ಮೂಲ್ಕಿ ರೋಟರಿ ವೃತ್ತಿ ಮಾಸಾಚರಣೆ

ಮೂಲ್ಕಿ: ವೃತ್ತಿ ಜೀವನದಲ್ಲಿ ಪ್ರಾಮಾಣಿಕತೆ ಹಾಗೂ ಕರ್ತವ್ಯ ನಿಷ್ಠೆ ಈಶ ಮತ್ತು ದೇಶ ಸೇವೆಗೆ ಸಮವಾಗಿದೆ ಎಂದು ರೋಟರಿ ವೃತ್ತಿ ಸೇವಾ ವಿಭಾಗದ ವಲಯ ಸಂಯೋಜಕ ತುಕಾರಾಮ ಶೆಟ್ಟಿ ಹೇಳಿದರು.
ಮೂಲ್ಕಿ ರೋಟರಿಯ ವತಿಯಿಂದ ವೃತ್ತಿ ಮಾಸಾಚರಣೆಯ ಪ್ರಯುಕ್ತಮೂಲ್ಕಿ ಸಿ.ಎಸ್.ಐ. ಬಾಲಿಕಾಶ್ರಮದಲ್ಲಿ ನಡೆದ ಸಮಾರಂಭದಲ್ಲಿ ಸಮಾಜದ ವೃತ್ತಿಶ್ರೇಷ್ಠರನ್ನು ಗೌರವಿಸಿ ಮಾತನಾಡಿದರು.
ವ್ಯವಹಾರ ಜೀವನದಲ್ಲಿ ಸತ್ಯ ಪ್ರಾಮಾಣಿಕತೆ ಯೊಂದಿಗೆ ಕರ್ತವ್ಯ ನಡೆಸಿ ಇತರರಿಗೆ ಮಾದರಿ ವ್ಯಕ್ತಿತ್ವ ರೂಪಿಸಿದ ಸಾಧಕರು ಸ್ತುತ್ಯರ್ಹರು ಎಂದರು.
ಈ ಸಂದರ್ಭ ಶಿಮಂತೂರು ತಿಮ್ಮಪ್ಪ ರೈ (ಕೃಷಿಕ),ರಾಮಣ್ಣ (ತೋಟಗಾರಿಕೆ),ಕಮಲಾ (ಮೀನು ಮಾರಾಟ),ಶಂಕರ (ಅಂಚೆ ವಿತರಕರು) ಕಮಲಾಕ್ಷ (ಸುರ್ಶೂಶಕರು ಮೂಲ್ಕಿ ಸರ್ಕಾರಿ ಆಸ್ಪತ್ರೆ) ಇವರನ್ನು ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಕಿ ರೋಟರಿ ಅಧ್ಯಕ್ಷ ಜೋಯಲ್ ಹೆರಾಲ್ಡ್ ಡಿಸೋಜಾ ವಹಿಸಿದ್ದರು.
ಈ ಸಂದರ್ಭ ನೂತನ ಸದಸ್ಯರಾಗಿ ಐವನ್ ಜೆ. ಮೆಂಡೋನ್ಸಾ ಹಾಗೂ ರೇಮಂಡ್ ರೆಬೆಲ್ಲೋ ಅವರನ್ನುಸಹಾಯಕ ರಾಜ್ಯಪಾಲ ಎಂ.ಜಿ.ನಾಗೇಂದ್ರ ಸೇರ್ಪಡೆಗೊಳಿಸಿದರು. ಮೂಲ್ಕಿ ಸಿ.ಎಸ್.ಐ ಯುನಿಟಿ ಚರ್ಚು ಸಭಾಪಾಲಕ ರೆ.ಸಂತೋಷ್ ಕುಮಾರ್, ಸಿ.ಎಸ್.ಐ. ಬಾಲಿಕಾಶ್ರಮದ ವಾರ್ಡನ್ ರೆ.ಶಶಿಕಲಾ ಅಂಚನ್, ರೋಟರಿ ವಲಯ ನಿರ್ದೇಶಕ ಯೋಗೀಶ್ ಕೋಟ್ಯಾನ್, ಬಾಲಚಂದ್ರ ಸನಿಲ್, ವೃತ್ತಿ ಸೇವಾ ನಿರ್ದೇಶಕ ವೈ.ಎನ್.ಸಾಲ್ಯಾನ್,ಕಾರ್ಯದರ್ಶಿ ವಿಲ್‌ಹೆಲ್ಮ್ ಮಾಬೆನ್,ಎನ್.ಪಿ.ಶೆಟ್ಟಿ,ರವಿಚಂದ್ರ, ಅಬ್ದುಲ್ ರೆಹೆಮಾನ್ ಉಪಸ್ಥಿತರಿದ್ದರು.

Bhagyavan Sanil

Mulki-05111402

Comments

comments

Comments are closed.

Read previous post:
Mulki-05111401
ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವರಿಗೆ ಮೂಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ

ಮುಲ್ಕಿ : ಮೂಲ್ಕಿ ಸುಂದರರಾಮ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಹಾಗೂ ಮೂಲ್ಕಿ ಬಂಟರ ಸಂಘ ಪ್ರತೀ ವರ್ಷ ನೀಡುತ್ತಿರುವ ಮೂಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿಗೆ ಈ ವರ್ಷ...

Close