ಯುವ ಜನತೆ ಅಭಿವೃದ್ದಿ ಪರ ಚಿಂತನೆ ಮಾಡಬೇಕು

ಕಿನ್ನಿಗೋಳಿ: ಯುವ ಜನತೆ ದೇಶದ ಆರ್ಥಿಕತೆ ಮತ್ತು ಅಭಿವೃದ್ದಿ ಪರ ಚಿಂತನೆ ಮಾಡಿ ಸೇವೆ ಹಾಗೂ ಪರಿಶ್ರಮ ಮಾಡಿ ದೇಶ ಕಟ್ಟುವಲ್ಲಿ ಸಹಕರಿಸಬೇಕು ಎಂದು ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು.
ದಾಮಸ್‌ಕಟ್ಟೆ ಸ್ವದೇಶಿ ಭವನದ ಮುಂಭಾಗದಲ್ಲಿ ನಡೆದ ದಾಮಸಕಟ್ಟೆ ತರುಣ ಕಲಾವೃಂದ ದ್ವಿತೀಯ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಪ್ರತಿಭಾವಂತ ಸ್ಥಳೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ದಾಮಸ್ ಕಟ್ಟೆ ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಬಯಲಾಟ ಸಮಿತಿ ಅಧ್ಯಕ್ಷ ನಾರಾಯಣ ಅಂಚನ್ ತಾಳಿಪಾಡಿ ಅಧ್ಯಕ್ಷತೆ ವಹಿಸಿದ್ದರು. ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಡಾ. ಜೋನ್ ಕ್ಲಾರೆನ್ಸ್ ಮಿರಾಂದ , ಉದ್ಯಮಿ ರವೀಂದ್ರನಾಥ ಶೆಣೈ , ರತ್ನಾ ಎಸ್. ಕೋಟ್ಯಾನ್, ದಾಮಸಕಟ್ಟೆ ತರುಣ ಕಲಾವೃಂದ ಅಧ್ಯಕ್ಷ ರಂಜಿತ್ ಅಂಚನ್ ಉಪಸ್ಥಿತರಿದ್ದರು.
ದಿವಾಕರ ಕರ್ಕೇರಾ ತಾಳಿಪಾಡಿ ಕಾರ್ಯಕ್ರಮ ನಿರೂಪಿಸಿದರು.

Kinnigoli-04111402

 

Comments

comments

Comments are closed.

Read previous post:
Kateeli-04111401
ಆಚರಣೆಗಳು ಸಂಸ್ಕಾರದ ಪ್ರತೀಕ

ಕಟೀಲು : ದೀಪಾವಳಿ, ತುಳಸೀ ಪೂಜೆ ಸೇರಿದಂತೆ ಎಲ್ಲ ಹಬ್ಬಗಳ ಆಚರಣೆಗಳೂ ನಮ್ಮಲ್ಲಿ ಸಂತಸವನ್ನು ಹೆಚ್ಚಿಸುವುದರೊಂದಿಗೆ ಸಂಸ್ಕಾರವನ್ನು ಉಳಿಸುತ್ತವೆ. ಭಗವಂತನೆಡೆಗೆ ನಮ್ಮ ಮನಸ್ಸನ್ನು ಕೇಂದ್ರೀಕರಿಸಲು ಪೂರಕ ಎಂದು...

Close