ಅಕ್ರಮ ಅನ್ನಬಾಗ್ಯ ಅಕ್ಕಿ ವಶ

ಹಳೆಯಂಗಡಿ: ಹಳೆಯಂಗಡಿಯ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅನ್ನದಾಸೋಹದ ಅಕ್ಕಿಯನ್ನು ಬುಧವಾರ ಆಹಾರ ಇಲಾಖಾಧಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳು ವಶಪಡಿಸಿದ್ದಾರೆ.

ಮಂಗಳೂರು ಆಹಾರ ಮತ್ತು ನಾಗರಿಕ ಇಲಾಖಾಧಿಕಾರಿಗಳು ಇಂದು ಹಳೆಯಂಗಡಿಯ ಮನೆಯೊಂದಕ್ಕೆ ಮತ್ತು ಅಂಗಡಿಗೆ ದಾಳಿ ನಡೆಸಿ ಸುಮಾರು 55 ಕಿಂಟ್ವಾಲ್ ಅಕ್ಕಿಯನ್ನಿ ವಶ ಪಡಿಸಿಕೊಂಡಿದ್ದಾರೆ. ರಾಜ್ಯಸರಕಾರದ ಮಹತ್ವಕಾಂಕ್ಷೆಯ ಯೋಜನೆ ಅನ್ನಬಾಗ್ಯ ಅಕ್ಕಿಯಿಂದಾಗಿ  ವ್ಯಾಪಾರಸ್ಥರಿಗೆ ತುಂಬಾ ಲಾಭ ದೊರಕುತ್ತಿದೆ. ಬೆಂಗಳೂರಿನ ಪುಡ್ ಕಂಟ್ರೋಲ್ ರೂಮ್ ಗೆ ಹಳೆಯಂಗಡಿ ಕೆಲ ನಿವಾಸಿಗಳು ಇಲ್ಲಿ ನಡೆಯುತಿರುವ ಅಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದರು ಖಚಿತ ಮಾಹಿತಿ ಪಡೆದ ಮಂಗಳೂರು ಆಹಾರ ಇಲಾಖಾ ಅಧಿಕಾರಿಗಳು ಹಳೆಯಂಗಡಿಯ ಮನೆಯೊಂದಕ್ಕೆ ದಾಳಿನಡೆಸಿದ್ದಾಗ ಅಲ್ಲಿ 20 ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಗೋಣಿ ಚೀಲಗಳಲ್ಲಿ ಸುಮಾರು 3 ಕಿಂಟ್ವಾಲ್ ನಷ್ಟು ಅಕ್ಕಿಯು ಪತ್ತೆಯಾಗಿದ್ದು ಮಯ್ಯದ್ದಿ ಇಂದಿರಾನಗರ ಎಂಬುವವರು ಸಿಕ್ಕಿ ಬಿದ್ದಿದ್ದಾರೆ.

ಹಳೆಯಂಗಡಿ ಮಾರುಕಟ್ಟೆ ಮುಂದುಗಡೆ ಇರುವ  ಬದ್ರೀಯಾ ಸ್ಟೊರ್ ಎಂಬಲ್ಲಿಯೂ  ಅಕ್ರಮ ಅಕ್ಕಿ ದಾಸ್ತಾನು ಇದೆ ಎಂದು ಮಾಹಿತಿ ಪಡೆದ ಅಧಿಕಾರಿಗಳು ತತ್ ಕ್ಷಣ  ದಾಳಿ ನಡೆಸಿ ಅಂಗಡಿಯ ಮೇಲಿನ ಕೋಣೆಯಲ್ಲಿ  ಗೋಣಿ ಚೀಲದಲ್ಲಿ ಕೂಡಿಟ್ಟಿದ್ದ ಸುಮಾರು 50 ಕಿಂಟ್ವಾಲ್ ಅಕ್ಕಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ, ನ್ಯಾಯ ಬೆಲೆ ಅಂಗಡಿಯಿಂದ ಅಕ್ಕಿಯನ್ನು ತೆಗೆದುಕೊಂಡು ಗ್ರಾಹಕರು ನೇರವಾಗಿ ಬದ್ರುದ್ದೀನ್ ಅವರ ಅಂಗಡಿಗೆ ಅಕ್ಕಿಯನ್ನು 10 ರೂಪಾಯಿ ದರದಲ್ಲಿ ಮಾರುತ್ತಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ. ಮೊದಲು ದಾಳಿ ನಡೆಸಿದಾಗ  ಆಹಾರ ನಿರೀಕ್ಷಕ ವಾಸು ಶೆಟ್ಟಿ ಮತ್ತು ಅಧಿಕಾರಿಗಳಿದ್ದು ಸ್ಥಳ್ದದಲ್ಲಿದ್ದು ನಂತರ ಮಂಗಳೂರು ತಹಶೀಲ್ದಾದರ ಮೋಹನ್ ರಾವ್ ಮತ್ತು ಜಿಲ್ಲಾ ಆಹಾರ ಇಲಾಖೆ ಉಪನಿರ್ದೇಶಕ ಶರಣ ಬಸಪ್ಪ,ಆಹಾರ ಶಾಖೆಯ ತಹಶೀಲ್ದಾದರ ಲಕ್ಷ್ಮೀನಾರಾಂiಣ ರೆಡ್ಡಿ ಮುಲ್ಕಿ ಉಪ ತಹಶೀಲ್ದಾದರ ಪುಷ್ಪರಾಜ್, ವಿ.ಎ ಲೊಕೇಶ್, ಮತ್ತು ಕಿರಣ್ ದಾಳಿಯಲ್ಲಿದ್ದು ಮುಂದಿನ ಕ್ರಮ ಜರಗಿಸಿದರು.

                                                                               Kinnigoli-05111409 Kinnigoli-05111410 Kinnigoli-05111411

Comments

comments

Comments are closed.

Read previous post:
Kinnigoli-05111404
ಕಟೀಲು ತುಳಸೀಪೂಜೆಯಲ್ಲಿ ದೇವೇಗೌಡ ಭಾಗಿ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಮಂಗಳವಾರ ರಾತ್ರಿ ರಂಗಪೂಜೆ ಸೇವೆ ಸಲ್ಲಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತುಳಸೀಪೂಜೆಯಲ್ಲಿ ಭಾಗಿಯಾದರು. ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಪ್ರಸಾದ ನೀಡಿದರು....

Close