ಮೂಲ್ಕಿ ಬಿಲ್ಲವ ಸಂಘದಲ್ಲಿ ಸಮಾಲೋಚನಾ ಸಭೆ

ಮೂಲ್ಕಿ: ಕರ್ನಾಟಕ ಸರ್ಕಾರದಿಂದ ಹೊರನಾಡ ಕನ್ನಡಿಗ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ರಾಷ್ತ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಹಾಗೂ ಭಾರತ್ ಕೋ ಅಪರೇಟಿವ್ ಬ್ಯಾಂಕಿನ ಚೆಯರ್ ಮೆನ್ ಜಯ ಸಿ ಸುವರ್ಣರಿಗೆ  ಮೂಲ್ಕಿಯಲ್ಲಿ ಸಾರ್ವಜನಿಕ ಪೌರ ಸನ್ಮಾನ ಮಾಡುವ ಬಗ್ಗೆ ಸನ್ಮಾನದ ಪೂರ್ವಭಾವಿಯಾಗಿ ಮೂಲ್ಕಿ ಬಿಲ್ಲವ ಸಂಘದಲ್ಲಿ ಜರಗಿದ ಸಮಾಲೋಚನಾ ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಎಲ್ಲರೂ ಒಗ್ಗಟ್ಟಾಗಿ ಸನ್ಮಾನದ ಕೆಲಸವನ್ನು ಮಾಡಿ ಊರಿನ ಗೌರವವನ್ನು ಕೊಡೋಣ. ಹಿರಿಯರಾದ ಜಯಸುವರ್ಣರಿಗೆ ಪ್ರಶಸ್ತಿ ಬಂದದ್ದು ಊರಿಗೇ ಸಂದ ಗೌರವ ಕಳೆದ ಹಲವಾರು ವರ್ಷಗಳಿಂದ ಸಮಾಜ ಸೇವೆ ಮಾಡುತ್ತಾ ಜನರ ಕಷ್ಟ ಸುಖಗಳನ್ನು ಅರಿತ ಜಯಸುವರ್ಣರು ಮೇರು ಪ್ರಶಸ್ತಿಗೆ ಅರ್ಹನಾದ ವ್ಯಕ್ತಿ ಎಂದು ಹೇಳಿದರು.
ನ.17 ರಂದು ನಡೆಯುವ ಕಾರ‍್ಯಕ್ರಮಗಳ ಬಗ್ಗೆ ರೂಪುರೇಷೆಗಳನ್ನು ಚರ್ಚಿಸಲಾಯಿತು. ಬಪ್ಪನಾಡು ದೇವಸ್ಥಾನದಿಂದ ಸನ್ಮಾನ ನಡೆಯುವ ಮೂಲ್ಕಿ ರುಕ್ಕರಾಮ ಸಾಲ್ಯಾನ್ ಸಭಾಗೃಹದವರೆಗೆ ಮೆರವಣಿಗೆಯಲ್ಲಿ ಸನ್ಮಾನಿತರನ್ನು ಕರೆದುಕೊಂಡು ಬರುವುದಾಗಿ ತೀರ್ಮಾನಿಸಲಾಯಿತು. ಸಭೆಯಲ್ಲಿ ವಿವಿಧ ಧರ್ಮಗುರುಗಳು, ಸಂಸದ ನಳಿನ್ ಕುಮಾರ ಕಟೀಲು, ಸಚಿವ ಕೆ ಅಭಯಚಂದ್ರ ಜೈನ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಸಹಿತ ಇನ್ನಿತರರನ್ನು ಆಮಂತ್ರಿಸುವುದಾಗಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಯ್ಯೊಟ್ಟು ಸದಾಶಿವ ಸಾಲ್ಯಾನ್,ರಾಷ್ತ್ರೀಯ ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ ಪ್ರಭಾಕರ ಬಂಗೇರ,ಹಿರಿಯ ನಾಗರಿಕ ನೂರ್ ಮಹಮದ್, ಮೂಲ್ಕಿ ನಾಲ್ಕು ಪಟ್ನ ಮೊಗವೀರ ಸಭಾದ ಭಾಸ್ಕರ ಪುತ್ರನ್,ನಾಗೇಶ ಬಪ್ಪನಾಡು,ಚಂದ್ರ ಶೇಖರ ಸುವರ್ಣ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಹರಿಶ್ಚಂದ್ರ ಸಾಲ್ಯಾನ್,ಮೂಲ್ಕಿ ನಗರ.ಪಂಚಾಯತ್ ಸದಸ್ಯ ಯೋಗೀಶ ಕೋಟ್ಯಾನ್, ಮತ್ತಿತರರು ಉಪಸ್ಥಿತರಿದ್ದರು.

Prakash Suvarna

Mulki-08111401

Comments

comments

Comments are closed.

Read previous post:
Kinnigoli-07111404
ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳ ವಾರ್ಷಿಕ ಕಲಾ ಪರ್ವ ಉದ್ಘಾಟನೆ.

ಕಿನ್ನಿಗೋಳಿ: ಯಕ್ಷಗಾನ ಕಲೆಯ ಮಹತ್ವ, ಸಾರ ಮತ್ತು ಕಲೆಯನ್ನು ಬೆಳಗಿಸುವಂತಹ ಕಲಾವಿದರು ಹಾಗೂ ಕಲಾ ಸಂಘಟಕರು ಹೆಚ್ಚಾದಾಗ ಕಲೆಯು ಜನಮಾನಸದಲ್ಲಿ ಉಳಿಯಬಲ್ಲುದು ಎಂದು ಕಟೀಲು ದೇವಳ ಅರ್ಚಕ ವೆ.ಮೂ....

Close