ಕಿರೆಂ: ಸ್ವಚ್ಛತಾ ಆಂದೋಲನ

ಕಿನ್ನಿಗೋಳಿ: ಸ್ವಚ್ಛತಾಕಾಂತ್ರಿಗೆ ಸರ್ವ ಧರ್ಮಿಯರು ಕೈಜೋಡಿಸಬೇಕಾಗಿ ನಮ್ಮ ಪರಿಸರ ಶುಚಿಯಾದರೆ ದೇಶ ಶುಚಿಯಾದಂತೆ ನಮ್ಮ ಸಣ್ಣ ವೈಯಕ್ತಿಕ ಪ್ರಯತ್ನ ಮಹಾನ್ ಪರಿವರ್ತನೆಗೆ ಕಾರಣವಾಗುವುದು ಎಂದು ದಾಮಸ್ ಕಟ್ಟೆ ಕಿರೆಂ ಚರ್ಚ್ ಧರ್ಮ ಗುರು ಫಾ. ಪೌಲ್ ಪಿಂಟೋ ಹೇಳಿದರು.
ರೆಮೆದಿ ಅಮ್ಮನವರ ಚರ್ಚ್ ಕಿರೆಂ, ಭಾರತೀಯ ಕಥೋಲಿಕ್ ಯುವ ಸಂಚಾಲನ ಕಿರೆಂ ಘಟಕ, ತರುಣ ಕಲಾ ವೃಂದ ದಾಮಸ್ ಕಟ್ಟೆ, ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಬಯಲಾಟ ಸಮಿತಿ ದಾಮಸ್ ಕಟ್ಟೆ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ, ಹಾಗೂ ಇತರ ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಕಿರೆಂ ಚರ್ಚ್ ಬಳಿ ಶನಿವಾರ ನಡೆದ ಸ್ವಚ್ಛತಾ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಪಿ. ಹೆಗ್ಡೆ, ಭಾರತೀಯ ಕಥೋಲಿಕ್ ಯುವ ಸಂಚಾಲನ ಕಿರೆಂ ಘಟಕದ ಮನೋಜ್, ದಾಮಸ್ ಕಟ್ಟೆ ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಬಯಲಾಟ ಸಮಿತಿ ಅಧ್ಯಕ್ಷ ನಾರಾಯಣ ಅಂಚನ್, ತರುಣ ಕಲಾ ವೃಂದದ ಅಧ್ಯಕ್ಷ ರಂಜಿತ್ ಅಂಚನ್, ಸಂತಾನ್ ಡಿಸೋಜ, ಸುಜಾತ ಪೂಜಾರ್ತಿ, ವೆಂಕಪ್ಪ ಕೋಟ್ಯಾನ್, ದಿವಾಕರ ಕರ್ಕೇರ, ಪ್ರಕಾಶ್ ಹೆಗ್ಡೆ ಎಳತ್ತೂರು, ಪ್ರಕಾಶ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.

Kateel-01111406

Comments

comments

Comments are closed.

Read previous post:
Kateel-01111405
ವಿಜಯಾ ಬ್ಯಾಂಕ್ ಸಂಸ್ಥಾಪಕರ ದಿನಾಚರಣೆ

ಕಿನ್ನಿಗೋಳಿ: ಕಟೀಲು ವಿಜಯಾ ಬ್ಯಾಂಕ್‌ನಲ್ಲಿ ಸಂಸ್ಥಾಪಕರ ದಿನಾಚರಣೆಯನ್ನು ಕಟೀಲು ದೇವಳದ ಪಾಂಡುರಂಗ ಭಟ್ ಉದ್ಘಾಟಿಸಿದರು. ಕಟೀಲು ದೇವಳ ಪದವಿ ಕಾಲೇಜು ಪ್ರಿನ್ಸಿಪಾಲ್ ಎಂ.ಬಾಲಕೃಷ್ಣ ಶೆಟ್ಟಿ, ಜಯರಾಮ ಶೆಟ್ಟಿ,...

Close