ಜೀವನದಲ್ಲಿ ವೇದ ಪುರಾಣಗಳು ಪಠ್ಯವಿದ್ದಂತೆ

ಮೂಲ್ಕಿ; ಸಂಸ್ಕೃತಿ ಸಂಸ್ಕಾರ ಹಾಗೂ ಧಾರ್ಮಿಕ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಪ್ರದೇಶಕ್ಕೆ ಕಳಶಪ್ರಾಯವಾದ ದೇವಾಲಯ ಬಿಂಬಿಸಿದಂತೆ ಜನಮಾನಸಕ್ಕೆ ಶಾಂತಿ ಸಮಾಧಾನವನ್ನು ದೇವ ಸನ್ನಧಿ ಮಾತ್ರ ನೀಡಬಲ್ಲದು ಎಂದು ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀ ವಿದ್ಯಾಧಿರಾಜ ತೀರ್ಥ ಓಡೇರ ಸ್ವಾಮೀಜಿಯವರು ಹೇಳಿದರು. ಅವರು ಸೋಮವಾರ ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಭಕ್ತಾಧಿಗಳನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.
ಉತ್ತಮ ರೀತಿಯಲ್ಲಿ ಬಾಳಲು ಧರ್ಮವು ಸಹಕಾರಿಯಾದಂತೆ ಜೀವನದುದ್ದಕ್ಕೂ ಅನುಸರಿಸಲು ವೇದ ಪುರಾಣಗಳು ಪಠ್ಯವಿದ್ದಂತೆ ಎಂದ ಸ್ವಾಮೀಜಿಯವರುಪ್ರತೀಯೋಬ್ಬರೂ ಅಧ್ಯಯನ ಶೀಲರಾಗಿ ದೇವರನ್ನು ಸ್ವರಲಯಗಳಿಂದ ಕೂಡಿದ ಮಂತ್ರೋಚ್ಚಾರಗಳಿಂದ ಪರಿಶುದ್ದ ಮನಸ್ಕರಾಗಿ ಪೂಜಿಸುವ ಮೂಲಕ ಮಾನಸಿಕ ಶಾಂತಿ ಹಾಗೂ ಜೀವನದ ಉನ್ನತಿ ಗಳಿಸಲು ಸಾಧ್ಯ ಎಂದರು.
ಈ ಸಂದರ್ಭ ಅರ್ಚಕ ವರ್ಗದಿಂದ ಪಾದಪೂಜೆ ನಡೆಯಿತು. ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಮೊಕ್ತೇಸರ ಯು ವೇದವ್ಯಾಸ ಶೆಣೈ ಸ್ವಾಮೀಜಿಯವರನ್ನು ಗೌರವಿಸಿದರು. ಬೆಳಿಗ್ಗೆ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಸಾನಿಧ್ಯ ವೃದ್ಧಿ ಮತ್ತು ಲೋಕ ಕಲ್ಯಾಣ ನಿಮಿತ್ತ ನವಗ್ರಹ ಯುಕ್ತ ಸುದರ್ಶನ ಹವನ ನಡೆಯಿತು. ದೇವಳದ ಧರ್ಶನ ಪಾತ್ರಿ ವಸಂತ ನಾಯಕ್ ಫಲಿಮಾರ್ಕರ್‌ಮತ್ತು ವೈದಿಕ ವೃಂದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.ವೇ.ಮೂ ಪದ್ಮನಾಭ ಭಟ್ ಸ್ವಾಗತಿಸಿ ನಿರೂಪಿಸಿದರು.

Bhagyavan Sanil

Mulki--29101403

Comments

comments

Comments are closed.

Read previous post:
Mulki--29101402
2015ರ ವರ್ಷ ಭವಿಷ್ಯ ಕೃತಿ ಬಿಡುಗಡೆ

ಮೂಲ್ಕಿ: ಪೂರ್ವಾರ್ಜಿತ ಜ್ಞಾನದಿಂದ ಸಮಾಜದ ಉನ್ನತಿಗಾಗಿ ಸಹಕರಿಸುವ ಪ್ರತಿಭಾನ್ವಿತರನ್ನು ಗೌರವಿಸುವುದು ಸಮಾಜದ ಆದ್ಯ ಕರ್ತವ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು...

Close