ಕಟೀಲು ತುಳಸೀಪೂಜೆಯಲ್ಲಿ ದೇವೇಗೌಡ ಭಾಗಿ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಮಂಗಳವಾರ ರಾತ್ರಿ ರಂಗಪೂಜೆ ಸೇವೆ ಸಲ್ಲಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತುಳಸೀಪೂಜೆಯಲ್ಲಿ ಭಾಗಿಯಾದರು. ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಪ್ರಸಾದ ನೀಡಿದರು. ಗೋಪಾಲಕೃಷ್ಣ, ಅನಂತ ಆಸ್ರಣ್ಣ, ದೇಗುಲದ ಪ್ರಬಂಧಕ ವಿಜಯಕುಮಾರ್, ಮಾಜಿ ಸಚಿವ ಅಮರನಾಥ ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಬಿ.ಸದಾಶಿವ, ಸಂಜೀವ ಮಡಿವಾಳ, ಸುದೀಪ್ ಮತ್ತಿತರರಿದ್ದರು.
ದೇವೀ ಸ್ತುತಿ ಪಠಣ
ತನ್ನ ಜೊತೆಗೆ ಔಷಧಿಯ ಚೀಲ ಇಟ್ಟುಕೊಂಡಂತೆ ಭಗವದ್ಗೀತೆ, ದೇವರ ಸ್ತುತಿಗಳ ನಾಲ್ಕಾರು ಪುಸ್ತಕಗಳನ್ನು ಇಟ್ಟುಕೊಳ್ಳುವ ದೇವೇಗೌಡರು, ಕಟೀಲು ದೇಗುಲದಲ್ಲಿ ರಾತ್ರಿ, ರಂಗಪೂಜೆ, ತುಳಸೀಪೂಜೆಯಲ್ಲಿ ಭಾಗಿಯಾದ ಬಳಿಕ ಉಪಾಹಾರ ಸ್ವೀಕರಿಸುವ ಮುಂಚೆ ಶ್ರೀ ದೇವೀ ಸ್ತುತಿಯನ್ನು ಕನ್ನಡಕ ಧರಿಸದೆಯೇ (ದೇವೇಗೌಡರಿಗೆ ಈಗ 84ವರ್ಷ ವಯಸ್ಸು) ಪಠಿಸಿದರು.
ಒಂದಷ್ಟು ಶ್ಲೋಕಗಳನ್ನು ಓದಿದ ದೇವೇಗೌಡರು, ಸುಬ್ರಹ್ಮಣ್ಯ ದೇಗುಲದಲ್ಲಿ ಸ್ಕಂದ ಸ್ತೋತ್ರವನ್ನು, ಧರ್ಮಸ್ಥಳದಲ್ಲಿ ಶಿವಮಂತ್ರವನ್ನು ಓದಿದ್ದಾರೆ. ತಾನು ಎಂಎಲ್‌ಸಿ ಆಗಿದ್ದಾಗ ಹೊಳೆನರಸೀಪುರದಲ್ಲಿ ಸೂರ‍್ಯನಾರಾಯಣ ಅಡಿಗರು ಕರ್ನಾಟಕ ಬ್ಯಾಂಕಿನ ಶಾಖೆ ತೆರೆದರು. ಆ ಕಾಲಕ್ಕೆ ನನಗೆ ಕೃಷಿಗೆ 18ಲಕ್ಷ ರೂ. ಸಾಲ ನೀಡಿ ನನ್ನನ್ನು ದೊಡ್ಡ ರೈತನಾಗಿ ಬೆಳೆಯಲು ಕಾರಣರಾದರು. ಅವರ ಕುರಿತಾದ ಕಾರ್ಯಕ್ರಮಕ್ಕಾಗಿ ಮಂಗಳೂರಿಗೆ ಬಂದಿದ್ದೇನೆ. ಧರ್ಮಸ್ಥಳ, ಸುಬ್ರಹ್ಮಣ್ಯ ದೇವಸ್ಥಾನದ ಬಳಿಕ ಪೊಳಲಿ ರಾಜರಾಜೇಶ್ವರೀ ದೇಗುಲಕ್ಕೆ ಭೇಟಿ ನೀಡಿ ಕಟೀಲು ಅಮ್ಮನ ಸನ್ನಿಧಿಗೆ ಬಂದಿದ್ದೇನೆ. ಪೊಳಲಿಯಲ್ಲಿ ನಾನು 1987ರಲ್ಲಿ ಲೋಕೋಪಯೋಗಿ ಸಚಿವನಾಗಿದ್ದ ಬಂದಿದ್ದಾಗ ರಸ್ತೆ ಮಂಜೂರು ಮಾಡಿದ್ದನ್ನು ಇವತ್ತು ಅಲ್ಲಿ ನೆನಪಿಸಿದರು ಎಂದು ಸಂತಸ ವ್ಯಕ್ತಪಡಿಸಿದರು.

Mithuna Kodethoor

Kinnigoli-05111401 Kinnigoli-05111402 Kinnigoli-05111403 Kinnigoli-05111404 Kinnigoli-05111405 Kinnigoli-05111406 Kinnigoli-05111407 Kinnigoli-05111408

 

 

Comments

comments

Comments are closed.

Read previous post:
Mulki-05111406
ಮೂಲ್ಕಿ: ಮಕ್ಕಳ ಹಬ್ಬ

ಮೂಲ್ಕಿ: ಕಿರಿಯರು ಧಾರ್ಮಿಕ ತಿಳುವಳಿಕೆಯೊಂದಿಗೆ ಸಂಸ್ಕಾರಭರಿತ ಜೀವನ ಪದ್ದತಿಯಲ್ಲಿ ಮುನ್ನಡೆದು ಉತ್ತಮ ಸಮಾಜ ನಿರ್ಮಾಣಕ್ಕೆ ಭಾನುವಾರ ಶಾಲೆ ಸಹಕಾರವಾಗುತ್ತದೆ ಎಂದು ಸಿ.ಎಸ್.ಐ ಕರ್ನಾಟಕ ದಕ್ಷಿಣ ಸಭಾ ಪ್ರಾಂಥ್ಯದ...

Close