ಸಾಮರಸ್ಯ, ಸೌಹಾರ್ದ – ಸ್ನೇಹ-ಪ್ರೀತಿ ತುಂಬುತ್ತದೆ,

ಮೂಲ್ಕಿ: ಪ್ರಕೃತಿಯ ಮಡಿಲಿನಲ್ಲಿ ದೀಪಗಳ ಸಾಲಿನೊಂದಿಗೆ ಆಚರಿಸಲ್ಪಡುವ ದೀಪಾವಳಿಯು ಇಂದಿನ ಆಧುನಿಕ ಜೀವನಕ್ಕಾಗಿ ಪ್ರಕೃತಿಯ ಬಲಿಯಾಗುವ ಮುಂದಿನ ದಿನದಲ್ಲಿ ದೀಪಾವಳಿಯನ್ನು ಕೇವಲ ಚಿತ್ರದಲ್ಲಿ ನೋಡಿ ಆನಂದಿಸಿ ಆಚರಣೆ ಮಾಡುವಂತಹ ಪರಿಸ್ಥಿತಿಯ ಅಪಾಯ ಇದೆ ಎಂದು ರಂಗಕಲಾವಿದ ನರೇಂದ್ರ ಕೆರೆಕಾಡು ಹೇಳಿದರು. ಕಾರ್ನಾಡು ಸಿ.ಎಸ್.ಐ ಆಂಗ್ಲ ಮಾದ್ಯಮ ಶಾಲೆಯಲ್ಲಿ ನಡೆದ ದೀಪಾವಳಿ ಕಾರ್ಯಕ್ರಮದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ಮೂಲ್ಕಿ ಸಿ.ಎಸ್.ಐ ಯುನಿಟಿ ಚರ್ಚು ಸಭಾ ಪಾಲಕ ರೆ. ಸಂತೋಷ್ ಕುಮಾರ್ ಅಧ್ಯಕ್ಷತೆಯನ್ನು ವಹಿಸಿ ಸಾಮರಸ್ಯ, ಸೌಹಾರ್ದತೆಯಿಂದ ಕೂಡಿದ ಹಬ್ಬಗಳು ಮನಸ್ಸಿನಲ್ಲಿ ಸ್ನೇಹ-ಪ್ರೀತಿ ತುಂಬುತ್ತದೆ, ಶಾಲೆಯಲ್ಲಿ ನಡೆಸುವ ಆಚರಣೆಗಳು ವಿದ್ಯಾರ್ಥಿಗಳಲ್ಲಿ ಮಾಹಿತಿ ಮಾತ್ರವಲ್ಲದೆ ಪರಸ್ಪರ ಸಹಬಾಳ್ವೆಗೆ ಸಹಕರಿಸುತ್ತದೆ ಎಂದರು. ಮೂಲ್ಕಿ ನಗರ ಪಂಚಾಯಿತಿ ಸದಸ್ಯ ಹರ್ಷರಾಜ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.
ಯುವ ಉದ್ಯಮಿ ರಾಜೇಶ್ ಕುಮಾರ್ ಶೆಟ್ಟಿ ಮಾನಂಪಾಡಿ, ಜಿ.ಎಂ., ಶಾಲಾ ಅಭಿವೃದ್ಧಿ ಸಮಿತಿಯ ಡಾ.ಎಂ.ಎ.ಆರ್.ಕುಡ್ವಾ, ಶಾಲಾ ಸಂಚಾಲಕ ಪ್ರೋ.ಸ್ಯಾಮ್ ಮಾಬೆನ್, ಮುಖ್ಯ ಶಿಕ್ಷಕರಾದ ಎಲಿಜಬೆತ್ ಪುಷ್ಪಲತಾ, ಐರಿನ್ ಶಶಿಕಲಾ ಉಪಸ್ಥಿತರಿದ್ದರು.
ಸಹ ಶಿಕ್ಷಕರಾದ ದೀಪಕ್ ಪಡುಬಿದ್ರಿ, ಹರಿಶ್ಚಂದ್ರ ಪರಿಚಯಿಸಿದರು. ವಿದ್ಯಾರ್ಥಿಗಳಾದ ಅಫ್ಲಕ್ ಸ್ವಾಗತಿಸಿದರು, ಏಂಜಲ್ ಶೈಮಾ ಕಾರ್ಯಕ್ರಮ ನಿರೂಪಿಸಿದರು, ಮೆಲಿನಾ ವಂದಿಸಿದರು.
ನಂತರ ವಿದ್ಯಾರ್ಥಿಗಳಿಂದ ದೀಪಾವಳಿ ಮಹತ್ವದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Bhagyavan Sanil

Mulki-01111401

Comments

comments

Comments are closed.

Read previous post:
Kinnigoli-29101403
ಪಕ್ಷಿಕೆರೆ ವಾರ್ಷಿಕ ಹಾಗೂ ಸ್ವರ್ಣ ಮಹೋತ್ಸವ ಧಾರ್ಮಿಕ ಸಭೆ

ಕಿನ್ನಿಗೋಳಿ :ಎಲ್ಲಾ ವರ್ಗದವರು ಪರಸ್ಪರ ಸಹಕಾರ ಶಾಂತಿ ನೆಮ್ಮದಿಯ ಜೀವನ ತಮ್ಮದಾಗಿಸಿಕೊಂಡಾಗ ಭವ್ಯ ಸಮಾಜದ ನಿರ್ಮಾಣವಾಗುವುದು. ಸರ್ವದರ್ಮಿಯರಿಗೆ ಪಕ್ಷಿಕೆರೆ ಯಾತ್ರಿಕ ಕೇಂದ್ರ ಪುಣ್ಯ ತಾಣವಾಗಲಿ ಎಂದು ಮಾಜಿ...

Close