ವ್ಯಕ್ತಿ ಕೃತಿ ಚಿತ್ರ ಬಿಡುಗಡೆ

ಮೂಲ್ಕಿ: ಸಮಾಜದ ಸಾಧಕ ವ್ಯಕ್ತಿಗಳಲ್ಲಿನ ಮಾನವ ಸಂಬಂಧ ಸೂಕ್ಷ್ಮತೆಯನ್ನು ಯುವ ಜನಾಂಗಕ್ಕೆ ತಿಳಿಸುವುದರೊಂದಿಗೆ ಸಂಶೋಧನಾ ಪೂರಕ ಅಧ್ಯಕನಕ್ಕಾಗಿ ವ್ಯಕ್ತಿ, ಕೃತಿ, ಚಿತ್ರ ಗ್ರಂಥವು ಸಾಕಾರವಾಗಲಿದೆ ಎಂದು ತುಳು ಸಾಹಿತ್ಯ ಅಕಾಡಮಿ ಸದಸ್ಯ ಪ್ರೊ.ರಘು ಇಡ್ಕಿಡು ಹೇಳಿದರು. ಮೂಲ್ಕಿ ರೋಟರಿ ಶತಾಬ್ಧಿ ಭವನದಲ್ಲಿ ಹಿರಿಯ ಬಹು ಭಾಷಾ ಸಾಹಿತಿ ಎನ್.ಪಿ. ಶೆಟ್ಟಿರವರ ಹತ್ತನೆಯ ಕೃತಿ ವ್ಯಕ್ತಿ ಕೃತಿ ಚಿತ್ರ ಬಿಡುಗಡೆ ಸಮಾರಂಭದಲ್ಲಿ ಕೃತಿ ವಿಮರ್ಷಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ದೇಶದ ಮಹಾನ್ ಸಾಧಕರೊಂದಿಗೆ ಜಿಲ್ಲೆಯ ರಾಜ್ಯ ಮತ್ತು ಹೊರ ರಾಜ್ಯದ ಆಯ್ದ ಸಾಧಕರನ್ನು ಬಗ್ಗೆ ಅಧ್ಯಯನ ಲೇಖನಗಳನ್ನು ಹೊಂದಿರುವ ವ್ಯಕ್ತಿ,ಕೃತಿ,ಚಿತ್ರ ಗ್ರಂಥವು ಯುವ ಸಾಹಿತಿಗಳಿಗೆ ಮತ್ತು ಸಂಶೋಧಕರಿಗೆ ಮಾರ್ಗದರ್ಶಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ರೋಟರಿ ಅಧ್ಯಕ್ಷ ಜೋಯಲ್ ಹೆರಾಲ್ಡ್ ಡಿಸೋಜ ವಹಿಸಿದ್ದರು. ಜ್ಯೋತಿಷಿ ಹರಿಶ್ಚಂದ್ರ ಪಿ.ಸಾಲ್ಯಾನ್, ಮಂಗಳೂರು ವಿಮಾನ ಪ್ರಾಧಿಕಾರದ ಮಾಜಿ ನಿರ್ದೇಶಕ ಎಂ.ಆರ್.ವಾಸುದೇವ ರೋಟರಿಯ ಜೋನ್ ಡಿಸೋಜಾ, ವಿಲ್‌ಹೆಲ್ಮ್ ಮಾಬೆನ್ , ಅಬ್ದುಲ್ ರೆಹೆಮಾನ್ ಉಪಸ್ಥಿತರಿದ್ದರು.

Bhagyavan Sanil

Mulki-01111402

Comments

comments

Comments are closed.

Read previous post:
Mulki-01111401
ಸಾಮರಸ್ಯ, ಸೌಹಾರ್ದ – ಸ್ನೇಹ-ಪ್ರೀತಿ ತುಂಬುತ್ತದೆ,

ಮೂಲ್ಕಿ: ಪ್ರಕೃತಿಯ ಮಡಿಲಿನಲ್ಲಿ ದೀಪಗಳ ಸಾಲಿನೊಂದಿಗೆ ಆಚರಿಸಲ್ಪಡುವ ದೀಪಾವಳಿಯು ಇಂದಿನ ಆಧುನಿಕ ಜೀವನಕ್ಕಾಗಿ ಪ್ರಕೃತಿಯ ಬಲಿಯಾಗುವ ಮುಂದಿನ ದಿನದಲ್ಲಿ ದೀಪಾವಳಿಯನ್ನು ಕೇವಲ ಚಿತ್ರದಲ್ಲಿ ನೋಡಿ ಆನಂದಿಸಿ ಆಚರಣೆ...

Close