ನಿಡ್ಡೋಡಿಯಲ್ಲಿ ಉಚಿತ ಆರೋಗ್ಯ ಶಿಬಿರ

ಕಿನ್ನಿಗೋಳಿ: ಮಾನಸಿಕ ಹಾಗೂ ದೈಹಿಕ ದೃಢತೆಯ ಆರೋಗ್ಯವಂತ ಪ್ರಜೆಗಳಿಂದ ಸದೃಡವಾದ ದೇಶ ಕಟ್ಟಲು ಸಾಧ್ಯ. ಗ್ರಾಮೀಣ ಜನರಿಗೆ ಆರೋಗ್ಯದ ಬಗ್ಗೆ ತಿಳಿವಳಿಕೆ ಮೂಡಿಸಲು ಹಾಗೂ ಆರ್ಥಿಕ ದುರ್ಬಲರಿಗೆ ಉಚಿತ ಆರೋಗ್ಯ ಪೂರಕವಾಗಿದೆ ಎಂದು ಎಂದು ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷ ಜಗನ್ನಾಥ ಶೆಟ್ಟಿ ನಿಡ್ಡೋಡಿ ಚಾವಡಿ ಮನೆ ಹೇಳಿದರು.
ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ , ನಿಡ್ಡೋಡಿಯ ಬಿಲ್ಲವ ಸಮಾಜ ಸೇವಾ ಸಂಘದ ಸಹಭಾಗಿತ್ವದಲ್ಲಿ ಮುಕ್ಕದ ಶ್ರೀ ಶ್ರೀನಿವಾಸ ಆಸ್ಪತ್ರೆಯ ತಜ್ನ ವೈದ್ಯರಿಂದ ನಿಡ್ಡೋಡಿ ಶ್ರೀಸತ್ಯನಾರಾಯಣ ಶಾಲೆಯಲ್ಲಿ ಭಾನುವಾರ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ನಿಡ್ಡೋಡಿ ಎಸ್. ಎನ್. ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಯದುನಾರಾಯಣ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ನಿವಾಸ ಆಸ್ಪತ್ರೆಯ ಮಾಹಿತಿ ಮತ್ತು ಸಂಪರ್ಕ ವಿಭಾಗದ ಮುಖ್ಯಸ್ಥ ಡಾ. ಎಂ. ಅಣ್ಣಯ್ಯ ಕುಲಾಲ್, ಆಸ್ಪತ್ರೆಯ ಮುಖಸ್ಥ ಶ್ರೀರಾಮ ಕಾರಂತ್, ನಿಡ್ಡೋಡಿ ಬಿಲ್ಲವ ಸಮಾಜ ಸೇವಾ ಸಂಘದ ಅದ್ಯಕ್ಷ ಜಯ ಪುಜಾರಿ ಪುನ್ಕೆದಡಿ, ಜ್ಞಾನ ರತ್ನ ಎಜುಕೇಷನ್ ಫೌಂಡೇಶನ್ ಅಧ್ಯಕ್ಷ ಭಾಸ್ಕರ ಗೌಡ , ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ , ಡಾ. ಪ್ರದೀಪ ಕುಮಾರ್ ಹೆಬ್ರಿ ಉಪಸ್ಥಿತರಿದ್ದರು.

Kinnigoli-04111403

Comments

comments

Comments are closed.

Read previous post:
Kinnigoli-04111402
ಯುವ ಜನತೆ ಅಭಿವೃದ್ದಿ ಪರ ಚಿಂತನೆ ಮಾಡಬೇಕು

ಕಿನ್ನಿಗೋಳಿ: ಯುವ ಜನತೆ ದೇಶದ ಆರ್ಥಿಕತೆ ಮತ್ತು ಅಭಿವೃದ್ದಿ ಪರ ಚಿಂತನೆ ಮಾಡಿ ಸೇವೆ ಹಾಗೂ ಪರಿಶ್ರಮ ಮಾಡಿ ದೇಶ ಕಟ್ಟುವಲ್ಲಿ ಸಹಕರಿಸಬೇಕು ಎಂದು ಯುಗಪುರುಷದ ಪ್ರಧಾನ ಸಂಪಾದಕ...

Close