ಭಾರತೀಯ ವಿಜ್ಞಾನ, ಸಾಹಿತ್ಯ ವಿಶ್ವಕ್ಕೇ ಮಾದರಿ

ಕಿನ್ನಿಗೋಳಿ : ಪುರಾಣ ಕಾಲದ ಋಷಿ ಮುನಿಗಳ ಮಹತ್ತರವಾದ ಸಾಧನೆಯಿಂದಾಗಿ ಭಾರತೀಯ ವಿಜ್ಞಾನ ಹಾಗೂ ಸಾಹಿತ್ಯ ವಿಶ್ವಕ್ಕೇ ಮಾದರಿಯಾಗಿದೆ. ಎಂದು ಯೋಜಕ ಇಂಡಿಯಾ ಪ್ರೈವೆಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಜಗದೀಶ ಬೋಳೂರು ಹೇಳಿದರು,
ಕಿನ್ನಿಗೋಳಿ ನೇಕಾರ ಸೌಧ ಸಭಾಂಗಣದಲ್ಲಿ ಕಿನ್ನಿಗೋಳಿಯ ಅನಂತ ಪ್ರಕಾಶ ಕೊಡ ಮಾಡಿದ ಅನಂತಪ್ರಕಾಶ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಖ್ಯಾತ ಸಾಹಿತಿ, ಸಂಶೋಧಕ ಡಾ. ವಿಶ್ವನಾಥ ಕಾರ್ನಾಡ್ ಅವರಿಗೆ ಹತ್ತು ಸಾವಿರ ರೂ. ನಗದು ಸಹಿತ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಕಾರ್ನಾಡ್ ಅಭಿನಂದನ ಕೃತಿಯನ್ನು ಬಿಡುಗಡೆಗೊಳಿಸಿದ ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಮನಸ್ಸನ್ನು ಅರಳಿಸುವ ಕನ್ನಡ ಕೃತಿ ಹಾಗೂ ಕವನ ಸಂಕಲನಗಳು ಮೂಡಿ ಬರಬೇಕು ಎಂದರು.
ಈ ಸಂದರ್ಭ ಕಾರ್ನಾಡ್ ಕಥಾ ಸಂಕಲನ ಹಿಂದಿರುಗಿ ಬಂದವನು ಮತ್ತು ಇತರ ಕತೆಗಳು ಕೃತಿಯನ್ನು ಸಾಹಿತಿ ಕೆ.ಎಲ್.ಕುಂಡಂತಾಯ ಹಾಗೂ ವಿ.ಎಸ್. ಶ್ಯಾನುಭಾಗ್ ಅವರ ಭಾವಗೀತೆಗಳ ಸಂಕಲನ ಮಾತು ಮೌನಗಳು ಮಧ್ಯೆ ಕೃತಿಯನ್ನು ಡಾ.ಈಶ್ವರ ಅಲೆವೂರ, ಅನಂತಪ್ರಕಾಶ ವಿಶೇಷಾಂಕವನ್ನು ಸಾಹಿತಿ ಎನ್.ಪಿ.ಶೆಟ್ಟಿ ಬಿಡುಗಡೆಗೊಳಿಸಿದರು.
ಅನಂತಪ್ರಕಾಶದ ನಿರ್ದೇಶಕ ಕೊಡೆತ್ತೂರು ಸಚ್ಚಿದಾನಂದ ಉಡುಪ ಸ್ವಾಗತಿಸಿದರು. ಶಕುನ ಉಡುಪ ಕಾರ್ಯಕ್ರಮ ನಿರೂಪಿಸಿದರು. ಬೊಳುವಾರು ಆಂಜನೇಯ ಮಹಿಳಾ ಯಕ್ಷಗಾನ ಕಲಾಸಂಘದವರಿಂದ ಯಕ್ಷನವರಸ ವೈಭವ, ಚೇರ್ಕಾಡಿ ಕಲಾಶ್ರೀ ಯಕ್ಷಗಾನ ಮೇಳದವರಿಂದ ಶ್ರೀ ಕೃಷ್ಣ ಪಾರಿಜಾತ ಯಕ್ಷಗಾನ ಪ್ರದರ್ಶನಗೊಂಡಿತು.

Kinnigoli-04111404

Comments

comments

Comments are closed.

Read previous post:
Kinnigoli-04111403
ನಿಡ್ಡೋಡಿಯಲ್ಲಿ ಉಚಿತ ಆರೋಗ್ಯ ಶಿಬಿರ

ಕಿನ್ನಿಗೋಳಿ: ಮಾನಸಿಕ ಹಾಗೂ ದೈಹಿಕ ದೃಢತೆಯ ಆರೋಗ್ಯವಂತ ಪ್ರಜೆಗಳಿಂದ ಸದೃಡವಾದ ದೇಶ ಕಟ್ಟಲು ಸಾಧ್ಯ. ಗ್ರಾಮೀಣ ಜನರಿಗೆ ಆರೋಗ್ಯದ ಬಗ್ಗೆ ತಿಳಿವಳಿಕೆ ಮೂಡಿಸಲು ಹಾಗೂ ಆರ್ಥಿಕ ದುರ್ಬಲರಿಗೆ ಉಚಿತ...

Close