ನಗರ ಸ್ವಚ್ಚತಾ ಅಭಿಯಾನ

ಮೂಲ್ಕಿ: ಕನ್ನಡ ಭಾಷೆಯ ಉನ್ನತಿಯ ಬಗ್ಗೆ ವೇದಿಕೆಗಳಲ್ಲಿ ಉದ್ಘೋಷಣೆ ನಡೆಸುವುದನ್ನು ಬಿಟ್ಟು ರಾಜ್ಯೋತ್ಸವ ಹಾಗೂ ಕನ್ನಡ ಭಾಷೆಯ ಮಹತ್ವವನ್ನು ಮಕ್ಕಳಿಗೆ ತಿಳಿಸುವ ಕಾರ್ಯ ಸರ್ಕಾರದಿಂದ ಆಗಬೇಕು ಎಂದು ಕೆ.ಭುವನಾಭಿರಾಮ ಉಡುಪ ಹೇಳಿದರು. ಮೂಲ್ಕಿ ಪಟ್ಟಣ ಪಂಚಾಯತಿ,ಮೂಲ್ಕಿ ಲಯನ್ಸ್ ಕ್ಲಬ್, ಸೌತ್ ಕೆನರಾ ಫೋಟೋಗ್ರಾಫರ‍್ಸ್ ಎಸೋಸಿಯೇಶನ್ ಮೂಲ್ಕಿ ವಲಯ ಮೂಲ್ಕಿ ಸರ್ಕಾರಿ ಪದವಿ ಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಂಯುಕ್ತ ಆಶ್ರಯದಲ್ಲಿ ಶನಿವಾರ ಮೂಲ್ಕಿಯ ಪುನರೂರು ಸಂಕೀರ್ಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ದಿನಾಚರಣೆ ಮತ್ತು ನಗರ ಸ್ವಚ್ಚತಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಈಸಂದರ್ಭ ರಾಜ್ಯೋತ್ಸವ ಪ್ರಯುಕ್ತ ಸನ್ಮಾನ ಸ್ವೀಕರಿಸಿದ ಕಟೀಲು ಪದವಿ ಪೂರ್ವ ಕಾಲೇಜು ಕನ್ನಡ ಪ್ರಾದ್ಯಾಪಕಿ ಪ್ರೊ.ವನಿತಾ ಜೋಷಿ ಮಾತನಾಡಿ, ಇಂದು ಅಂಕಗಳಿಕೆಗೆ ಸುಲಭ ಎನ್ನುವ ಕಾಶರಣಕ್ಕೆ ಕನ್ನಡ ಭಾಷೆಯ ಆಯ್ಕೆ ನಡೆಸುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದು ಭಾಷೆಯ ಬಗ್ಗೆ ಯುವ ಸಮಾಜದ ಅಸಡ್ಡೆಯನ್ನು ತೋರಿಸುತ್ತಿದ್ದು ಬಾಷಾ ಪ್ರೇಮವನ್ನು ಮೂಡಿಸುವ ಕೆಲಸವಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಮೀನಾಕ್ಷಿ ಬಂಗೇರ ವಹಿಸಿದ್ದರು. ಮೂಲ್ಲಿ ಪ.ಫಂ ಮುಖ್ಯಾಧಿಕಾರಿ ವಾಣಿ ಆಳ್ವಾ, ಲಯನ್ಸ್ ಪ್ರಾಂಥ್ಯಾಧ್ಯಕ್ಷ ಹರೀಶ್ ಎನ್ ಪುತ್ರನ್, ಲಯನ್ಸ್ ಅಧ್ಯಕ್ಷ ದೇವಪ್ರಸಾದ್ ಪುನರೂರು, ಸೌತ್ ಕೆನರಾ ಫೋಟೋಗ್ರಾಫರ‍್ಸ್ ಎಸೋಸಿಯೇಶನ್ ಮೂಲ್ಕಿ ವಲಯಾಧ್ಯಕ್ಷ ನವೀನ್ ಕುಮಾರ್ ಕಟೀಲು, ಸರ್ಕಾರಿ ಪ.ಪೂ ಕಾಲೇಜು ಎನ್.ಎಸ್.ಎಸ್ ಯೋಜನಾಧಿಕಾರಿ ಪ್ರೊ.ಚಂದ್ರಶೇಖರ್ ಅತಿಥಿಗಳಾಗಿದ್ದರು ದೇವಪ್ರಸಾದ್ ಪುನರೂರು ಸ್ವಾಗತಿಸಿದರು, ಉದಯ ಅಮೀನ್ ಮಟ್ಟು ನಿರೂಪಿಸಿದರು.

Bhagyavan Sanil

Mulki-01111407 Mulki-01111408 Mulki-01111409 Mulki-01111410

Comments

comments

Comments are closed.

Read previous post:
Kateel-01111406
ಕಿರೆಂ: ಸ್ವಚ್ಛತಾ ಆಂದೋಲನ

ಕಿನ್ನಿಗೋಳಿ: ಸ್ವಚ್ಛತಾಕಾಂತ್ರಿಗೆ ಸರ್ವ ಧರ್ಮಿಯರು ಕೈಜೋಡಿಸಬೇಕಾಗಿ ನಮ್ಮ ಪರಿಸರ ಶುಚಿಯಾದರೆ ದೇಶ ಶುಚಿಯಾದಂತೆ ನಮ್ಮ ಸಣ್ಣ ವೈಯಕ್ತಿಕ ಪ್ರಯತ್ನ ಮಹಾನ್ ಪರಿವರ್ತನೆಗೆ ಕಾರಣವಾಗುವುದು ಎಂದು ದಾಮಸ್ ಕಟ್ಟೆ ಕಿರೆಂ...

Close