ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳ ವಾರ್ಷಿಕ ಕಲಾ ಪರ್ವ ಉದ್ಘಾಟನೆ.

ಕಿನ್ನಿಗೋಳಿ: ಯಕ್ಷಗಾನ ಕಲೆಯ ಮಹತ್ವ, ಸಾರ ಮತ್ತು ಕಲೆಯನ್ನು ಬೆಳಗಿಸುವಂತಹ ಕಲಾವಿದರು ಹಾಗೂ ಕಲಾ ಸಂಘಟಕರು ಹೆಚ್ಚಾದಾಗ ಕಲೆಯು ಜನಮಾನಸದಲ್ಲಿ ಉಳಿಯಬಲ್ಲುದು ಎಂದು ಕಟೀಲು ದೇವಳ ಅರ್ಚಕ ವೆ.ಮೂ. ವೆಂಕಟರಮಣ ಆಸ್ರಣ್ಣ ಹೇಳಿದರು.
ಕಟೀಲು ಸರಸ್ವತಿ ಸದನದಲ್ಲಿ ಶುಕ್ರವಾರ ನಡೆದ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಮೂರು ದಿನಗಳ ಕಾಲದ ವಾರ್ಷಿಕ ಕಲಾ ಪರ್ವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಟೀಲು ದೇವಳ ಅರ್ಚಕ ವೆ.ಮೂ. ಕಮಲಾದೇವಿಪ್ರಸಾದ ಆಸ್ರಣ್ಣ ಶುಭಾಶಂಸನೆಗೈದರು.
ಮಂಗಳೂರು ದುರ್ಗಾ ಫೆಸಿಲಿಟಿ ಸಂಸ್ಥೆಯ ನಿರ್ದೇಶಕ ಸಚ್ಚಿದಾನಂದ ಶೆಟ್ಟಿ ಬೊಂಡಾಲ ಅಧ್ಯಕ್ಷತೆ ವಹಿಸಿದ್ದರು.
ಪೆರ್ಮುದೆ ಸೋಮನಾಥೇಶ್ವರ ದೇವಸ್ಥಾನದ ಮೊಕ್ತೇಸರ ಶೇಖರ ಶೆಟ್ಟಿ, ಬಿ.ಕೆ ಸಂದೀಪ್, ಉದ್ಯಮಿಗಳಾದ ಬಾಬು ಎನ್. ಶೆಟ್ಟಿ, ಬಿ.ಡಿ. ರಾಮಚಂದ್ರ ಆಚಾರ್ಯ, ನಿಲೇಶ್ ಶೆಟ್ಟಿಗಾರ್, ರಾಘವೇಂದ್ರ ಆಚಾರ್ಯ ಉಪಸ್ಥಿತರಿದ್ದರು

ಶ್ರೀ ದುರ್ಗಾ ಮಕ್ಕಳ ಮೇಳದ ಅಧ್ಯಕ್ಷ ವೆ.ಮೂ. ಶ್ರಿಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿದರು.
ಮೂರು ದಿನಗಳ ಪರ್ಯಂತ 14 ಮಕ್ಕಳ ಯಕ್ಷಗಾನ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿವೆ.

Kinnigoli-07111404 Kinnigoli-07111405

 

Comments

comments

Comments are closed.

Read previous post:
Kinnigoli-07111403
ಸಾರ್ವಜನಿಕರ ಹೃದಯ ಗೆಲ್ಲುವಂತ ಸೇವೆ

ಮೂಲ್ಕಿ: ಸಾರ್ವಜನಿಕರ ಹೃದಯ ಗೆಲ್ಲುವಂತ ಉತ್ತಮ ಸೇವೆ ಲಯನ್ಸ್ ಕ್ಲಬ್ ಸದಸ್ಯರಿಂದ ನಡೆದರೆ ಮಾತ್ರ ಸೇವೆಗೆ ಉತ್ತಮ ಅರ್ಥ ಕಲ್ಪಿಸಬಹುದು ಎಂದು ಲಯನ್ಸ್ ಗವರ್ನರ್ ಎಚ್.ಎಸ್ ಮಂಜುನಾಥ...

Close