ಕಟೀಲು ತಾ.ಮಟ್ಟದ ಪ್ರತಿಭಾ ಕಾರಂಜಿ ಭ್ರಮರ-2014

 ಕಿನ್ನಿಗೋಳಿ : ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದ ಪ್ರತಿಬೆಗಳಿಗಿಂತ ಗ್ರಾಮೀಣ ಪ್ರತಿಭೆಗಳು ಹೆಚ್ಚಾಗಿ ಅನಾವರಣಗೊಳ್ಳುತ್ತಿದೆ. ಭಾವನಾತ್ಮಕ ಅಭಿರುಚಿಗಳನ್ನೊಳಗೊಂಡ ಗ್ರಾಮೀಣ ಪ್ರದೇಶಗಳ ಪ್ರತಿಭೆಗಳು ಸಂಸ್ಕಾರಪೂರಿತ ಪ್ರತಿಭಾ ಕಾರಂಜಿಗಳಾಗಬೇಕು ಎಂದು ದಕ್ಷಿಣಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿದರು.
ದ.ಕ. ಜಿಲ್ಲಾ ಪಂಚಾಯಿತಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಕಾರಿಯವರ ಕಛೇರಿ, ಮಂಗಳೂರು ತಾಲೂಕು ಉತ್ತರ ವಲಯ ಆಶ್ರಯದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿಪೂರ್ವ ಕಾಲೇಜು ಪ್ರೌಢಶಾಲೆಯಲ್ಲಿ ಬುಧವಾರ ನಡೆದ ಮಂಗಳೂರು ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಭ್ರಮರ-2014 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಟೀಲು ದೇವಳದ ಆನುವಂಶಿಕ ಮೊಕ್ತೇಸರರಾದ ವಾಸುದೇವ ಆಸ್ರಣ್ಣ ಹಾಗೂ ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನಗೈದರು.
ಮಂಗಳೂರು ತಾಲೂಕು ಪಂಚಾಯಿತಿ ಅಧ್ಯಕ್ಷೆ ರಜನಿ ಅಧ್ಯಕ್ಷತೆ ವಹಿಸಿದ್ದರು, ಈ ಸಂದರ್ಭ ಎಸ್.ಎಸ್.ಎಲ್.ಸಿಯಲ್ಲಿ ಅತ್ಯಕ ಅಂಕ ಗಳಿಸಿದ 6 ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ಗಳನ್ನು ವಿತರಿಸಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಈಶ್ವರ್ ಕಟೀಲ್, ಆಶಾ ರತ್ನಾಕರ ಸುವರ್ಣ, ತಾಲೂಕು ಪಂಚಾಯಿತಿ ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಕಟೀಲು ದೇವಳ ಪದವಿ ಕಾಲೇಜು ಪ್ರಿನ್ಸಿಪಾಲ್ ಎಂ. ಬಾಲಕೃಷ್ಣ ಶೆಟ್ಟಿ, ಪದವಿಪೂರ್ವ ಕಾಲೇಜು ಪ್ರಿನ್ಸಿಪಾಲ್ ಜಯರಾಮ ಪೂಂಜ, ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಮಾಲತಿ, ಅಲೋಶಿಯಸ್ ಡಿಸೋಜ, ಮಹಮ್ಮದ್ ಹನೀಫ್, ಭುಜಂಗ ಪೂಜಾರಿ, ಚಂದ್ರಶೇಖರ್, ತಾಲೂಕು ದೈಹಿಕ ಶಿಕ್ಷಣಾಕಾರಿ ರಘುನಾಥ್ ಉಪಸ್ಥಿತರಿದ್ದರು.
.ಮಂಗಳೂರು ಉತ್ತರ ವಲಯ ಕ್ಷೇತ್ರ ಶಿಕ್ಷಣಾಕಾರಿ ಲೋಕೇಶ್ ಸಿ ಸ್ವಾಗತಿಸಿದರು. ಕ್ಷೇತ್ರ ಸಮನ್ವಯಕಾರಿ ಪೀತಾಂಬರ ಕೆ. ಪ್ರಸ್ತಾವನೆಗೈದರು. ಕಟೀಲು ದೇವಳ ಪ್ರೌಢ ಶಾಲಾ ವೈಸ್ ಪ್ರಿನ್ಸಿಪಾಲ್ ಕೆ.ವಿ.ಶೆಟ್ಟಿ ವಂದಿಸಿದರು ಶಿಕ್ಷಕ ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು

Kinnigoli-05111412 Kinnigoli-05111413

Comments

comments

Comments are closed.

Read previous post:
Kinnigoli-05111410
ಅಕ್ರಮ ಅನ್ನಬಾಗ್ಯ ಅಕ್ಕಿ ವಶ

ಹಳೆಯಂಗಡಿ: ಹಳೆಯಂಗಡಿಯ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅನ್ನದಾಸೋಹದ ಅಕ್ಕಿಯನ್ನು ಬುಧವಾರ ಆಹಾರ ಇಲಾಖಾಧಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳು ವಶಪಡಿಸಿದ್ದಾರೆ. ಮಂಗಳೂರು ಆಹಾರ ಮತ್ತು ನಾಗರಿಕ ಇಲಾಖಾಧಿಕಾರಿಗಳು ಇಂದು ಹಳೆಯಂಗಡಿಯ...

Close