ಸಾರ್ವಜನಿಕರ ಹೃದಯ ಗೆಲ್ಲುವಂತ ಸೇವೆ

ಮೂಲ್ಕಿ: ಸಾರ್ವಜನಿಕರ ಹೃದಯ ಗೆಲ್ಲುವಂತ ಉತ್ತಮ ಸೇವೆ ಲಯನ್ಸ್ ಕ್ಲಬ್ ಸದಸ್ಯರಿಂದ ನಡೆದರೆ ಮಾತ್ರ ಸೇವೆಗೆ ಉತ್ತಮ ಅರ್ಥ ಕಲ್ಪಿಸಬಹುದು ಎಂದು ಲಯನ್ಸ್ ಗವರ್ನರ್ ಎಚ್.ಎಸ್ ಮಂಜುನಾಥ ಮೂರ್ತಿ ಹೇಳಿದರು.
ಮೂಲ್ಕಿ ಲಯನ್ಸ್ ಕ್ಲಬ್ ಅಧೀಕೃತ ಭೇಟಿಯ ಹಾಗೂ ಸ್ಥಾಪಕರ ದಿನಾಚರಣೆ ಪ್ರಯುಕ್ತ ನಡೆದ ಸಾಧಕರ ಸನ್ಮಾನ, ಸೇವಾ ಕಾರ್ಯಕ್ರಮಗಳ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಲಯನ್ಸ್ ಈ ಬಾರಿ ನಿರ್ಗತಿಕದ ಪೋಷಣೆ ಶೆಖ್ಷಣಿಕ,ಆರೋಗ್ಯ ಸಹಕಾರ ಪರಿಸರ ನೈರ್ಮಲ್ಯ, ಆಹಾರ ಪೋಲು ಕಡಿಮೆಯಾಗುವ ಬಗ್ಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪ್ರತೀಯೊಂದು ಕ್ಲಬ್ ಬಿಡುವಿನ ದಿನಗಳಲ್ಲಿ ಸಾರ್ವಜನಿಕ ಸೇವಾ ಸಂಸ್ಥೆಗಳನ್ನು ಸೇರಿಸಿ ಪರಿಸರ ಶುದ್ದಿಕರಣದಲ್ಲಿ ಭಾಗವಹಿಸಲಿದೆ ಎಂದರು.
ಮಾಜಿ ಲಯನ್ಸ್ ಗವರ್ನರ್ ಧರ್ಮದರ್ಶಿ ಹರಿಕೃಷ್ಣ ಪುನರೂರು ಶುಭಾಶಂಶನೆ ಗೈದು, ಮೋಜು ಜೀವನದ ಅವಿಭಾಜ್ಯ ಅಂಗವಲ್ಲ ಸೇವೆಯಿಂದ ಮಾತ್ರ ಮಾನಸಿಕ ನೆಮ್ಮದಿ ಸಾಧ್ಯ. ಸೇವೆಗೆ ಹಣ ಮುಖ್ಯವಲ್ಲ ಉತ್ತಮ ಮನಸ್ಸಿದ್ದರೆ ಅದು ಸಾಧ್ಯ ತಮ್ಮಿಂದಾದಷ್ಟು ಪರರಿಗೆ ಸಹಕಾರ ನೀಡುವುದು ಮಹತ್ತರವಾದ ಸೇವೆಯಾಗಿದೆ ಎಂದರು. ಈ ಸಂದರ್ಭ ಸಾಧಕರಾದ ಅಂತರಾಷ್ಟ್ರೀಯ ಕ್ರೀಡಾ ಪಟು ಪದ್ಮನಾಭ ಕುಮಾರ್,ಅಮೇರಿಕಾದ ಲಾಸ್ವೇಗಸ್ ನಲ್ಲಿ ವೈಟ್‌ಲಿಪ್ಟಿಂಗ್ ಸ್ಪರ್ದೆಯಲ್ಲಿ ಅವಳಿ ಚಿನ್ನದ ಪದಕ ಗಳಿಸಿದ ಪೋಲೀಸ್ ಇಲಾಖೆಯ ವಿಜಯ ಕಾಂಚನ್ ಮತ್ತು ಅಕ್ಷತಾ ಪೂಜಾರಿ ,ಪ್ರತಿಫಲಾಪೇಕ್ಷೆ ಇಲ್ಲದೆ ವಾಹನ ನಿಭಿಡತೆ ನಿರ್ವಹಿಸುವ ಪಾಣೇಲದ ಅಬ್ದುಲ್ ರವೂಫ್ ರವರಿಗೆ ಲಯನ್ಸ್ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಬಾವಿಗೆ ಬಿದ್ದಿರುವ ಮೂರು ಜನರನ್ನು ಏಕ ಕಾಲದಲ್ಲಿ ರಕ್ಷಿಸಿದ ನಾಗರಾಜ್ ಬಪ್ಪನಾಡು ರವರನ್ನು ಸನ್ಮಾನಿಸಲಾಯಿತು. ಸೇವಾ ಕಾರ್ಯಕ್ರಮವಾಗಿ ಮೂಲ್ಕಿ ಗಿರಿಜನ ಕಾಲನಿಯ ಸದಸ್ಯರಿಗೆ ಅಕ್ಕಿ ವಿತರಣೆ, ಮೂಲ್ಕಿ ರಿಕ್ಷಾ ಚಾಲಕರಿಗೆ ಅಫಘಾತ ವಿಮೆ,ತಲಾ 10 ಸಾವಿರದಂತೆ ಯಕ್ಷಗಾನ ಕಲಾವಿದ ಚಂದ್ರಹಾಸ ತುಂಬೆ ಯವರ ಮನೆ ನಿರ್ಮಾಣಕ್ಕಾಗಿ ಧನ ಸಹಾಯ, ಶಾರದಾ ರವರ ಹೃದಯ ಕಾಯಿಲೆ ಚಿಕಿತ್ಸೆಗೆ ಧನ ಸಹಾಯ,ಶಾಂತಾ ಬಿ.ರಾವ್ ರವರ ಮೆದುಳಿನ ಚಿಕಿತ್ಸೆ ಗಾಗಿ ಧನ ಸಹಾಯ ನೀಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಕಿ ಲಯನ್ಸ್ ಅಧ್ಯಕ್ಷ ದೇವಪ್ರಸಾದ್ ಪುನರೂರು ವಹಿಸಿದ್ದರು. ಲಯನ್ಸ್ ಜಿಲ್ಲಾ ಪ್ರಥಮ ಮಹಿಳೆ ನಂದಿನಿ ಮೂರ್ತಿ, ಕ್ಯಾಬಿನೆಟ್ ಸೆಕ್ರೆಟರಿ ಅಶೋಕ್‌ಕುಮಾರ್, ಪ್ರಾಂತೀಯ ಅಧ್ಯಕ್ಷ ಹರೀಶ್ ಪುತ್ರನ್, ಲಯನೆಸ್ ಅಧ್ಯಕ್ಷೆ ಶ್ರೇಯಾ ಪುನರೂರು.ಕೋಶಾಕಾರಿ ಎನ್.ಪಿ. ಕಾಮತ್, ಕಾರ್ಯದರ್ಶಿ ವಿಜಯಕುಮಾರ್ ಕುಬೆವೂರು, ನಿಯೋಜಿತ ಗವರ್ನರ್ ಕವಿತಾ ಶಾಸ್ತ್ರಿ, ಸಂತೋಷ್ ಕುಮಾರ್ ಶಾಸ್ತ್ರಿ,ಲಿಯೋ ಕವನ್ ರಾಜ್ ಕುಬೆವೂರು,ಚಿತ್ರಾ ಪಿ.ಕಾಮತ್ ಮತ್ತು ವಿವಿಧ ಕಡೆಗಳಿಂದ ಆಗಮಿಸಿದ ಕ್ಯಾಬೆನೇಟ್ ಸದಸ್ಯರು ಉಪಸ್ಥಿತರಿದ್ದರು.
ದೇವಪ್ರಸಾದ್ ಪುನರೂರು ಸ್ವಾಗತಿಸಿದರು, ಉದಯ ಅಮೀನ್ ಮಟ್ಟು ನಿರೂಪಿಸಿದರು. ವಿಜಯ ಕುಮಾರ್ ಕುಬೆವೂರು ವಂದಿಸಿದರು.

Arun Ullanje

Kinnigoli-07111403

Comments

comments

Comments are closed.

Read previous post:
Kinnigoli-07111402
ಪ್ರತಿಭಾ ಕಾರಂಜಿ ಭ್ರಮರ 2014 ಸಮಾರೋಪ

ಕಿನ್ನಿಗೋಳಿ: ವಿದ್ಯಾರ್ಥಿಗಳು ವಿದ್ಯಾರ್ಜನೆಯೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಕೂಡಾ ಭಾಗವಹಿಸಿದಾಗ ಭೌದ್ಧಿಕ ಮತ್ತು ಮಾನಸಿಕವಾಗಿ ವಿಕಸನಗೊಳ್ಳುತ್ತಾರೆ ಎಂದು ಕಟೀಲು ಶಿಕ್ಷಣ ಸಂಸ್ಥೆಗಳ ಸಂಚಾಲಕ ವೆ.ಮೂ. ವಾಸುದೇವ ಆಸ್ರಣ್ಣ ಹೇಳಿದರು. ದ.ಕ....

Close