ಮೂಲ್ಕಿ: ಮಕ್ಕಳ ಹಬ್ಬ

ಮೂಲ್ಕಿ: ಕಿರಿಯರು ಧಾರ್ಮಿಕ ತಿಳುವಳಿಕೆಯೊಂದಿಗೆ ಸಂಸ್ಕಾರಭರಿತ ಜೀವನ ಪದ್ದತಿಯಲ್ಲಿ ಮುನ್ನಡೆದು ಉತ್ತಮ ಸಮಾಜ ನಿರ್ಮಾಣಕ್ಕೆ ಭಾನುವಾರ ಶಾಲೆ ಸಹಕಾರವಾಗುತ್ತದೆ ಎಂದು ಸಿ.ಎಸ್.ಐ ಕರ್ನಾಟಕ ದಕ್ಷಿಣ ಸಭಾ ಪ್ರಾಂಥ್ಯದ ಕಾರ್ಯದರ್ಶಿ ವಿ.ಐಸಾಕ್ ವಿಜಯಶೇಖರ್ ಹೇಳಿದರು.
ದ.ಕ ಪ್ರದೇಶ ಪರಿಷತ್ತು ಮಂಗಳೂರು ಮತ್ತು ಮೂಲ್ಕಿ ಸಿ.ಎಸ್.ಐ ಯುನಿಟಿ ದೇವಾಲಯದ ಸಂಯೋಜನೆಯಲ್ಲಿ ಜಾಗತಿಕ ಭಾನುವಾರ ಶಾಲಾ ದಿನಾಚರಣೆ 2014 ಪ್ರಯುಕ್ತ ನಡೆದ ಮಕ್ಕಳ ಹಬ್ಬದ ಸಮಾರೋಪ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.ಧಾರ್ಮಿಕ ಶಿಕ್ಷಣದೊಂದಿಗೆ ಮಕ್ಕಳ ಸುಪ್ತ ಪ್ರತಿಭೆಯನ್ನು ಉನ್ನತಿಗೊಳಿಸಿ ಆಂತರಿಕ ಸದೃಡತೆ ಹಾಗೂ ಶೃಜನಶೀಲತೆಯನ್ನು ಹೆಚ್ಚಿಸಲು ಮಕ್ಕಳ ಹಬ್ಬ ಉತ್ತಮ ವೇದಿಕೆಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ ಪ್ರದೇಶ ಪರಿಷತ್ತು ವಲಯಾಧ್ಯಕ್ಷ ರೆ.ವಿನ್‌ಫ್ರೆಡ್ ಅಮ್ಮನ್ನ ವಹಿಸಿದ್ದರು. ಈ ಸಂಧರ್ಭ ದ.ಕ ಜಿಲ್ಲಾ ಮಟ್ಟದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸ್ಪರ್ದೆಗಳ ಬಹುಮಾನ ನೀಡಲಾಯಿತು.
ಅತಿಥಿಗಳಾಗಿ ಸಿ.ಎಸ್.ಐ ಕರ್ನಾಟಕ ದಕ್ಷಿಣ ಸಭಾ ಪ್ರಾಂಥ್ಯದ ಖಜಾಂಜಿ ಉದಯರಾಜ್ ಕೌಂಡ್ಸ್ , ಮೂಲ್ಕಿ ರೋಟರಿ ಅಧ್ಯಕ್ಷ ಜೋಯಲ್ ಹೆರಾಲ್ಡ್ ಡಿಸೋಜಾ, ದ.ಕ ಪ್ರದೇಶ ಪರಿಷತ್ತು ಕಾರ್ಯದರ್ಶಿ ಜಾಯ್ಸ್ ವಾಟ್ಸನ್,ಖಜಾಂಜಿ ಆಂಡ್ರೂ ಜಾನ್, ಮೂಲ್ಕಿ ಯುನಿಟಿ ದೇವಾಲಯದ ಸಭಾ ಪಾಲಕ ರೆ.ಸಂತೋಷ್ ಕುಮಾರ್ ,ಮೂಲ್ಕಿ. ಸಿಎಸ್.ಐ ಬಾಲಿಕಾಶ್ರಮದ ವಾರ್ಡನ್ ರೆ.ಶಶಿಕಲಾ ಅಂಚನ್ ಅತಿಥಿಗಳಾಗಿದ್ದರು. ಪ್ರವೀಣ್ ಆನಂದ್ ಸ್ವಾಗತಿಸಿದರು. ಯುನಿಟಿ ದೇವಾಲಯದ ಭಾನುವಾರ ಶಾಲಾ ಶಿಕ್ಷಕಿಯರು ಮತ್ತು ರೆ.ಶಶಿಕಲಾ ಅಂಚನ್ ಪ್ರಾರ್ಥನೆ ನಡೆಸಿದರು. ಪ್ರಭಾ ಶತಾನಂದ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಚೇರ್‌ಮೇನ್ ಎಡ್ವರ್ಡ್ ಕರ್ಕಡ ವಂದಿಸಿದರು.
ಉದ್ಘಾಟನೆ: ದ.ಕ ಜಿಲ್ಲೆಯ 16 ಚರ್ಚು ಸಭೆಯ ಸುಮಾರು 1200 ಮಕ್ಕಳ ಕೂಡುವಿಕೆಯಲ್ಲಿ ಮುಂಜಾನೆ ಮೂಲ್ಕಿ ಸಿ.ಎಸ್.ಐ ಬಾಲಿಕಾಶ್ರಮದಿಂದ ಮೂಲ್ಕಿ ಬಸ್ಸು ನಿಲ್ದಾಣವಾಗಿ ಯುನಿಟಿ ದೇವಾಲಯದ ವರೆಗೆ ಮೆರವಣಿಗೆಯೊಂದಿಗೆ ಮಕ್ಕಳ ಹಬ್ಬಕ್ಕೆ ಚಾಲನೆ ದೊರಕಿತು. ಬಳಿಕ ನಡೆದ ದೇವಾರಾಧನೆಯಲ್ಲಿ ಮಂಗಳೂರು ಕೆ.ಸಿಟಿ ಬಲ್ಮಠ ಕಾಲೇಜಿನ ಪ್ರಾಧ್ಯಾಪಕ ರೆ.ಸಿಡ್ನಿ ಸಾಲಿನ್ಸ್ ಮುಖ್ಯ ಸಂದೇಶ ನೀಡಿದರು ಆರಾಧನೆಯ ನಾಯಕತ್ವವನ್ನು ದ.ಕ ಪ್ರದೇಶ ಪರಿಷತ್ತು ವಲಯಾಧ್ಯಕ್ಷ ರೆ.ವಿನ್‌ಫ್ರೆಡ್ ಅಮ್ಮನ್ನ ಮತ್ತು ಮೂಲ್ಕಿ ಯುನಿಟಿ ಸಭೆಯ ಸಭಾಪಾಲಕ ರೆ.ಸಂತೋಷ್ ಕುಮಾರ್ ವಹಿಸಿದ್ದರು.

Bhagyavan Sanil

Mulki-05111406

Comments

comments

Comments are closed.

Read previous post:
Mulki-05111405
ಮುಲ್ಕಿ – ಲಯನ್ಸ್ ಗವರ್ನರ್ ಭೇಟಿ

ಮೂಲ್ಕಿ : ಮೂಲ್ಕಿಯ ಲಯನ್ಸ್ ಕ್ಲಬ್ ವತಿಯಿಂದ ಮೂಲ್ಕಿಯ ಪುನರೂರು ಟೂರಿಸ್ತ್ ಹೋಂನ ಸಭಾಂಗಣದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ಎಚ್ ಎಸ್ ಮಂಜುನಾಥ ಮೂರ್ತಿಯವರು ವಿವಿಧ...

Close