ಕಿನ್ನಿಗೋಳಿ ಪರಿಸರದಲ್ಲಿ ಡೆಂಗ್ಯು, ಮಲೇರಿಯ ಜ್ವರ

images

ಕಿನ್ನಿಗೋಳಿ: ಕಿನ್ನಿಗೋಳಿ ಪರಿಸರದ ಗ್ರಾಮಗಳಲ್ಲಿ ನವೆಂಬರ್ ಮೊದಲ ವಾರದಿಂದ ಡೆಂಗ್ಯು ಹಾಗೂ ಮಲೇರಿಯ ಜ್ವರ ಹೆಚ್ಚಾಗಿ ಕಂಡು ಬರುತ್ತಿದೆ. ನವಂಬರ 1 ರಿಂದ ನ. 7 ರವರೆಗೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ 12 ಡೆಂಗ್ಯು ಹಾಗೂ 4 ಮಲೇರಿಯ ಜ್ವರಕ್ಕೆ ದಾಖಾಲಾಗಿದ್ದಾರೆ ಕಳೆದ ಜೂನ್ ನಿಂದ ಅಕ್ಟೋಬರ್ ವರೆಗೆ ತಿಂಗಳಿಗೆ ಸುಮಾರು 30ರಿಂದ 40 ಮಂದಿ ಡೆಂಗ್ಯು ಹಾಗೂ ಜ್ವರ ಬಾಧಿತರು ದಾಖಾಲಾಗಿ ಗುಣಮುಖ ಹೊಂದಿದ್ದಾರೆ. ಎಂದು ಆಸ್ಪತ್ರೆಯ ಮೂಲ ತಿಳಿಸಿದೆ. ಶುಕ್ರವಾರ ನಾಲ್ಕು ಮಂದಿ ಡೆಂಗ್ಯು ಜ್ವರದವರು ದಾಖಾಲಾಗಿದ್ದರೆ. ಕಳೆದ ನಾಲ್ಕು ತಿಂಗಳಲ್ಲಿ ಪಾಲಡ್ಕ, ಕಟೀಲು, ಐಕಳ, ಕೆಮ್ರಾಲ್ ಬಳ್ಕುಂಜೆ, ಲಿಂಗಪ್ಪಯ್ಯ ಕಾಡು ಕಿನ್ನಿಗೋಳಿ ಮತ್ತಿತರ ಊರುಗಳ ಜನರು ಆಸ್ಪತ್ತೆಗೆ ದಾಖಾಲಾಗಿದ್ದರು.
ನವೆಂಬರ್ ತಿಂಗಳಲ್ಲಿ ಮಳೆ ಕಡಿಮೆ ಪ್ರಮಾಣದಲ್ಲಿ ಸುರಿಯುತ್ತಿರುವ ಕಾರಣ ವೈರಸ್ ಜ್ವರ, ಡೆಂಗ್ಯು ಹಾಗೂ ಮಲೇರಿಯಾ ಜ್ವರ ಹೆಚ್ಚಾಗುತ್ತಿದ್ದು. ನಾಗರೀಕರು ಮುಂಜಾರೂಗತೆಗಾಗಿ ಪರಿಸರ ಸ್ವಚ್ಚತೆ ಕಾಪಾಡಬೇಕಾಗಿದೆ. ಆರೋಗ್ಯ ಇಲಾಖೆಯು ತಕ್ಷಣ ಸರ್ವೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕೆಮ್ರಾಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಭಾಸ್ಕರ ಕೋಟ್ಯಾನ್ ಹಾಗೂ ಕಟೀಲು ಪ್ರಾ. ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ತಿಳಿಸಿದ್ದಾರೆ.
ಫಾಗಿಂಗ್ ವ್ಯವಸ್ಥೆ :
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವತಿಯಿಂದ ಕಿನ್ನಿಗೋಳಿ ಬಸ್ ನಿಲ್ದಾಣದ ಪರಿಸರದಲ್ಲಿ ಮುಂಜಾಗರೂಕತೆಯ ಉzಶದಿಂದ ಶುಕ್ರವಾರ ಹಾಗೂ ಶನಿವಾರ ಸಂಜೆ ಹೊಗೆ ಯಂತ್ರ ಬಳಸಿ ಫಾಗಿಂಗ್ ಮಾಡಲಾಗಿದೆ ಎಂದು ಕಿನ್ನಿಗೋಳಿ ಗ್ರಾ. ಪಂ. ಅಧ್ಯಕ್ಷೆ ಶ್ಯಾಮಲ ಪಿ. ಹೆಗ್ಡೆ ತಿಳಿಸಿದ್ದಾರೆ.

Comments

comments

Comments are closed.

Read previous post:
Mulki-08111401
ಮೂಲ್ಕಿ ಬಿಲ್ಲವ ಸಂಘದಲ್ಲಿ ಸಮಾಲೋಚನಾ ಸಭೆ

ಮೂಲ್ಕಿ: ಕರ್ನಾಟಕ ಸರ್ಕಾರದಿಂದ ಹೊರನಾಡ ಕನ್ನಡಿಗ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ರಾಷ್ತ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಹಾಗೂ ಭಾರತ್ ಕೋ ಅಪರೇಟಿವ್ ಬ್ಯಾಂಕಿನ ಚೆಯರ್ ಮೆನ್ ಜಯ ಸಿ...

Close