇರಿಯನ್ ಪಾವ್ಲ್ ಲೋಬೊ, ಸುರಗಿರಿ ದೇವಳದ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ, ಪಕ್ಷಿಕೆರೆ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ಹಮೀದ್, ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇವತಿ ಶೆಟ್ಟಿಗಾರ್, ಪಂಚಾಯಿತಿ ಪಿಡಿಒ ರಮೇಶ ರಾಥೋಡ್ ಉಪಸ್ಥಿತರಿದ್ದರು.
ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದ ಪ್ರಧಾನ ಧರ್ಮಗುರು ಫಾ. ಆಂಡ್ರ್ಯೂ ಲಿಯೋ ಡಿ ಸೋಜ ಪ್ರಸ್ತಾವನೆಗೈದು ಸ್ವಾಗತಿಸಿದರು. ಪಕ್ಷಿಕೆರೆ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ವಿನ್ಸೆಂಟ್ ಡಿ ಸೋಜಾ ವಂದಿಸಿದರು. ರಾರ್ಬಟ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.

Kinnigoli-29101402 Kinnigoli-29101403

Comments

comments

Comments are closed.

Read previous post:
Kinnigolii--29101406
ಬಾಳಪಯಣ ಪುಸ್ತಕ ಬಿಡುಗಡೆ

ಕಿನ್ನಿಗೋಳಿ : ಸಮಾಜವನ್ನು ತಿದ್ದುವಂತಹ ತತ್ವ ಸಾರವುಳ್ಳ ಉತ್ತಮ ಸಾಹಿತ್ಯ ಕೃತಿಗಳು ರಚನೆಯಾಗಬೇಕು ಎಂದು ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು. ಮಂಗಳಾವಾರ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ...

Close