ಹಿರಿಯ ಶಿಕ್ಷಕರನ್ನು ಗೌರವಿಸುವುದು ಆದ್ಯ ಕರ್ತವ್ಯ

ಮೂಲ್ಕಿ: ಎಳೆಯ ಮಕ್ಕಳನ್ನು ತಿದ್ದಿ ಅವರಿಗೆ ಶೈಕ್ಷಣಿಕ ಹಾಗೂ ಪ್ರಾಪಂಚಿಕ ಜ್ಞಾನ ನೀಡಿ ಸಮಾಜದ ಉನ್ನತ ವ್ಯಕ್ತಿಗಳನ್ನಾಗಿಸಿದ ಹಿರಿಯ ಶಿಕ್ಷಕರನ್ನು ಗೌರವಿಸುವುದು ಸಮಾಜದ ಆದ್ಯ ಕರ್ತವ್ಯ ಎಂದು ಮೂಲ್ಕಿ ಪಟ್ಟಣ ಪಂಚಾಯತಿ ಉಪಾಧ್ಯಕ್ಷೆ ವಸಂತಿ ಭಂಡಾರಿ ಹೇಳಿದರು.
ಮೂಲ್ಕಿ ಮೆಡಲಿನ್ ಪ್ರೌಢ ಶಾಲೆಯಲ್ಲಿ ಶಿಕ್ಷಕಿಯಾಗಿ 41 ವರ್ಷಗಳ ಸೇವೆ ನೀಡಿ ನಿವೃತ್ತರಾಗಿರುವ ಮೊನಿಕಾ ಟೀಚರ್ ರವರ ವಿದಾಯ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಥನಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯೋಜಕಿ ಭಗಿನಿ ಕ್ರಿಸ್ಟೆಲ್ಲಾ ಮಾತನಾಡಿ, ಅನುಭವಿ ಶಿಕ್ಷಕಿಯಾಗಿ ಮಕ್ಕಳೊಂದಿಗೆ ಮಕ್ಕಳಂತಿದ್ದು ಅವರಿಗೆ ಉತ್ತಮವಾಗಿ ಭೋಧನೆ ನೀಡಿ ಸಮಾಜದ ಉನ್ನತ ಸ್ಥಾನ ಅಲಂಕರಿಸುವಂತೆ ಮಾಡಿರುವ ಶಿಕ್ಷಕಿ ಮೊನಿಕಾ ರವರ ಕಾರ್ಯ ಸ್ತುತ್ಯರ್ಹ ಎಂದರು.
ಈ ಸಂದರ್ಭ ಹಳೆ ವಿದ್ಯಾರ್ಥಿಗಳು,ವಿದ್ಯಾರ್ಥಿಗಳು,ಅದ್ಯಾಪಕ ವೃಂದ, ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರಿಂದ ಶಿಕ್ಷಕಿ ಮೋನಿಕಾರವರಿಗೆ ಸನ್ಮಾನ ನಡೆಯಿತು.ಮೆಡಲಿನ್ ಸಂಚಾಲಕಿ ಸಿ.ಆಗ್ನೆಸ್ ಪಿಂಟೋ,ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ರೊನಾಲ್ದ್ ಕರ್ಕಡ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ ಆಚಾರ್ಯ,ವ್ಯಾಸ ಮಹರ್ಷಿ ಆಂಗ್ಲ ಮಾದ್ಯಮ ಶಾಲೆಯ ಮುಖ್ಯ ಶಿಕ್ಷಕಿ ಚಂದ್ರಿಕಾ ಭಂಡಾರಿ ಅತಿಥಿಗಳಾಗಿದ್ದರು. ರೋಜ್ಲಿನ್ ಮೋನಿಸ್ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಭಗಿನಿ ಗ್ರೇಸಿ ಅಭಿನಂಧಿಸಿದರು.ಹಿಲ್ಡಾ ಟೀಚರ್ ಶುಬಾಶಂಶನೆ ಗೈದರು, ಸಂದೇಶಗಳನ್ನು ಪೌಸ್ಟಿನ್ ಡಿಸೋಜಾ ವಾಚಿಸಿದರು. ಕೋನಿ ವಾಸ್ ನಿರೂಪಿಸಿದರು. ಮೆಗ್ಡಲಿನ್ ಡಿಸೋಜ ವಂದಿಸಿದರು.

Bhagyavan Sanil

Mulki-01111403

Comments

comments

Comments are closed.

Read previous post:
Mulki-01111402
ವ್ಯಕ್ತಿ ಕೃತಿ ಚಿತ್ರ ಬಿಡುಗಡೆ

ಮೂಲ್ಕಿ: ಸಮಾಜದ ಸಾಧಕ ವ್ಯಕ್ತಿಗಳಲ್ಲಿನ ಮಾನವ ಸಂಬಂಧ ಸೂಕ್ಷ್ಮತೆಯನ್ನು ಯುವ ಜನಾಂಗಕ್ಕೆ ತಿಳಿಸುವುದರೊಂದಿಗೆ ಸಂಶೋಧನಾ ಪೂರಕ ಅಧ್ಯಕನಕ್ಕಾಗಿ ವ್ಯಕ್ತಿ, ಕೃತಿ, ಚಿತ್ರ ಗ್ರಂಥವು ಸಾಕಾರವಾಗಲಿದೆ ಎಂದು ತುಳು...

Close