ಬಿಜೆಪಿ ಪ್ರಶಿಕ್ಷಣ ಪರಿಚಯ ವರ್ಗ ಕಾರ್ಯಾಗಾರ

ಕಿನ್ನಿಗೋಳಿ: ಸಮೃದ್ಧ ಸ್ವಾಭಿಮಾನಿ ಶಕ್ತಿಶಾಲಿ ಭಾರತ ನಿರ್ಮಾಣ ಮಾಡಬೇಕಾದರೆ ಪರಿಪಕ್ವ ಯೋಚನೆ ಯೋಜನೆ ಚಿಂತನ ಮಂಥನ ನಡೆಸಿ ಕಾರ್ಯೋನ್ಮುಖರಾಗಬೇಕು ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಭಾರತೀಯ ಜನತಾ ಪಾರ್ಟಿಯ ಮೂಡಬಿದಿರೆ ಮಂಡಲದ ಆಶ್ರಯದಲ್ಲಿ ಶನಿವಾರ ಪುನರೂರು ಶ್ರೀವಿಶ್ವನಾಥ ದೇವಳ ಸಭಾಭವನದಲ್ಲಿ ನವೆಂಬರ ೮ ಹಾಗೂ ನಡೆಯುತ್ತಿರುವ ಪ್ರಶಿಕ್ಷಣ ಪರಿಚಯ ವರ್ಗ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ನಾವು ಪಕ್ಷವನ್ನು ಕಟ್ಟುವ ಬೆಳೆಸುವ ಹಾಗೂ ಪಕ್ಷದ ಸಿದ್ಧಾಂತಗಳ ಬಗ್ಗೆ ಮನನ ಮಾಡಿ ಜನಪಯೋಗಿ ಕೆಲಸ ಅಲ್ಲದೆ ಜನರ ಕಷ್ಟಗಳ ಬಗ್ಗೆ ಶ್ರಮ ವಹಿಸಿ ಪರಿಹಾರ ಕಂಡು ಹುಡುಕುವಲ್ಲಿ ಕಾರ್ಯಕರ್ತರ ಪಾತ್ರ ಮಹತ್ತರವಾದುದು ಈ ಶಿಬಿರ ಪೂರಕವಾಗಲಿ ಎಂದು ಹೇಳಿದರು.
ಜಿಲ್ಲಾ ಉಪಾಧ್ಯಕ್ಷರಾದ ಉಮಾನಾಥ ಕೋಟ್ಯಾನ್, ಕಸ್ತೂರಿ ಪಂಜ, ಗೋಪಾಲಕೃಷ್ಣ ಹೇರಳೆ, ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬಂಗೇರಾ, ಪ್ರಭಾರಿ ಶಾಂತಾ ಉಪಸ್ಥಿತರಿದ್ದರು.
ವರ್ಗ ಪ್ರಮುಖ್ ಭೋಜರಾಜ ಶೆಟ್ಟಿ ಸ್ವಾಗತಿಸಿದರು. ಮೂಡಬಿದ್ರಿ ಮಂಡಲದ ಅಧ್ಯಕ್ಷ ಕೆ. ಪಿ. ಸುಚರಿತ ಶೆಟ್ಟಿ ಪ್ರಸ್ತಾವನೆಗೈದರು. ನಾಗರಾಜ್ ವಂದಿಸಿದರು. ಗಣೇಶ್ ಆರ್.ಬಿ. ಕಾರ್ಯಕ್ರಮ ನಿರೂಪಿಸಿದರು.

ಪಡಿತರ ಚೀಟಿ ವಿತರಣೆಯಲ್ಲಿ ಕಾಂಗ್ರೆಸ್ ಸರಕಾರ ತಾರತಮ್ಯ
ಬಡವರ ಪಕ್ಷ ಎಂದು ಪ್ರತಿಬಿಂಬಿಸುತ್ತಿದ್ದ ರಾಜ್ಯದ ಕಾಂಗ್ರೆಸ್ ಸರಕಾರ ಬಡವರ ಪಾಲಿಗೆ ತಾರತಮ್ಯವೆಸಗುತ್ತಿದೆ. ಬಡ ವರ್ಗದಿಂದ ಬಂದ ಸಿದ್ದರಾಮಯ್ಯ ಬಡವರ ಪಾಲಿಗೆ ತದ್ವಿರುದ್ಧವಾಗಿದ್ದಾರೆ. ರಾಜ್ಯದಲ್ಲಿ ೩೫ ಲಕ್ಷ ಪಡಿತರ ಚೀಟಿಗಳನ್ನು ಎಪಿಕ್ ಹಗೂ ಆಧಾರ್ ಮೇಸೆಜ್ ಅಂತ ನೆಪದಲ್ಲಿ ಪಡಿತರ ಬೀಟಿಗಳನ್ನು ರದ್ದು ಮಾಡುವ ಹುನ್ನಾರ ಆಗುತ್ತಿದೆ. ಅನ್ನಭಾಗ್ಯ ಯೋಜನೆಯ ನೆಪದಲ್ಲಿ ಅಕ್ಕಿ ಅಕ್ರಮ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಉಳ್ಳವರು ಲಾಭ ಗಳಿಸುತ್ತಿದ್ದಾರೆ. ನಾವು ಪ್ರತಿಭಟಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Kinnigoli--08111403 Kinnigoli--08111404

Comments

comments

Comments are closed.

Read previous post:
Kinnigoli--08111402
ಕೆಂಚನಕೆರೆ ಸ್ವಚ್ಚತಾ ಅಭಿಯಾನ

ಕಿನ್ನಿಗೋಳಿ: ಕೆಂಚನಕೆರೆ ಹಿರಿಯ ಪ್ರಾಥಮಿಕ ಸರಕಾರಿ ಶಾಲೆಯಲ್ಲಿ ಕಿಲ್ಪಾಡಿ ಗ್ರಾಮ ಪಂಚಾಯತ್ ಸಹಯೋಗದತ್ವದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಜಿ. ಪಂ. ಸದಸ್ಯೆ ಆಶಾ ರತ್ನಾಕರ ಸುವರ್ಣ ಉದ್ಘಾಟಿಸಿದರು. ಕಿಲ್ಪಾಡಿ...

Close