ಅಜ್ ಅಮಿ ಕೊಂಕ್ಣಿ ಉಲವ್ಯಾಂ ಕಾರ್ಯಾಗಾರ

ಕಿನ್ನಿಗೋಳಿ: ಮಾತೃ ಭಾಷೆ ಕೊಂಕಣಿಯ ಸಾಹಿತ್ಯ, ಜಾನಪದ, ಸಂಸ್ಕೃತಿ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ಚಿಂತನೆ ಮಾಡಬೇಕಾಗಿದೆ. ಇಂತಹ ಕಾರ್ಯಾಗಾರಗಳು ಸಮಾಜದ ಎಲ್ಲಾ ಕೇಂದ್ರಗಳಲ್ಲಿ ನಡೆಯಬೇಕು ಎಂದು ಬಳ್ಕುಂಜೆ ಚರ್ಚ್ ಧರ್ಮಗುರು ಫಾ. ಮೈಕಲ್ ಡಿಸೋಜ ಹೇಳಿದರು.
ದಾಯ್ಚಿ ದುಬಾಯಿ ಇಂಡಿಯಾ ಮಂಗಳೂರು ಘಟಕ ಹಾಗೂ ಸ್ಥಳೀಯ ಕೆಲವು ಕೊಂಕಣಿ ಸಂಘಟನೆಗಳ ಸಹಯೋಗದಲ್ಲಿ ಭಾನುವಾರ ಬಳ್ಕುಂಜೆ ಚರ್ಚ್ ವಠಾರದಲ್ಲಿ ನಡೆದ ಶಾಲಾ ವಿದ್ಯಾರ್ಥಿಗಳ ಒಂದು ದಿನದ “ಅಜ್ ಅಮಿ ಕೊಂಕ್ಣಿ ಉಲವ್ಯಾಂ” ಕೊಂಕಣಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಮಂಗಳೂರು ದಾಯ್ಜಿ ವೀಕ್ಲಿಯ ಸಂಪಾದಕ ಹೇಮಾಚಾರ್ಯ ಮಾತನಾಡಿ ಕೊಂಕಣಿ ವಿದ್ಯಾರ್ಥಿಗಳಿಗೆ ಗ್ರಾಮೀಣ ಜೀವನ, ಕೃಷಿ, ತೋಟಗಾರಿಕೆ, ಗುಡ್ಡ ಕಾಡು ಪರಿಸರದ ಪರಿಚಯಿಸುವ ಮೂಲಕ ಮಕ್ಕಳಲ್ಲಿ ಕೊಂಕಣಿ ಸಂಸ್ಕ್ರತಿ, ಭಾಷಾಭಿಮಾನದ ಭಾವನೆಗಳನ್ನು ಬಿತ್ತಬಹುದು ಎಂದರು.
ಕಾರ್ಯಗಾರದಲ್ಲಿ ಕೊಂಕಣಿ ಕವಿ ಸಾಹಿತಿ ಪಾವ್ಲ್ ಡಿಸೋಜ ಬಳ್ಕುಂಜೆ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರೋಯ್ ಕ್ಯಾಸ್ತೆಲಿನೊ, ವಿಕ್ಟರ್ ಡಿಸೋಜ, ಸಾಹಿತಿ ಕೆ.ಜಿ. ಮಲ್ಯ, ಕೊಂಕಣಿ ಕವಿ ಮೆಲ್ವಿನ್ ರೊಡ್ರಿಗಸ್, ವಿಥೋರಿ ಕಾರ್ಕಳ, ಬಳ್ಕುಂಜೆ ಐಸಿವೈಎಮ್, ಕೆಥೋಲಿಕ್ ಸಭಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Kinnigoli-04111405

Comments

comments

Comments are closed.

Read previous post:
Kinnigoli-04111404
ಭಾರತೀಯ ವಿಜ್ಞಾನ, ಸಾಹಿತ್ಯ ವಿಶ್ವಕ್ಕೇ ಮಾದರಿ

ಕಿನ್ನಿಗೋಳಿ : ಪುರಾಣ ಕಾಲದ ಋಷಿ ಮುನಿಗಳ ಮಹತ್ತರವಾದ ಸಾಧನೆಯಿಂದಾಗಿ ಭಾರತೀಯ ವಿಜ್ಞಾನ ಹಾಗೂ ಸಾಹಿತ್ಯ ವಿಶ್ವಕ್ಕೇ ಮಾದರಿಯಾಗಿದೆ. ಎಂದು ಯೋಜಕ ಇಂಡಿಯಾ ಪ್ರೈವೆಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ...

Close