ಕಂಪನ್ನು ನೀಡುವ ಕೆಲಸ ವಿದ್ಯಾರ್ಥಿಗಳಿಂದ ಆಗಬೇಕು

ಮೂಲ್ಕಿ: ಸುಮಧುರ ಭಾವನೆಗಳು ಅಕ್ಷರ ರೂಪಕ್ಕಿಳಿದಾಗ ಅದು ಸುಂದರ ಕಾವ್ಯದ ರೂಪವನ್ನು ಪಡೆದುಕೊಳ್ಳುತ್ತದೆ. ಕಾವ್ಯ ಪ್ರಜ್ಞೆ ಪ್ರತಿಯೊಬ್ಬರ ಅಂತರ್ಯದಲ್ಲಿ ಅಡಕವಾಗಿರುತ್ತದೆ. ವಿದ್ಯಾರ್ಥಿಗಳು ತಮ್ಮಲ್ಲಿ ಸುಪ್ತವಾಗಿರುವ ಸುಮಧುರ ಭಾವನೆಗಳ ಮೊಗ್ಗನ್ನು ಕಾವ್ಯ ರೂಪಕ್ಕೆ ಅರಳಿಸಿ ತನ್ಮೂಲಕ ಪರಿಸರಕ್ಕೆ ಕಂಪನ್ನು ನೀಡುವಂತಹ ಕಾರ್ಯವನ್ನು ಕೈಗೊಳ್ಳಬೇಕಾಗಿದೆ ಎಂದು ಕವಿಯಿತ್ರಿ ಜ್ಯೋತಿ ಗುರುರಾಜ್ ತಿಳಿಸಿದರು. ಅವರು ಕರಾವಳಿ ಲೇಖಕಿಯರ-ವಾಚಕಿಯರ ಸಂಘ ಮತ್ತು ಶ್ರೀ ನಾರಾಯಣ ಸನಿಲಾ ಸರಕಾರಿ ಪದವಿ ಪೂರ್ವ ಕಾಲೇಜು, ಹಳೆಯಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ಸಂಸ್ಥೆಯಲ್ಲಿ ಹಳೆಯಂಗಡಿ ಪರಿಸರದ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ ಕಾವ್ಯ. ಅನುಸಂಧಾನ ಕಾರ್ಯಗಾರವನ್ನು ಮತ್ತು ಶ್ರೀಮತಿಯರಾದ ಲಕ್ಷ್ಮೀರಾವ್ ಆರೂರು, ಎಪಿ. ಮಾಲತಿ ಮತ್ತು ರಾಧಾಬಾಯಿ ನಾರಾಯಣ ಬಾಬು ದತ್ತಿನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಧ್ಯಕ್ಷರಾದ ವಸಂತ ಬೆರ್ನಾಡ್, ಕಾಲೇಜಿನ ಪ್ರಾಂಶುಪಾಲೆ ಗಿರಿಜವ್ವ ಮೆಣಸಿಕಾ, ಲೇಖಕಿಯರ ಸಂಘದ ಉಪಾಧ್ಯಕ್ಷೆ ಡಾ|| ಅನುಸೂಯ ಸಾಲ್ಯಾನ್, ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ತುಳು ಅಕಾಡೆಮಿ ಮತ್ತು ಕರಾವಳಿ ಲೇಖಕಿಯರ-ವಾಚಕಿಯರ ಸಂಘ(ರಿ) ಇದರ ಅಧ್ಯಕ್ಷರಾದ ಜಾನಕಿ ಎಂ. ಬ್ರಹ್ಮಾವರ ವಹಿಸಿದ್ದರು. ಡಾ|| ಅನುಸೂಯ ಸಾಲ್ಯಾನ್ ದತ್ತಿನಿಧಿಯ ಬಗ್ಗೆ ಮಾತನಾಡಿದರು.
ಹಿರಿಯ ಉಪನ್ಯಾಸಕಿ ಜ್ಯೋತಿ ಚೇಳಾರು ಪ್ರಾಸ್ತಾನಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಯಶೋಧ ಮೋಹನ್ ಧನ್ಯವಾದ ಸಮರ್ಪಿಸಿದರು. ಗುಣವತಿ ರಮೇಶ್ ಕಾರ್ಯಕ್ರಮ ನಿರೂಪಿದರು.

Puneethakrishna

Mulki-01111404

 

Comments

comments

Comments are closed.

Read previous post:
Mulki-01111403
ಹಿರಿಯ ಶಿಕ್ಷಕರನ್ನು ಗೌರವಿಸುವುದು ಆದ್ಯ ಕರ್ತವ್ಯ

ಮೂಲ್ಕಿ: ಎಳೆಯ ಮಕ್ಕಳನ್ನು ತಿದ್ದಿ ಅವರಿಗೆ ಶೈಕ್ಷಣಿಕ ಹಾಗೂ ಪ್ರಾಪಂಚಿಕ ಜ್ಞಾನ ನೀಡಿ ಸಮಾಜದ ಉನ್ನತ ವ್ಯಕ್ತಿಗಳನ್ನಾಗಿಸಿದ ಹಿರಿಯ ಶಿಕ್ಷಕರನ್ನು ಗೌರವಿಸುವುದು ಸಮಾಜದ ಆದ್ಯ ಕರ್ತವ್ಯ ಎಂದು...

Close